Medicine Price : ಏಪ್ರಿಲ್ ಒಂದರಿಂದ ದುಬಾರಿಯಾಗಲಿದೆ ಈ 800 ಪ್ರಮುಖ ಔಷಧಿಗಳು!
Wholesale Price Index :ಕಳೆದ ಕೆಲ ದಿನಗಳಿಂದ ಹಣದುಬ್ಬರದ ಪರಿಣಾಮವಾಗಿ ಔಷಧ ಕಂಪನಿಗಳು ಬೆಲೆ ಏರಿಕೆ ಮಾಡುವಂತೆ ಬೇಡಿಕೆ ಇಟ್ಟಿದ್ದವು.
Wholesale Price Index : ಏಪ್ರಿಲ್ 1ರಿಂದ ಔಷಧಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.ಒಟ್ಟು 800 ಔಷಧಗಳ ಬೆಲೆಯಲ್ಲಿ ಏರಿಕೆ ಕಂಡುಬರಲಿದೆ. ಪೈನ್ ಕಿಲ್ಲರ್, ಆಂಟಿ ಬಯೋಟಿಕ್, ಆಂಟಿ ಇನ್ಫೆಕ್ಷನ್ ಔಷಧಗಳು ಇದರಲ್ಲಿ ಸೇರಿವೆ. ಮೂಲಗಳ ಪ್ರಕಾರ ಪ್ರಕಾರ, ಹೊಲ ಸೇಲ್ ಪ್ರೈಸ್ ಇಂಡೆಕ್ಸ್ (WPI) ಬದಲಾವಣೆಯ ನಂತರ, ರಾಷ್ಟ್ರೀಯ ಅಗತ್ಯ ಔಷಧಿ ಪಟ್ಟಿಯಲ್ಲಿ (NLEM) ಔಷಧಿಗಳ ಬೆಲೆಯಲ್ಲಿ ಶೇಕಡಾ 0.0055 ರಷ್ಟು ಹೆಚ್ಚಳವನ್ನು ಸರ್ಕಾರ ಅನುಮೋದಿಸಲಿದೆ.ಕಳೆದ ಕೆಲ ದಿನಗಳಿಂದ ಹಣದುಬ್ಬರದ ಪರಿಣಾಮವಾಗಿ ಔಷಧ ಕಂಪನಿಗಳು ಬೆಲೆ ಏರಿಕೆ ಮಾಡುವಂತೆ ಬೇಡಿಕೆ ಇಟ್ಟಿದ್ದವು.
12% ಮತ್ತು 10% ಹೆಚ್ಚಳ :
2022ರಲ್ಲಿ, ಔಷಧಿಗಳ ಬೆಲೆಯನ್ನು 12% ಮತ್ತು 10% ಹೆಚ್ಚಿಸಲಾಯಿತು. ಔಷಧಿಗಳ ಬೆಲೆಯಲ್ಲಿ ಬದಲಾವಣೆಗಳನ್ನು ವರ್ಷಕ್ಕೊಮ್ಮೆ ಮಾತ್ರ ಅನುಮೋದಿಸಲಾಗುತ್ತದೆ.ಕಳೆದ ಕೆಲವು ವರ್ಷಗಳಲ್ಲಿ ಔಷಧ ತಯಾರಿಕೆಗೆ ಬಳಸುವ ಪದಾರ್ಥಗಳ ಬೆಲೆ ಶೇ.15ರಿಂದ 130ರಷ್ಟು ಏರಿಕೆಯಾಗಿದೆ ಎನ್ನುತ್ತಾರೆ ಉದ್ಯಮ ತಜ್ಞರು. ಪ್ಯಾರಸಿಟಮಾಲ್ ಬೆಲೆ ಶೇ.130ರಷ್ಟು ಮತ್ತು ಎಕ್ಸಿಪಿಯಂಟ್ ಗಳ ಬೆಲೆ ಶೇ.18-262ರಷ್ಟು ಏರಿಕೆಯಾಗಿದೆ. ಇದಲ್ಲದೇ ಹಲವು ವಸ್ತುಗಳ ಬೆಲೆ ದುಪ್ಪಟ್ಟಾಗಿದೆ.
ಇದನ್ನೂ ಓದಿ : ಈಗಲೇ ಈ ಕೆಲಸ ಮಾಡಿ ಮುಗಿಸಿ, EPF ಚಂದಾದಾರರಿಗೆ ಸಿಗುವುದು 50,000 ರೂ. ಬೋನಸ್ !
ಸಾವಿರಕ್ಕೂ ಹೆಚ್ಚು ಔಷಧ ತಯಾರಕರ ನೇತೃತ್ವದ ಲಾಬಿ ಗುಂಪು ಬೆಲೆಗಳನ್ನು ಬದಲಾಯಿಸಲು ಸರ್ಕಾರದಿಂದ ಅನುಮತಿ ಕೋರಿತ್ತು.ಕಳೆದ ಎರಡು ಬಾರಿ ಔಷಧಗಳ ಬೆಲೆಯನ್ನು ಎರಡಂಕಿ ಹೆಚ್ಚಿಸಲಾಗುತ್ತಿದೆ. ಆದರೆ, ಇದೀಗ ಔಷಧಿಗಳ ಬೆಲೆಯಲ್ಲಿ ಅಲ್ಪ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಅಗತ್ಯ ಔಷಧಿಗಳ ಪಟ್ಟಿಯಲ್ಲಿ, ಹೆಚ್ಚಿನ ಜನರಿಗೆ ಉಪಯುಕ್ತವಾಗುವ ಔಷಧಿಗಳನ್ನು ಸೇರಿಸಲಾಗಿದೆ. ಇವುಗಳಲ್ಲಿ ಪ್ಯಾರಸಿಟಮಾಲ್, ಅಜಿಥ್ರೊಮೈಸಿನ್ ಮತ್ತು ವಿಟಮಿನ್ ಮತ್ತು ಮಿನರಲ್ ಸೇರಿವೆ.
ಇದನ್ನೂ ಓದಿ : Post Office Schemes: FD v/s NSC ಯಾವುದು ಹೆಚ್ಚು ಲಾಭದಾಯಕ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.