EPFO Rules: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ- ಇಪಿಎಫ್ಒ ತನ್ನ ಖಾತೆದಾರರಿಗೆ ಅನುಕೂಲವಾಗುವಂತೆ ಇತ್ತೀಚಿನ ದಿನಗಳಲ್ಲಿ ಹಲವು ನಿಯಮಗಳನ್ನು ಸುಲಭಗೊಳಿಸಿದೆ. ಇದರಿಂದಾಗಿ,  ಭವಿಷ್ಯ ನಿಧಿಯಲ್ಲಿ ಠೇವಣಿ ಮಾಡಿದ ಹಣದ ವರ್ಗಾವಣೆಯಾಗಲಿ ಅಥವಾ ಹಿಂಪಡೆಯುವುದಾಗಲಿ ತುಂಬಾ ಸುಲಭವಾಗಿದೆ. ಇದಲ್ಲದೆ, ಲಾಯಲ್ಟಿ-ಕಮ್-ಲೈಫ್ ಪ್ರಯೋಜನಕ್ಕೆ ಸಂಬಂಧಿಸಿದಂತೆಯೂ ಇಪಿಎಫ್ಒ ಕೆಲವು ನಿಯಮಗಳನ್ನು ಬದಲಾಯಿಸಿದ್ದು, ಇದರಲ್ಲಿ ಷರತ್ತುಗಳನ್ನು ಪೂರೈಸುವುದರಿಂದ ಖಾತೆದಾರರು ನೇರವಾಗಿ ₹ 50,000 ಪ್ರಯೋಜನವನ್ನು ಪಡೆಯುತ್ತಾರೆ. ಯಾವುದೀ ನಿಯಮ, ಇದರ ಲಾಭವನ್ನು ಹೇಗೆ ಪಡೆಯಬೇಕು ಎಂದು ತಿಳಿಯೋಣ... 


COMMERCIAL BREAK
SCROLL TO CONTINUE READING

ಪಿಎಫ್ ಖಾತೆದಾರರಿಗೆ ಯಾವಾಗ ಸಿಗಲಿದೆ ಈ ಪ್ರಯೋಜನ?
ಸಾಮಾನ್ಯವಾಗಿ ಪಿಎಫ್ ಖಾತೆದಾರರು (PF Account Holders) ಉದ್ಯೋಗಗಳನ್ನು ಬದಲಾಯಿಸಿದ ನಂತರವೂ ಅದೇ ಇಪಿಎಫ್ ಖಾತೆಗೆ ಕೊಡುಗೆ ನೀಡುವುದನ್ನು ಮುಂದುವರಿಸುವಂತೆ ಸಲಹೆ ನೀಡಲಾಗುತ್ತದೆ. ಇದರಿಂದ ಖಾತೆದಾರರು ಭವಿಷ್ಯದಲ್ಲಿ ದೊಡ್ಡ ಮೊತ್ತವನ್ನು ಕಲೆಹಾಕಬಹುದು. ಇದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಯಾವುದೇ ಇಪಿ‌ಎಫ್ ಖಾತೆದಾರರು ನಿರಂತರವಾಗಿ 20 ವರ್ಷಗಳ ಕಾಲ  ಅದೇ ಖಾತೆಗೆ ಕೊಡುಗೆ ನೀಡಿದರೆ ಅವರು ಲಾಯಲ್ಟಿ-ಕಮ್-ಲೈಫ್ ಪ್ರಯೋಜನವನ್ನು ಪಡೆಯಬಹುದಾಗಿದೆ. 


ಇದನ್ನೂ ಓದಿ- Home Loan Prepayment: ಹೋಮ್ ಲೋನ್ ಪೂರ್ವಪಾವತಿ ಮಾಡುವಾಗ ಈ 5 ವಿಷಯಗಳನ್ನು ನೆನಪಿಡಿ


