ಕೇಂದ್ರ ಸರ್ಕಾರವು ಜನಸಾಮಾನ್ಯದ ಹಿತದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಉದ್ದೇಶ ದೇಶದ ಜನರಿಗೆ ನೆರವಾಗುವುದು. ಆದರೆ ಕೆಲವರು ಇಂತಹ ವಿಚಾರವನ್ನು ಇಟ್ಟುಕೊಂಡು ಜನರಿಗೆ ಮೋಸ ಮಾಡುತ್ತಾರೆ. ಅದಕ್ಕೆ ಸೈಬರ್ ಅಪರಾಧಗಳು ಎಂದು ಕರೆಯಲಾಗುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: LIC ಈ ಯೋಜನೆಯಲ್ಲಿ ಒಂದೇ ಪ್ರೀಮಿಯಂ ಪಾವತಿಸಿ, ಪ್ರತಿ ತಿಂಗಳು ₹50,000 ಪಡೆಯಿರಿ


ಯೋಜನೆಗಳ ಹೆಸರಿನಲ್ಲಿ ಲಕ್ಷಾಂತರ ರೂ, ದೋಚುವ ಹುನ್ನಾರ ಇದಾಗಿದೆ. ಇದೀಗ ಇಂತಹ ವಿಚಾರಕ್ಕೆ ಪೂರಕ ಎಂಬಂತೆ ಸುದ್ದಿಯೊಂದು ವೈರಲ್ ಆಗಿದೆ. ಕೇಂದ್ರ ಸರ್ಕಾರದ ‘ನಾರಿ ಶಕ್ತಿ ಯೋಜನಾ’ ಅಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಹಿಳೆಯರಿಗೆ ಗ್ಯಾರೆಂಟಿ ಮತ್ತು ಬಡ್ಡಿ ಇಲ್ಲದೆ ರೂ. 25 ಲಕ್ಷ ಸಾಲವನ್ನು ನೀಡುತ್ತಿದೆ ಎಂಬ ಸಂದೇಶ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ತಿಳಿದುಕೊಳ್ಳಬೇಕಿದೆ.


ಇನ್ನು ಈ ಸುದ್ದಿ ವೈರಲ್ ಆದಂತೆ ಎಚ್ಚೆತ್ತುಕೊಂಡ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಫ್ಯಾಕ್ಟ್ ಚೆಕ್ ಮೂಲಕ ಇದು ಸುಳ್ಳೆಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಂಸ್ಥೆ, ಇಂತಹ ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ  ಸೂಚನೆ ನೀಡಿದೆ.  


ಅಲ್ಪಾವಧಿಗೆ ವಿಶ್ವದ ಎರಡನೇ ಅತಿ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ ...!


ಇನ್ನು ಜನರೇ ಎಚ್ಚರ ವಹಿಸಿ, ನಿಮ್ಮ ಮೊಬೈ ಅಥವಾ ಪರ್ಸನಲ್ ಅಕೌಂಟ್ ಗಳಿಗೆ ಬರುವ ಮೇಲ್ ಅಥವಾ ಸಂದೇಶಗಳಿಗೆ ಉತ್ತರಿಸಬೇಡಿ. ಅಥವಾ ಅಲ್ಲಿ ನೀಡಿರುವ ಲಿಂಕ್ ಗಳನ್ನು ಒತ್ತುವ ಆಲೋಚನೆ ಮಾಡಬೇಡಿ. ಏಕೆಂದರೆ ಇದು ಸೈಬರ್ ಕಿರಾತಕರು ಜನರನ್ನು ಮೋಸಗೊಳಿಸುವ ಒಂದು ಹುನ್ನಾರ. ಹೀಗಾಗಿ ಎಚ್ಚರ ವಹಿಸಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.