ಜಮೀನಿನಲ್ಲಿ ಜಪಾನ್ ಕರೆನ್ಸಿ ಬೆಳೆಯುತ್ತಿದ್ದಾರೆ ರೈತರು !ಕಂತೆ ಕಂತೆ ಹರಿದು ಬರುತ್ತಿದೆ ಹಣ
Japani Currency Grass Export : ಜಪಾನ್ ತನ್ನ ಕರೆನ್ಸಿ ತಯಾರಿಕೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳನ್ನು ಮಾಡಿದೆ.ಜಪಾನ್‌ನ ಕರೆನ್ಸಿಯನ್ನು ವಿಶೇಷ ರೀತಿಯ ಕಾಗದದ ಮೇಲೆ ಮುದ್ರಿಸಲಾಗುತ್ತದೆ
Japani Currency Grass Export : 2016ರಲ್ಲಿ ಭಾರತದಲ್ಲಿ ನೋಟು ಅಮಾನ್ಯೀಕರಣದ ನಂತರ, ಭಾರತೀಯ ರಿಸರ್ವ್ ಬ್ಯಾಂಕ್ 1000 ರೂ . ನೋಟನ್ನು ಬ್ಯಾನ್ ಮಾಡಿತ್ತು. ಇದರ ಬದಲಾಗಿ 2000 ರೂಪಾಯಿ ನೋಟನ್ನು ಪರಿಚಯಿಸಿತು.ಅದೇ ರೀತಿ,ಕೆಲವು ದೇಶಗಳು ಕಾಲಕಾಲಕ್ಕೆ ತಮ್ಮ ಕರೆನ್ಸಿಯ ವಿನ್ಯಾಸ,ಬಣ್ಣ ಇತ್ಯಾದಿಗಳನ್ನು ಬದಲಾಯಿಸುತ್ತಲೇ ಇರುತ್ತವೆ.ಅನೇಕ ಬಾರಿ ಅದರ ತಯಾರಿಕೆಯಲ್ಲಿ ಬಳಸುವ ವಸ್ತುವನ್ನು ಸಹ ಬದಲಾಯಿಸಲಾಗುತ್ತದೆ.ಈಗ ವಿಶ್ವದ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾದ ಜಪಾನ್‌ನಲ್ಲಿ ಇದೇ ರೀತಿಯ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಜಪಾನ್ ತನ್ನ ಕರೆನ್ಸಿ ತಯಾರಿಕೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳನ್ನು ಮಾಡಲು ಹೊರಟಿದೆ.
ಜುಲೈನಿಂದ ಜಪಾನ್‌ನಲ್ಲಿ ಹೊಸ ಕರೆನ್ಸಿ ಜಾರಿಗೆ :
ಈ ಬದಲಾವಣೆಯ ನಂತರ,ಜಪಾನ್‌ನ ಕರೆನ್ಸಿಯನ್ನು ವಿಶೇಷ ರೀತಿಯ ಕಾಗದದ ಮೇಲೆ ಮುದ್ರಿಸಲಾಗುತ್ತದೆ.ಆದರೆ ಈ ಕಾಗದವನ್ನು ಜಪಾನ್‌ನಲ್ಲಿ ತಯಾರಿಸಲಾಗುವುದಿಲ್ಲ,ಬದಲಿಗೆ ಅದನ್ನು ಬೇರೆ ದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.ಈ ಬಾರಿ ಜುಲೈ ತಿಂಗಳಿನಿಂದ ಜಪಾನ್ ನಲ್ಲಿ ಹೊಸ ಕರೆನ್ಸಿ ಜಾರಿಯಾಗಲಿದೆ.ಪ್ರತಿ 20 ವರ್ಷಗಳಿಗೊಮ್ಮೆ, ಜಪಾನಿನ ಕರೆನ್ಸಿ ಯೆನ್ ಅನ್ನು ಮರುವಿನ್ಯಾಸಗೊಳಿಸಲಾಗುತ್ತದೆ.ಇದಕ್ಕೂ ಮೊದಲು, 2004ರಲ್ಲಿ ಜಪಾನಿನ ಕರೆನ್ಸಿಯಲ್ಲಿ ಬದಲಾವಣೆಗಳನ್ನು ಮಾಡಲಾಗಿತ್ತು.
ಇದನ್ನೂ ಓದಿ : Elon Musk in India: ಭಾರತಕ್ಕೆ ದೊಡ್ಡ ಗೇಮ್ ಚೇಂಜರ್ ಆಗಲಿದೆಯೇ ಎಲಾನ್ ಮಾಸ್ಕ್ ಭೇಟಿ..?
