ಬೆಂಗಳೂರು : ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರ ಪಿಂಚಣಿದಾರರಿಗೆ ಉಡುಗೊರೆ ಘೋಷಣೆ ಮಾಡಿದೆ. 80 ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿ ಪ್ರಯೋಜನವನ್ನು ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಸರ್ಕಾರ  ಹೊರಡಿಸಿದ ಸುತ್ತೋಲೆ ಪ್ರಕಾರ, ಪಿಂಚಣಿದಾರರು ಸಹಾನುಭೂತಿ ಭತ್ಯೆ ಎಂಬ ಹೆಚ್ಚುವರಿ ಪಿಂಚಣಿ ಪಡೆಯುತ್ತಾರೆ.


COMMERCIAL BREAK
SCROLL TO CONTINUE READING

ಪಿಂಚಣಿ ಸಚಿವಾಲಯ 80 ವರ್ಷ ವಯಸ್ಸನ್ನು ತಲುಪಿದ ನಿವೃತ್ತ ಕೇಂದ್ರ ಸರ್ಕಾರಿ ನಾಗರಿಕ ಸೇವಾ ನೌಕರರಿಗೆ ಪಿಂಚಣಿ ಕುರಿತು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.ಈ ಹೆಚ್ಚುವರಿ ಭತ್ಯೆಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವುದು ಮಾರ್ಗಸೂಚಿಗಳ ಉದ್ದೇಶವಾಗಿದೆ. CCS (ಪಿಂಚಣಿ) ನಿಯಮಗಳು 2021 ರ ನಿಯಮ 44 ರ ಉಪ ನಿಯಮ 6ರ ನಿಬಂಧನೆಗಳ ಪ್ರಕಾರ, ನಿವೃತ್ತ ಸರ್ಕಾರಿ ನೌಕರನು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸನ್ನು ಪೂರ್ಣಗೊಳಿಸಿದ ನಂತರ ನಿಯಮಗಳ ಅಡಿಯಲ್ಲಿ ಪಿಂಚಣಿ ಮತ್ತು ಅನುಕಂಪದ ಭತ್ಯೆಯನ್ನು ನೀಡಲಾಗುತ್ತದೆ.


ಇದನ್ನೂ ಓದಿ : ಬಿ‌ಪಿ‌ಎಲ್, ಅಂತ್ಯೋದಯ ಅನ್ನ ಯೋಜನೆಯಲ್ಲಿ ಭಾರೀ ಬದಲಾವಣೆ: ನೇರ ನಗದು ಪಾವತಿ ಬಂದ್!


80 ವರ್ಷಕ್ಕಿಂತ ಮೇಲ್ಪಟ್ಟ ಪಿಂಚಣಿದಾರರಿಗೆ ಪ್ರಯೋಜನಗಳು : 
ಇದರ ಪ್ರಕಾರ, 80 ರಿಂದ 85 ವರ್ಷ ವಯಸ್ಸಿನ ಹಿರಿಯ ನಾಗರಿಕರು ಮೂಲ ಪಿಂಚಣಿಯ 20 ಪ್ರತಿಶತಕ್ಕೆ ಅರ್ಹರಾಗಿದ್ದರೆ, 85 ರಿಂದ 90 ವರ್ಷ ವಯಸ್ಸಿನ ಪಿಂಚಣಿದಾರರು 30 ಪ್ರತಿಶತವನ್ನು ಪಡೆಯುತ್ತಾರೆ. 90 ರಿಂದ 95 ವರ್ಷ ವಯಸ್ಸಿನ ಹಿರಿಯ ನಾಗರಿಕರು ಮೂಲ ಪಿಂಚಣಿಯ ಶೇಕಡಾ 40 ರಷ್ಟು ಮೊತ್ತ ಪಡೆಯುತ್ತಾರೆ. 95 ರಿಂದ 100 ವರ್ಷ ವಯಸ್ಸಿನ ಜನರು ಶೇಕಡಾ 50 ರಷ್ಟು ಹಣವನ್ನು ಪಡೆಯುತ್ತಾರೆ. 100 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೂಪರ್ ಸೀನಿಯರ್‌ಗಳು ಮೂಲ ಪಿಂಚಣಿಯ 100 ಪ್ರತಿಶತಕ್ಕೆ ಅರ್ಹರಾಗಿರುತ್ತಾರೆ.


ಇದಲ್ಲದೆ, ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಅಧಿಸೂಚನೆಯಲ್ಲಿ ಹೆಚ್ಚುವರಿ ಪಿಂಚಣಿ ಅಥವಾ ಅನುಕಂಪದ ಭತ್ಯೆಯು ಪಿಂಚಣಿದಾರನು ನಿಗದಿತ ವಯಸ್ಸನ್ನು ತಲುಪುವ ತಿಂಗಳ ಮೊದಲ ದಿನದಿಂದ ಜಾರಿಗೆ ಬರಲಿದೆ ಎಂದು ಹೇಳುತ್ತದೆ. ಈ ಹೆಚ್ಚುವರಿ ಪಿಂಚಣಿ ಪಾವತಿಯನ್ನು ಪಿಂಚಣಿದಾರರು ವಯಸ್ಸಾದಂತೆ ಹೆಚ್ಚುತ್ತಿರುವ ಜೀವನ ವೆಚ್ಚವನ್ನು ನಿರ್ವಹಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ.


ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಜಾಕ್ ಪಾಟ್ !ವೇತನ ರಚನೆಯ ನಿಯಮದಲ್ಲಿಯೇ ಬದಲಾವಣೆ! ಮೂಲ ವೇತನ 34,560 ರೂಪಾಯಿಗೆ ಏರಿಕೆ !


ಎಲ್ಲಾ ಅರ್ಹ ಪಿಂಚಣಿದಾರರು ತಮ್ಮ ಸರಿಯಾದ ಪ್ರಯೋಜನಗಳನ್ನು ವಿಳಂಬವಿಲ್ಲದೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಪಿಂಚಣಿ ಮತ್ತು ಪಿಂಚಣಿ ವಿತರಣೆಯಲ್ಲಿ ತೊಡಗಿರುವ ಎಲ್ಲಾ ಇಲಾಖೆಗಳು ಮತ್ತು ಬ್ಯಾಂಕುಗಳು ಬದಲಾವಣೆಗಳ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡಲು ಸೂಚಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.