PM Kisan: ರೈತರಿಗೆ ನೆಮ್ಮದಿಯ ಸುದ್ದಿ ! ಇ-ಕೆವೈಸಿ ಪೂರ್ಣಗೊಳಿಸಲು ನಿಗದಿಪಡಿಸಿರುವ ಸಮಯ ವಿಸ್ತರಣೆ
PM Kisan e-KYC: ಈ ಮೊದಲು ಈ ದಿನಾಂಕವನ್ನು ಮಾರ್ಚ್ 31ರವರೆಗೆ ನಿಗದಿಪಡಿಸಲಾಗಿತ್ತು. ಆದರೆ ಈಗ ಈ ಸಮಯಾವಕಾಶವನ್ನು ಮೇ31ರವರೆಗೆ ವಿಸ್ತರಿಸಲಾಗಿದೆ.
ಬೆಂಗಳೂರು : PM Kisan e-KYC : ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಸಂಬಂಧಿಸಿದ 12.53 ಕೋಟಿ ರೈತರಿಗೆ ನೆಮ್ಮದಿಯ ಸುದ್ದಿ ಬಂದಿದೆ. ರೈತರಿಗೆ ಇ-ಕೆವೈಸಿ (E-KYC) ಮಾಡಲು ಮೇ 31 ರವರೆಗೆ ಸಮಯಾವಕಾಶ ನೀಡಲಾಗಿದೆ. ಈ ಮೊದಲು ಈ ದಿನಾಂಕವನ್ನು ಮಾರ್ಚ್ 31ರವರೆಗೆ ನಿಗದಿಪಡಿಸಲಾಗಿತ್ತು. ಆದರೆ ಈಗ ಈ ಸಮಯಾವಕಾಶವನ್ನು ಮೇ31ರವರೆಗೆ ವಿಸ್ತರಿಸಲಾಗಿದೆ. ಇ-ಕೆವೈಸಿ ಮಾಡಲು ಸಾಧ್ಯವಾಗದ ರೈತರಿಗೆ ಪಿಎಂ ಕಿಸಾನ್ ನ (PM Kisan) ಕೊನೆಯ ಕಂತಿನ 2,000 ರೂ. ಪಡೆಯುವುದು ಸಾಧ್ಯವಾಗದೇ ಇರಬಹುದು.
ಇ-ಕೆವೈಸಿ ಪೂರ್ಣಗೊಳಿಸುವುದು ಹೇಗೆ ?
ಹಂತ 1: chrome ನಂತಹ ಮೊಬೈಲ್ ಫೋನ್ ಬ್ರೌಸರ್ಗೆ ಹೋಗಿ pmkisan.gov.in ಎಂದು ಟೈಪ್ ಮಾಡಿ. ಇದರೊಂದಿಗೆ ಪಿಎಂ ಕಿಸಾನ್ (PM Kisan) ಪೋರ್ಟಲ್ನ ಹೋಂ ಪೇಜ್ ತೆರೆಯುತ್ತದೆ. ಅಲ್ಲಿ e-KYC ಎಂದು ಬರೆದಿರುವುದನ್ನು ಕಾಣಬಹುದು. ಇದರ ಮೇಲೆ ಟ್ಯಾಪ್ ಮಾಡಿ ಆಧಾರ್ ಸಂಖ್ಯೆಯನ್ನು ನಮೂದಿಸಿ. ಇದಾದ ನಂತರ ಸರ್ಚ್ ಬಟನ್ ಮೇಲೆ ಟ್ಯಾಪ್ ಮಾಡಿ.
ಇದನ್ನೂ ಓದಿ : ನಾಳೆಯಿಂದ ನಾಲ್ಕು ದಿನ ಬ್ಯಾಂಕ್ ಬಂದ್..! ಇಂದೇ ಪೂರೈಸಿಕೊಳ್ಳಿ ಅಗತ್ಯ ಕೆಲಸ
ಹಂತ 2: ನಂತರ ಆಧಾರ್ನೊಂದಿಗೆ (AADHAAR) ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಇದರ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ 4 ಅಂಕಿಗಳ OTP ಬರುತ್ತದೆ. ಇದನ್ನು ಬಾಕ್ಸ್ನಲ್ಲಿ ಟೈಪ್ ಮಾಡಿ.
ಹಂತ 3: ಇದರ ನಂತರ, ಆಧಾರ್ ದೃಢೀಕರಣಕ್ಕಾಗಿ ಬಟನ್ ಅನ್ನು ಟ್ಯಾಪ್ ಮಾಡಬೇಕು. ಇದಾದ ನಂತರ ಮತ್ತೆ 6 ಅಂಕೆಗಳ OTP ಬರುತ್ತದೆ. ಅದನ್ನು ಭರ್ತಿ ಮಾಡಿ ಸಬ್ಮಿಟ್ ಬಟನ್ ಮೇಲೆ ಟ್ಯಾಪ್ ಮಾಡಿ. ಈ ಸಂಪೂರ್ಣ ಪ್ರಕ್ರಿಯೆಯನ್ನು ಸರಿಯಾಗಿ ಮಾಡಿದರೆ e-kyc ಪೂರ್ಣಗೊಳ್ಳುತ್ತದೆ ಇಲ್ಲದಿದ್ದರೆ Invalid ಎಂಬ ಮಾಹಿತಿ ಬರುತ್ತದೆ. ಒಂದು ವೇಳೆ ಈ ಪ್ರಕ್ರಿಯೆ ಪೂರ್ಣ ಗೊಳ್ಳದಿದ್ದರೆ ಏಪ್ರಿಲ್ನಲ್ಲಿ ಬರುವ ನಿಮ್ಮ ಕಂತು ನಿಂತು ಹೋಗಬಹುದು.
ಇದನ್ನೂ ಓದಿ: Fuel Prices: ಇಂದೂ ಕೂಡ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ, ಪ್ರತಿ ಹಣಕಾಸು ವರ್ಷದಲ್ಲಿ, ಮೋದಿ ಸರ್ಕಾರವು ರೈತರಿಗೆ 6000 ರೂಪಾಯಿಗಳನ್ನು ನೀಡುತ್ತದೆ. ಅದನ್ನು 2000 ದಂತೆ 3 ಕಂತುಗಳಲ್ಲಿ ನೀಡಲಾಗುತ್ತದೆ. . ಈ ವರ್ಷದ ಕೊನೆಯ ಕಂತು ಏಪ್ರಿಲ್ 1 ರ ನಂತರ ಬರಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.