FD Interest Rate: ಈ ಬ್ಯಾಂಕ್ FD ಮೇಲೆ ಶೇ.9ರಷ್ಟು ಬಡ್ಡಿ ನೀಡುತ್ತಿದೆ
ನಿಮ್ಮ ಕಷ್ಟಪಟ್ಟು ಗಳಿಸಿದ ಹಣ ಹೂಡಿಕೆ ಮಾಡಲು ಎಫ್ಡಿಯನ್ನು ಅತ್ಯಂತ ಸಾಮಾನ್ಯವಾದ ಹಣಕಾಸು ಸಾಧನವೆಂದು ಪರಿಗಣಿಸಲಾಗುತ್ತದೆ. ಸ್ಟಾಕ್‌ಗಳು, ಎಸ್ಐಪಿಗಳು ಅಥವಾ ಮ್ಯೂಚುಯಲ್ ಫಂಡ್‌ಗಳು (MF) ನಂತಹ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಸುರಕ್ಷಿತವೆಂದು ಪರಿಗಣಿಸಲ್ಪಟ್ಟಿರುವುದರಿಂದ ಬ್ಯಾಂಕ್ ಎಫ್‌ಡಿಗಳನ್ನು ಹೆಚ್ಚು ಆದ್ಯತೆಯ ಹೂಡಿಕೆಯ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.
ನವದೆಹಲಿ: ಹೂಡಿಕೆಯ ವಿಷಯದಲ್ಲಿ ಇಂದು ಹಲವು ಆಯ್ಕೆಗಳಿವೆ. ಈ ಆಯ್ಕೆಗಳ ಮೂಲಕ ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ವಿವಿಧ ರೀತಿ ಹೂಡಿಕೆ ಮಾಡುತ್ತಿದ್ದಾರೆ. ಕೆಲವು ಹೂಡಿಕೆಗಳು ಅಪಾಯಕಾರಿಯಾಗಿದ್ದರೂ, ಕೆಲವು ಸಾಕಷ್ಟು ಸುರಕ್ಷಿತವಾಗಿವೆ. ಅನೇಕ ಜನರು ಸುರಕ್ಷಿತ ಹೂಡಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಮತ್ತು ಎಫ್‌ಡಿಯಲ್ಲಿ ಹಣ ಹೂಡಿಕೆ ಮಾಡುತ್ತಾರೆ.
ಸ್ಥಿರ ಠೇವಣಿ (FD)ಯಲ್ಲಿ ನೀವು ಕಷ್ಟಪಟ್ಟು ಗಳಿಸಿದ ಹಣ ಹೂಡಿಕೆ ಮಾಡುವ ಒಂದು ಉತ್ತಮ ವಿಧಾನ. ಸ್ಟಾಕ್‌ಗಳು, SIPಗಳು ಅಥವಾ ಮ್ಯೂಚುಯಲ್ ಫಂಡ್‌ಗಳು (MF) ನಂತಹ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಸುರಕ್ಷಿತವೆಂದು ಪರಿಗಣಿಸಲ್ಪಟ್ಟಿರುವುದರಿಂದ ಬ್ಯಾಂಕ್ ಎಫ್‌ಡಿಗಳನ್ನು ಹೆಚ್ಚು ಆದ್ಯತೆಯ ಹೂಡಿಕೆಯ ಆಯ್ಕೆಯಾಗಿದೆ. ಅದೇ ರೀತಿ ಸಣ್ಣ ಹಣಕಾಸು ಬ್ಯಾಂಕುಗಳು ವಾಣಿಜ್ಯ ಬ್ಯಾಂಕುಗಳಿಗೆ ಹೋಲಿಸಿದರೆ FDಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಇಂದು ನಾವು ಎಫ್‌ಡಿಯಲ್ಲಿ ಶೇ.9ರಷ್ಟು ಬಡ್ಡಿ ನೀಡುವ ಬ್ಯಾಂಕ್‌ಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.