ಇಳಿಕೆಯಾಗಿದೆ ಮಿತ್ಸುಮಟಾ ಪೂರೈಕೆ:
ಜುಲೈ 2024 ರಿಂದ ಹೊಸ ನೋಟುಗಳು ಚಲಾವಣೆಗೆ ಬರುತ್ತವೆ.ಅದಕ್ಕಿಂತಲೂ ಮುಖ್ಯವಾದ ಅಂಶವೆಂದರೆ ಜಪಾನ್‌ನಲ್ಲಿ ಬ್ಯಾಂಕ್ ನೋಟುಗಳನ್ನು ಮುದ್ರಿಸಲು ಬಳಸುವ ಸಾಂಪ್ರದಾಯಿಕ ಕಾಗದವಾದ ಮಿತ್ಸುಮಾಟಾದ ಪೂರೈಕೆಯು ಸ್ವಲ್ಪ ಸಮಯದವರೆಗೆ ಕಡಿಮೆಯಾಗಿದೆ.ಪ್ರಸ್ತುತ ಮಿತ್ಸುಮಾಟಾವನ್ನು ಜಪಾನ್‌ನ ಕರೆನ್ಸಿ ಮಾಡಲು ಬಳಸಲಾಗುತ್ತದೆ.ಮಿತ್ಸುಮಾತಾವನ್ನು ಹಿಮಾಲಯದಲ್ಲಿ ಬೆಳೆಯಲಾಗುತ್ತದೆ ಎಂದು ಹೇಳಲಾಗಿತ್ತು.ಆದ್ದರಿಂದ,ಜಪಾನಿನ ಕರೆನ್ಸಿ ಮಾಡಲು ಬಳಸುವ ಕಾಗದದ ಕೊರತೆ ಎದುರಾದಾಗ ಅದನ್ನು ನೇಪಾಳದ ಟೆರೈ ಪ್ರದೇಶದಲ್ಲಿ ಪರ್ಯಾಯವನ್ನು ಹುಡುಕಿಕೊಂಡರು.
ಜಪಾನಿಯರ ಬಾಲಿ ಹೊಸ ಆಯ್ಕೆ :
ನೇಪಾಳದ ಅರ್ಗೆಲಿ ಎಂಬ ಸಸ್ಯ ಇದಕ್ಕೆ ಪರ್ಯಾಯ ಆಯ್ಕೆಯಾಗಿ ಕಂಡು ಬಂತು. ಹಿಂದೆ, ನೇಪಾಳದ ಹಿಮಾಲಯದ ತಪ್ಪಲಿನಲ್ಲಿ ವಾಸಿಸುವ ಪಸಾಂಗ್ ಶೆರ್ಪಾ ಅವರಂತಹ ಅನೇಕ ರೈತರು, ಈ ಪೊದೆಗಳನ್ನು ಉರುವಲುಗಳಾಗಿ ಬಳಸುತ್ತಿದ್ದರು. 2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭೂಕಂಪದ ನಂತರ, ಜಪಾನಿಯರು ನೇಪಾಳಕ್ಕೆ ತಜ್ಞರನ್ನು ಕಳುಹಿಸಿ ರೈತರಿಗೆ ಈ ರೀತಿಯ ಪೊದೆಗಳನ್ನು ಬೆಳೆಸಲು ಮತ್ತು ಅದರಿಂದ ಯೆನ್ ಮೌಲ್ಯದ ಕಾಗದವನ್ನು ತಯಾರಿಸುವಂತೆ ತರಬೇತಿ ನೀಡಿದರು. ಆದರೆ ಇದನ್ನು ಬೆಳೆದು ಮುಂದೊಂದು ದಿನ ಲಕ್ಷಗಟ್ಟಲೆ ಆದಾಯ ಪಡೆಯಬಹುದು ಎನ್ನುವುದನ್ನು ಆ ಸಂದರ್ಭದಲ್ಲಿ ಯಾರೂ ಊಹಿಸಿರಲಿಲ್ಲ.
ಇದನ್ನೂ ಓದಿ : Arecanut Price in Karnataka: ಯಲ್ಲಾಪುರದಲ್ಲಿ 54 ಸಾವಿರ ಗಡಿ ದಾಟಿದ ಅಡಿಕೆ ಧಾರಣೆ
ಉತ್ತಮ ಆದಾಯ ಗಳಿಸುತ್ತಿರುವ ರೈತರು :
ಜಪಾನ್ ರೈತರಿಗೆ ಅರ್ಗೆಲಿ ಎಂಬ ಕಾಡು ಪೊದೆ ಬೆಳೆಯಲು ತರಬೇತಿ ನೀಡಿದಾಗ, ನೇಪಾಳದಲ್ಲಿ ಸಾವಿರಾರು ರೈತರು ಅದನ್ನು ಬೆಳೆಸಲು ಪ್ರಾರಂಭಿಸಿದರು. ವ್ಯವಸಾಯದಿಂದ ಬೆಳೆದ ಬೆಳೆಗೆ ಉತ್ತಮ ಬೆಲೆ ನೀಡಿ ವರ್ತಕರು ಇದೀಗ ಖರೀದಿಸುತ್ತಿದ್ದಾರೆ.ವ್ಯಾಪಾರಿಗಳು ಈ ಹುಲ್ಲನ್ನು ಸಂಗ್ರಹಿಸಿ ಜಪಾನ್ ಗೆ ರಫ್ತು ಮಾಡುತ್ತಿದ್ದಾರೆ.ಈ ಬೆಳೆಯಿಂದ ರೈತರು ಮತ್ತು ವ್ಯಾಪಾರಿಗಳು ಉತ್ತಮ ಲಾಭವನ್ನು ಪಡೆಯುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.