ಏನಿದು ಲಾಯಲ್ಟಿ-ಕಮ್-ಲೈಫ್ ? ಏನಿದರ ಪ್ರಯೋಜನ? 
ಇಪಿ‌ಎಫ್ ಖಾತೆಯಲ್ಲಿ (EPF Account) ಸತತ ಎರಡು ದಶಕಗಳ ಕಾಲ ಎಂದರೆ 20 ವರ್ಷಗಳವರೆಗೆ ಕೊಡುಗೆ ನೀಡಿದ ಪಿಎಫ್ ಖಾತೆದಾರರಿಗೆ ಲಾಯಲ್ಟಿ-ಕಮ್-ಲೈಫ್ ಪ್ರಯೋಜನವನ್ನು ನೀಡುವಂತೆ CBDT ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರ ಇದಕ್ಕೆ ಅನುಮೋದನೆಯನ್ನೂ ನೀಡಿದ್ದು ಈಗ ಇಪಿಎಫ್ ಖಾತೆಯಲ್ಲಿ ನಿಯಮಿತವಾಗಿ 20ವರ್ಷಗಳ ಕಾಲ ಕೊಡುಗೆ ನೀಡಿದ ಚಂದಾದಾರಿಗೆ  ಹೆಚ್ಚುವರಿಯಾಗಿ ₹ 50,000 ನೇರ ಪ್ರಯೋಜನ ಸಿಗಲಿದೆ. 


ಇದರ ಲಾಭವನ್ನು ಯಾರು ಪಡೆಯಬಹುದು? 
ಕೇವಲ 20ವರ್ಷಗಳ ಕಾಲ ಕೊಡುಗೆ ನೀಡುವುದಷ್ಟೇ ಅಲ್ಲ, ಕೆಲವು ಷರತ್ತುಗಳನ್ನು ಪೂರೈಸಿದರಷ್ಟೇ  ₹ 50,000 ಈ ಪ್ರಯೋಜನವನ್ನು ಪಡೆಯಬಹುದು. ಉದಾಹರಣೆಗೆ 5,000 ರೂ. ವರೆಗಿನ ಮೂಲ ವೇತನ ಹೊಂದಿರುವ ಜನರು 30,000 ರೂ.ಗಳ ಲಾಭವನ್ನು ಪಡೆದರೆ 5,001 ರಿಂದ 10,000 ರೂ.ವರೆಗಿನ ಮೂಲ ವೇತನ ಹೊಂದಿರುವವರು 40,000 ರೂ.ಗಳ ಲಾಭವನ್ನು ಪಡೆಯುತ್ತಾರೆ. ಅಂತೆಯೇ, 10,000 ರೂ.ಗಿಂತ ಹೆಚ್ಚಿನ ಮೂಲ ವೇತನ (Basic Salary) ಹೊಂದಿರುವವರು ಮಾತ್ರ 50,000 ರೂ.ಗಳ ಲಾಭವನ್ನು ಪಡೆಯಬಹುದಾಗಿದೆ. 


ಇದನ್ನೂ ಓದಿ- 35000 ರೂಪಾಯಿ ವೇತನ ಪಡೆಯುವವರು ಕೆಲಸ ಬಿಡುವ ಹೊತ್ತಿಗೆ ಪಡೆಯುವ ಗ್ರಾಚ್ಯುಟಿ ಮೊತ್ತ ಎಷ್ಟು ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ


ಲಾಯಲ್ಟಿ-ಕಮ್-ಲೈಫ್ ಪ್ರಯೋಜನದ (Loyalty-cum-life benefit)  ಅಡಿಯಲ್ಲಿ, ಲಾಭವನ್ನು ಪಡೆಯಲು ಇಪಿಎಫ್ಒ ಚಂದಾದಾರರು ಉದ್ಯೋಗ ಬದಲಾಯಿಸಿದಾಗ ನಿಮ್ಮ ಹಳೆಯ ಇಪಿಎಫ್ ಖಾತೆಯನ್ನು ಮುಂದುವರೆಸಲು ಮರೆಯಬೇಡಿ. ಜೊತೆಗೆ ಇದಕ್ಕಾಗಿ ನೀವು ನಿಮ್ಮ ಹಳೆಯ ಉದ್ಯೋಗದಾತ ಮತ್ತು ಪ್ರಸ್ತುತ ಉದ್ಯೋಗದಾತರಿಗೆ ಸರಿಯಾದ ಮಾಹಿತಿಯನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.