7th pay commission : ಲಕ್ಷಗಟ್ಟಲೆ ಕೇಂದ್ರ ಸರ್ಕಾರಿ ನೌಕರರಿಗೆ ಬಹು ದೊಡ್ಡ ಹೊಡೆತ ಬಿದ್ದಿದೆ.ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತುಟ್ಟಿ ಭತ್ಯೆ (DA) ಹೆಚ್ಚಳದಿಂದಾಗಿ ನಿವೃತ್ತಿ ಗ್ರಾಚ್ಯುಟಿ ಮತ್ತು ಮರಣ ಗ್ರಾಚ್ಯುಟಿಯಲ್ಲಿನ ಶೇಕಡಾ 25 ರಷ್ಟು ಹೆಚ್ಚಳದ ಹಿಂದಿನ ಅಧಿಸೂಚನೆಯನ್ನು ತಡೆಹಿಡಿದಿದೆ. 


COMMERCIAL BREAK
SCROLL TO CONTINUE READING

ಇಪಿಎಫ್‌ಒ, 2024ರ ಮೇ 7ರಂದು ತನ್ನ ಇತ್ತೀಚಿನ ಅಧಿಸೂಚನೆಯಲ್ಲಿ, ಉದ್ಯೋಗಿಗಳಿಗೆ ನಿವೃತ್ತಿ ಮತ್ತು ಮರಣ ಗ್ರಾಚ್ಯುಟಿ ಹೆಚ್ಚಳವನ್ನು 'ಮುಂದೂಡಲು'ನಿರ್ಧರಿಸಿದೆ ಎಂದು ಹೇಳಿದೆ. 


ಇದನ್ನೂ ಓದಿ : Railway Station Shop Tender: ರೈಲು ನಿಲ್ದಾಣದಲ್ಲಿ ಸ್ಟಾಲ್ ತೆರೆಯಲು ಟೆಂಡರ್ ಪಡೆಯುವುದೇಗೆ? ಬಾಡಿಗೆ ಎಷ್ಟು?


ಈ ಹಿಂದೆ ಯಾವ ಅಧಿಸೂಚನೆ ಹೊರಡಿಸಲಾಗಿತ್ತು?: 
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಏಪ್ರಿಲ್ 30,2024 ರಂದು ಅಧಿಸೂಚನೆಯನ್ನು ಹೊರಡಿಸಿತ್ತು.ತುಟ್ಟಿಭತ್ಯೆ ಮೂಲ ವೇತನದ 50% ಕ್ಕೆ ಹೆಚ್ಚಾದಾಗ ನಿವೃತ್ತಿ ಗ್ರಾಚ್ಯುಟಿ ಮತ್ತು ಮರಣ ಗ್ರಾಚ್ಯುಟಿಯ ಗರಿಷ್ಠ ಮಿತಿಯನ್ನು 25% ಹೆಚ್ಚಿಸಲಾಗುತ್ತದೆ .


ಕೇಂದ್ರ ಸರ್ಕಾರಿ ನೌಕರರಿಗೆ ಮೂಲ ವೇತನದ 50% ವರೆಗೆ ಪಾವತಿಸಬೇಕಾದ ತುಟ್ಟಿಭತ್ಯೆಯ ಪರಿಷ್ಕರಣೆಯಿಂದಾಗಿ,ನಿವೃತ್ತಿ ಗ್ರಾಚ್ಯುಟಿ ಮತ್ತು ಮರಣ ಗ್ರಾಚ್ಯುಟಿಯ ಗರಿಷ್ಠ ಮಿತಿಯು  25% ರಷ್ಟು ಅಂದರೆ ಈಗಿರುವ 20 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಾಗುತ್ತದೆ ಎಂದು EPFO ​​ಹೇಳಿತ್ತು.ಆದರೆ, ಇತ್ತೀಚಿನ ಇಪಿಎಫ್‌ಒ ಹೊರಡಿಸಿದ ಇತ್ತೀಚಿನ ಅಧಿಸೂಚನೆಯ ಪ್ರಕಾರ ಪ್ರಸ್ತುತ  ಸರ್ಕಾರವು ಅಂಥಹ ಯಾವುದೇ ರೀತಿಯ ಪ್ರಸ್ತಾಪವನ್ನು ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ : ಬದಲಾಗಿದೆ EPFO ನಿಯಮ : ಖಾತೆದಾರನ ಮರಣದ ನಂತರ ಆಧಾರ್ ಇಲ್ಲದಿದ್ದರೂ ಹಣ ಪಡೆಯಬಹುದು ನಾಮಿನಿ


ಕೇಂದ್ರ ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ ಎಂದರೇನು? : 
ಗ್ರಾಚ್ಯುಟಿ ಎಂಬುದು ಉದ್ಯೋಗದಾತರಿಂದ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ನಿರಂತರ ಸೇವೆಗಳಿಗಾಗಿ ಉದ್ಯೋಗಿಗೆ ನೀಡುವ ವ್ಯಾಖ್ಯಾನಿತ ಪ್ರಯೋಜನ ಯೋಜನೆಯಾಗಿದೆ.ಗ್ರಾಚ್ಯುಟಿ ಪಾವತಿ ಕಾಯಿದೆ, 1972ರ ಪ್ರಕಾರ, ಕನಿಷ್ಠ ಐದು ವರ್ಷಗಳ ಕಾಲ ಸಂಸ್ಥೆಯಲ್ಲಿ ನಿರಂತರ ಸೇವೆ ಸಲ್ಲಿಸಿದ್ದಲ್ಲಿ ಉದ್ಯೋಗಿ ಗ್ರಾಚ್ಯುಟಿ ಪಡೆಯಬಹುದು.'


ಈ ವರ್ಷದ ಮಾರ್ಚ್ 7 ರಂದು ಒಟ್ಟು ಡಿಎ ಹೆಚ್ಚಳವು ಶೇಕಡಾ 50 ಕ್ಕೆ ತಲುಪಿದೆ.ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (DA) ಪಿಂಚಣಿದಾರರಿಗೆ ಡಿಯರ್ನೆಸ್ ರಿಲೀಫ್ (DR) ಅನ್ನು ಜನವರಿ 1, 2024 ರಿಂದ 4% ರಷ್ಟು ಹೆಚ್ಚಿಸಿದೆ. ಇದರೊಂದಿಗೆ ಒಟ್ಟು ಡಿಎ ಶೇ.50ಕ್ಕೆ ಏರಿಕೆಯಾಗಿದೆ.ಡಿಎ ಹೆಚ್ಚಳದ ಜೊತೆಗೆ ಸಾರಿಗೆ ಭತ್ಯೆ, ಕ್ಯಾಂಟೀನ್ ಭತ್ಯೆ ಮತ್ತು ಡೆಪ್ಯುಟೇಶನ್ ಭತ್ಯೆಯಂತಹ ಇತರ ಭತ್ಯೆಗಳನ್ನು ಸಹ ಶೇಕಡಾ 25 ರಷ್ಟು ಹೆಚ್ಚಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.