ಇದನ್ನೂ ಓದಿ: ಹೆಚ್ಚಿನ ಪಿಂಚಣಿ ಪಡೆಯಲು ಜೂನ್ 26 ರವರೆಗೆ ಅವಕಾಶ ! ಗಡುವು ವಿಸ್ತರಿಸಿದ ಸರ್ಕಾರ
ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್‍ನ FD ಬಡ್ಡಿ ದರ
ಇದು ಸಾಮಾನ್ಯ ಗ್ರಾಹಕರಿಗೆ ಶೇ.4.5 ರಿಂದ ಶೇ.9ರ ನಡುವಿನ ಬಡ್ಡಿ ನೀಡಲಾಗುತ್ತದೆ. ಇದು ಪ್ರಸ್ತುತ ಹಿರಿಯ ನಾಗರಿಕರಿಗೆ ವಾರ್ಷಿಕ ಶೇ.9.5ರಷ್ಟು ಬಡ್ಡಿದರವನ್ನು ನೀಡುತ್ತದೆ. ಚಿಲ್ಲರೆ ಹೂಡಿಕೆದಾರರು ಷರತ್ತುಗಳೊಂದಿಗೆ ಎಫ್‌ಡಿಯಲ್ಲಿ ಶೇ.9ರಷ್ಟು ಬಡ್ಡಿ ಪಡೆಯುತ್ತಾರೆ. ಈ ಬಡ್ಡಿ ದರಗಳು 2023ರ ಮೇ 2ರಿಂದ ಜಾರಿಗೆ ಬರುತ್ತದೆ.
ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಇತ್ತೀಚಿನ FD ಬಡ್ಡಿ ದರ
- 6 ತಿಂಗಳಿಂದ 201 ದಿನಗಳು: 8.75%
- 501 ದಿನಗಳು: 8.75%
- 1001 ದಿನಗಳು: 9.00%
ಹಿರಿಯ ನಾಗರಿಕರಿಗೆ FD ಬಡ್ಡಿ ದರ
- 6 ತಿಂಗಳಿಂದ 201 ದಿನಗಳು: 9.25%
- 501 ದಿನಗಳು: 9.25%
- 1001 ದಿನಗಳು: 9.50%
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ FD ಬಡ್ಡಿ ದರ
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ 700 ದಿನಗಳಲ್ಲಿ ಮುಕ್ತಾಯಗೊಳ್ಳುವ ಠೇವಣಿಗಳು ಈಗ ಸಾಮಾನ್ಯ ಜನರಿಗೆ ಗರಿಷ್ಠ ಶೇ.8.25ರಷ್ಟು ಮತ್ತು ಹಿರಿಯ ನಾಗರಿಕರಿಗೆ ಶೇ.9ರಷ್ಟು ಬಡ್ಡಿ ನೀಡುತ್ತದೆ. ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಪ್ರಕಾರ ಹೊಸ FD ದರಗಳು 27 ಫೆಬ್ರವರಿ 2023ರಿಂದ ಜಾರಿಗೆ ಬರುತ್ತವೆ. ಬ್ಯಾಂಕ್ ಹಿರಿಯ ನಾಗರಿಕರಿಗೆ ಶೇ.4.75 ರಿಂದ ಶೇ.9ವರೆಗಿನ ಬಡ್ಡಿದರಗಳೊಂದಿಗೆ FDಗಳನ್ನು ನೀಡುತ್ತದೆ.
ನಾಗರಿಕರಿಗೆ ಇತ್ತೀಚಿನ FD ಬಡ್ಡಿ ದರ
- 700 ದಿನಗಳು ಶೇ.8.25ರಷ್ಟು
ಹಿರಿಯ ನಾಗರಿಕರಿಗೆ
- 700 ದಿನಗಳು ಶೇ.9 ರಷ್ಟು
ಇದನ್ನೂ ಓದಿ: ಐಶಾರಾಮಿ 8 ಸೀಟರ್ ಕಾರು! ಆದರೂ ಬೆಲೆ ಮಾತ್ರ ತೀರಾ ಕಡಿಮೆ
ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ FD ಬಡ್ಡಿ ದರ
ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಈಗ ಸಾಮಾನ್ಯ ನಾಗರಿಕರಿಗೆ ಶೇ.3 ರಿಂದ ಶೇ.8.4ರಷ್ಟು ಮತ್ತು ಹಿರಿಯ ನಾಗರಿಕರಿಗೆ ಶೇ.3.60 ರಿಂದ ಶೇ.9.01ವರೆಗಿನ FDಗಳ ಬಡ್ಡಿದರ ನೀಡುತ್ತದೆ. 1000 ದಿನಗಳ ಅವಧಿಗೆ ಶೇ.9.01ರಷ್ಟು ಹೆಚ್ಚಿನ ಬಡ್ಡಿ ದರ ನೀಡಲಾಗುತ್ತದೆ. ಈ ದರಗಳು ಮಾರ್ಚ್ 24, 2023ರಿಂದ ಅನ್ವಯಿಸುತ್ತವೆ.
ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಾಗರಿಕರಿಗೆ FD ಬಡ್ಡಿ ದರ
- 1000 ದಿನಗಳು - 8.4%
ಹಿರಿಯ ನಾಗರಿಕರಿಗೆ ಇತ್ತೀಚಿನ FD ಬಡ್ಡಿ ದರ
- 1000 ದಿನಗಳು 9.01%
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.