ನಾಲ್ಕು ವರ್ಷಗಳ ನಂತರ ಭಾರತಕ್ಕೆ ಮತ್ತೆ ಕಾಲಿಡುತ್ತಿದೆ ಚೀನಾ ಕಂಪನಿ : ರಿಲಾಯನ್ಸ್ ಜೊತೆ ಸೇರಿಕೊಂಡು ಮಾರಾಟ ಮಾಡಲಿದೆ ಅಗ್ಗದ ಬಟ್ಟೆ
Reliance-Shein deal: ಇದೀಗ ಚೀನಾದ ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ತನ್ನ ಸರಕುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ.
Reliance-Shein deal: ನಾಲ್ಕು ವರ್ಷಗಳ ಹಿಂದೆ ಭಾರತದಲ್ಲಿ ನಿಷೇಧಕ್ಕೊಳಗಾಗಿದ್ದ ಚೀನಾ ಕಂಪನಿ ಮತ್ತೆ ಮರಳುತ್ತಿದೆ.ಚೈನೀಸ್ ಫ್ಯಾಶನ್ ಬ್ರ್ಯಾಂಡ್ ಶೇನ್ (Shein) ಭಾರತದಲ್ಲಿ ಪುನರಾಗಮನ ಮಾಡುತ್ತಿದೆ.ಮುಖೇಶ್ ಅಂಬಾನಿಯವರ ಕಂಪನಿ ರಿಲಯನ್ಸ್ ರಿಟೇಲ್ ನ ಸಹಯೋಗದೊಂದಿಗೆ ಈ ಚೈನೀಸ್ ಬ್ರ್ಯಾಂಡ್ ಭಾರತಕ್ಕೆ ಮರುಪ್ರವೇಶ ಮಾಡುತ್ತಿದೆ.ಕಳೆದ ವರ್ಷ ರಿಲಯನ್ಸ್ ರಿಟೇಲ್ ಮತ್ತು ಶೇನ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಹೀಗಾಗಿ ಇದೀಗ ಚೀನಾದ ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ತನ್ನ ಸರಕುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ.
ಭಾರತಕ್ಕೆ ಮರಳುತ್ತಿದೆ ಚೀನಾದ ಫ್ಯಾಷನ್ ಬ್ರ್ಯಾಂಡ್ Shein :
ಚೀನಾದ ಪ್ರಮುಖ ಫಾಸ್ಟ್ ಫ್ಯಾಶನ್ ರಿಟೇಲ್ ಕಂಪನಿ Shein ಭಾರತದಲ್ಲಿ ರಿಲಯನ್ಸ್ ನೆರವಿನೊಂದಿಗೆ ಪುನರಾಗಮನ ಮಾಡುತ್ತಿದೆ.ನಾಲ್ಕು ವರ್ಷಗಳ ಹಿಂದೆ ಈ ಕಂಪನಿಯನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು.ಈಗ ಈ ಬ್ರಾಂಡ್,ರಿಲಯನ್ಸ್ ರಿಟೇಲ್ ವೆಂಚರ್, ಅಪ್ಲಿಕೇಶನ್ ಮೂಲಕ ತನ್ನ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತದೆ.ಮುಂದಿನ ಕೆಲವು ವಾರಗಳಲ್ಲಿ ಇದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ,ರಿಲಯನ್ಸ್ ರೀಟೇಲ್‌ನ ಸ್ಟೋರ್‌ಗಳು ಮತ್ತು ಅಪ್ಲಿಕೇಶನ್ ಮೂಲಕ ಶೇನ್ ಉತ್ಪನ್ನಗಳನ್ನು ಮಾರಾಟ ಮಾಡಬಹುದು.
ಇದನ್ನೂ ಓದಿ : ಆಭರಣ ಪ್ರಿಯರಿಗೆ ದೊಡ್ಡ ಅಘಾತ..! ಮತ್ತಷ್ಟು ಹೆಚ್ಚಾಯ್ತು ಚಿನ್ನದ ಬೆಲೆ...
Sheinಗೆ ನಿಷೇಧ ಹೇರಿದ್ದೇಕೆ ? :
2020ರಲ್ಲಿ, ಭದ್ರತಾ ಕಾರಣಗಳಿಂದಾಗಿ ಕೆಲವು ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿತ್ತು. ಅದರಲ್ಲಿShein ಕೂಡಾ ಒಂದು. ಈ ಕಂಪನಿಯ ವಿಶೇಷತೆ ಎಂದರೆ ಅತ್ಯಂತ ಕಡಿಮೆ ದರದಲ್ಲಿ ಫ್ಯಾಶನ್ ಬಟ್ಟೆಗಳನ್ನು ಮಾರಾಟ ಮಾಡುವುದು.ಇದು ಚೈನೀಸ್ ಆನ್‌ಲೈನ್ ಫಾಸ್ಟ್ ಫ್ಯಾಶನ್ ರಿಟೇಲ್ ಎಂದೇ ಹೆಸರು ಮಾಡಿದೆ. ಇದರ ಮೊದಲ ಮಳಿಗೆಯನ್ನು 2008 ರಲ್ಲಿ ಚೀನಾದ ನಾನ್‌ಜಿಂಗ್‌ನಲ್ಲಿ ತೆರೆಯಲಾಯಿತು.ಇದು ಮೊದಲು ಶಿಪ್ಪಿಂಗ್ ಕಂಪನಿಯಾಗಿ ಪ್ರಾರಂಭವಾಯಿತು. ಆದರೆ ನಂತರ ಬಟ್ಟೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿತು.2020 ರಲ್ಲಿ, ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ನಂತರ,ಸರ್ಕಾರವು ಅನೇಕ ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತು.ಭದ್ರತಾ ಕಾರಣಗಳು ಮತ್ತು ಡೇಟಾ ಸಂಗ್ರಹಣೆ ಮತ್ತು ಚೀನಾದ ಮಿಲಿಟರಿಯಿಂದ ಸಂಭವನೀಯ ಬೇಹುಗಾರಿಕೆಯಂತಹ ಅಪಾಯಗಳನ್ನು ಉಲ್ಲೇಖಿಸಿ ಈ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿತ್ತು.
ಇದನ್ನೂ ಓದಿ : ಇದೇ ತಿಂಗಳಲ್ಲಿ ಸರ್ಕಾರಿ ನೌಕರರಿಗೆ ಡಬಲ್ ಜಾಕ್ ಪಾಟ್ ! ಎಲ್ಲಾ ತಯಾರಿ ಪೂರ್ಣಗೊಳಿಸಿರುವ ಸರ್ಕಾರ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.