Income Tax Department - ಫೆಸ್ ಲೆಸ್ ಅಥವಾ ಇ-ಮೌಲ್ಯಮಾಪನ ಯೋಜನೆಯಡಿ ದೂರು ಸಲ್ಲಿಸಲು ಆದಾಯ ತೆರಿಗೆ ಇಲಾಖೆಯು (Income Tax Department ) ಶನಿವಾರ ತನ್ನ ಅಧಿಕೃತ ಮೂರು ಇಮೇಲ್ ಐಡಿಗಳನ್ನು ಜಾರಿಗೊಳಿಸಿದೆ. ಇ-ಮೌಲ್ಯಮಾಪನ ಯೋಜನೆಯಡಿ, ತೆರಿಗೆದಾರ ಮತ್ತು ತೆರಿಗೆ ಅಧಿಕಾರಿ ನಡುವೆ ಪರಸ್ಪರ ಮುಖಾಮುಖಿ ಸಂಭವಿಸುವುದಿಲ್ಲ.


COMMERCIAL BREAK
SCROLL TO CONTINUE READING

ತೆರಿಗೆ ಪಾವತಿದಾರರ ದೂರುಗಳಿಗಾಗಿ ಡೆಡಿಕೇಟೆಡ್ Id
ಇದಕ್ಕೆ ಸಂಬಂಧಿಸಿದಂತೆ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿರುವ ಆದಾಯ ತೆರಿಗೆ ಇಲಾಖೆಯು, ತೆರಿಗೆದಾರರ ಚಾರ್ಟರ್‌ನೊಂದಿಗೆ (Taxpayers Charter) ತೆರಿಗೆದಾರರ ಸೇವೆಯನ್ನು ಇನ್ನಷ್ಟು ಸುಧಾರಿಸಲು, ಆದಾಯ ತೆರಿಗೆ ಇಲಾಖೆಯು ಫೇಸ್ ಲೆಸ್ ಯೋಜನೆಯ (Faceless Assessment Scheme) ಅಡಿಯಲ್ಲಿ ಬಾಕಿ ಇರುವ ಪ್ರಕರಣಗಳ ಕುರಿತು ದೂರುಗಳನ್ನು ದಾಖಲಿಸಿಕೊಳ್ಳಲು ಕೆಲ ಡೆಡಿಕೇಟೆಡ್ ಇಮೇಲ್ ಐಡಿಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದೆ.


ಇದನ್ನೂ ಓದಿ-EPFO- ಆಧಾರ್ ಲಿಂಕ್ Alert! ಈ ದಿನಾಂಕದ ಒಳಗೆ ಈ ದಾಖಲೆಗಳನ್ನು ಲಿಂಕ್ ಮಾಡಿ! ಹೇಗೆ ಇಲ್ಲಿದೆ ನೋಡಿ 


ಮಾಹಿತಿ ನೀಡಿದ ಇಲಾಖೆ
ಟ್ವೀಟ್ ನಲ್ಲಿ ಆದಾಯ ತೆರಿಗೆ ಇಲಾಖೆ ಮೂರು Id ಗಳ ಕುರಿತು ಮಾಹಿತಿ ನೀಡಿದೆ. ಈ ಮೂರು ಇ-ಮೇಲ್ ಐಡಿಗಳನ್ನು ಬಳಸಿ ತೆರಿಗೆ ಪಾವತಿದಾರರು ತಮ್ಮ ದೂರುಗಳನ್ನು ದಾಖಲಿಸಬಹುದು. ಆದಾಯ ತೆರಿಗೆ ಅಧಿಸೋಚನೆಗೊಳಿಸಿರುವ ಇ-ಮೇಲ್ ಐಡಿಗಳಲ್ಲಿ samadhan.faceless.assessment@incometax.gov.in ಅನ್ನು ಫೇಸ್ ಲೆಸ್ ಮೌಲ್ಯಮಾಪನಕಾಗಿ, samadhan.faceless.penalty@incometax.gov.in ಅನ್ನು ಫೇಸ್ ಲೆಸ್ ಪೆನಾಲ್ಟಿಗಾಗಿ ಹಾಗೂ samadhan.faceless.appeal@incometax.gov.in ಫೇಸ್ ಲೆಸ್ ಅಪೀಲ್ ಗಾಗಿ ಬಳಕೆ ಮಾಡಬಹುದಾಗಿದೆ.


ಇದನ್ನೂ ಓದಿ-Gold Price : ಚಿನ್ನ ಖರೀದಿಗೆ ಸುವರ್ಣಾವಕಾಶ! 5 ದಿನಗಳಲ್ಲಿ 450 ರೂ.ಗಳಷ್ಟು ಇಳಿಕೆ ಕಂಡ ಚಿನ್ನದ ಬೆಲೆ!


ಕಚೇರಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ
ಫೇಸ್ ಲೆಸ್ ಮೌಲ್ಯಮಾಪನ ಯೋಜನೆಯ ಅಡಿ ತೆರಿಗೆ ಪಾವತಿದಾರರು ಆದಾಯ ತೆರಿಗೆಗೆ ಸಂಬಂಧಿಸಿದ ಕೆಲಸಗಳಿಗಾಗಿ ವಿಭಾಗದ ಕಚೇರಿಗೆ ಭೇಟಿ ನೀಡುವ ಅಥವಾ Income Tax Department ನ ಅಧಿಕಾರಿಗೆ ಭೇಟಿಯಾಗುವ ಅವಶ್ಯಕತೆ ಇಲ್ಲ. ಒಂದು ಕೇಂದ್ರೀಯ ವಿದ್ಯುನ್ಮಾನ ವ್ಯವಸ್ಥೆ ಈ ಸಂಪೂರ್ಣ ಕೆಲಸ ಮಾಡಲಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ  2019ರಲ್ಲಿ ಆರಂಭಿಸಿತ್ತು.


ಇದನ್ನೂ ಓದಿ-PF ಖಾತೆಗೆ ಸಂಬಂಧಿಸಿದ ಈ ಕೆಲಸವನ್ನು ಬೇಗ ಮಾಡಿ : ಇಲ್ಲದಿದ್ದರೆ 7 ಲಕ್ಷಕ್ಕಿಂತ ಹೆಚ್ಚು ಹಣ ಕಳೆದುಕೊಳ್ಳಬೇಕಾಗುತ್ತದೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...


Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