ಸಿನಿಮಾ ನಟರು ರೀಲ್ ನಲ್ಲಿ ಹೀರೋಗಳಾದ್ರೆ, , ಕ್ರಿಕೆಟ್ ಆಟಗಾರರು ರಿಯಲ್ ಹೀರೋಗಳು: ಸಮೀಕ್ಷೆಯಿಂದ ಮಾಹಿತಿ ಬಹಿರಂಗ
Film Heroes vs Cricket stars: ಭಾರತದಲ್ಲಿ ಕ್ರಿಕೆಟ್ ಎನ್ನುವುದು ಧರ್ಮ, ಕ್ರಿಕೆಟ್ ಆಟಗಾರರು ದೇವರಿದ್ದಂತೆ ಎನ್ನುವ ಮಾತೊಂದಿದೆ. ಆ ಮಾತನ್ನು ಪುಷ್ಟಿಕರಿಸುವ ಮತ್ತೊಂದು ವರದಿ ಇದಾಗಿದೆ.
Film Heroes vs Cricket stars In Brand Market: ಕ್ರಿಕೆಟ್ ಆಟಗಾರರಾದ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಅವರು ಶಾರುಖ್ ಖಾನ್, ಅಮಿತಾಬ್ ಬಚ್ಚನ್ ಸೇರಿದಂತೆ ಜನಪ್ರಿಯ ಬಾಲಿವುಡ್ ಸ್ಟಾರ್ ಗಳೆಲ್ಲರಿಗಿಂತಲೂ ಫೇಮಸ್ ಆಗಿದ್ದಾರೆ ಮತ್ತು ಹೆಚ್ಚು ಫಾಲೋಹಾರ್ಸ್ ಹೊಂದಿದ್ದಾರೆ. ಹಂಸಾ ರಿಸರ್ಚ್ ಇತ್ತೀಚಿಗೆ ನಡೆಸಿದ ಬ್ರ್ಯಾಂಡ್ ಎಂಡೋಸರ್ ವರದಿ-2024ರಲ್ಲಿ ಇದು ಬಹಿರಂಗಗೊಂಡಿದೆ.
ಭಾರತದಲ್ಲಿ ಕ್ರಿಕೆಟ್ ಎನ್ನುವುದು ಧರ್ಮ, ಕ್ರಿಕೆಟ್ ಆಟಗಾರರು ದೇವರಿದ್ದಂತೆ ಎನ್ನುವ ಮಾತೊಂದಿದೆ. ಆ ಮಾತನ್ನು ಪುಷ್ಟಿಕರಿಸುವ ಮತ್ತೊಂದು ವರದಿ ಇದಾಗಿದೆ. ಭಾರತದ ಕ್ರಿಕೆಟ್ ಆಟಗಾರರು ಎಷ್ಟು ಫೇಮಸ್ ಎಂದರೆ ಬಾಲಿವುಡ್ ನ ಘಾಟಾನುಘಟಿ ನಟರಿಗಿಂತಲೂ ಹೆಚ್ಚು ಫೇಮಸ್ ಎಂದು ಹಂಸಾ ರಿಸರ್ಚ್ ನಡೆಸಿದ ಬ್ರ್ಯಾಂಡ್ ಎಂಡೋಸರ್ ವರದಿ-2024ರಲ್ಲಿ ಹೇಳಲಾಗಿದೆ.
ಈಗಾಗಲೇ ಹೇಳಿದಂತೆ ಭಾರತದಲ್ಲಿ ಕ್ರಿಕೆಟ್ ಆಟದ ಬಗ್ಗೆಯೇ ಅಪಾರವಾದ ಅಭಿಮಾನ ಇರುವುದರಿಂದ ಸಹಜವಾಗಿ ಕ್ರಿಕೆಟ್ ಆಟಗಾರರ ಬಗ್ಗೆ ಹೆಚ್ಚು ಕ್ರೇಜಿದೆ ಎಂದು ಹೇಳಲಾಗುತ್ತದೆ. ಅದು ಅಲ್ಲದೆ ಕ್ರಿಕೆಟ್ ಆಟಗಾರರು ಬೇರೆ ಬೇರೆ ದೇಶಗಳಲ್ಲಿ ಆಡುತ್ತಾರೆ. ಬಾಲಿವುಡ್ ನಟರ ಸಿನಿಮಾಗಳಿಗೆ ಭಾರತ ಮಾತ್ರ ವೇದಿಕೆ. ಕೆಲವೇ ಕೆಲವರ ಸಿನಿಮಾಗಳು ಮಾತ್ರ ಸಮುದ್ರ ದಾಟುತ್ತವೆ. ಹಾಗಾಗಿ ಕ್ರಿಕೆಟ್ ಆಟಗಾರರು ಬಾಲಿವುಡ್ ನಟರನ್ನು ಹಿಂದಿಕ್ಕಿ ಪ್ರಮುಖ ಬ್ರ್ಯಾಂಡ್ ಅಂಬಾಸಿಡರ್ ಗಳಾಗಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಇದನ್ನೂ ಓದಿ- ವಿಚ್ಛೇದನ ವದಂತಿ ನಡುವೆ ‘ಬಚ್ಚನ್’ ಎಂಬ ಸರ್ ನೇಮ್ ಅನ್ನು ಕೈಬಿಟ್ಟಿದ್ದಾರಾ ಐಶ್ವರ್ಯ ರೈ? ಫ್ಯಾಕ್ಟ್ ಚೆಕ್ ಏನ್ ಹೇಳುತ್ತೆ?
ಉಳಿದೆಲ್ಲಾ ಕ್ರಿಕೆಟ್ ಆಟಗಾರರಿಗಿಂತ ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಅತ್ಯಂತ ಹೆಚ್ಚು ಪ್ರಸಿದ್ದಿ ಪಡೆದಿದ್ದಾರೆ. ಅವರಿಗೆ ಅತಿ ಹೆಚ್ಚು ಫ್ಯಾನ್ಸ್ ಫಾಲೊಹಿಂಗ್ ಇದೆ ಎಂದು ಗೊತ್ತಾಗಿದೆ. ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಹೆಚ್ಚು ಪ್ರಸಿದ್ಧಿ ಇರುವವರ ಪೈಕಿ ಕ್ರಮವಾಗಿ ನಂಬರ್ 1 ಮತ್ತು ನಂಬರ್ 2 ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಮಾತ್ರವಲ್ಲ, ನಂಬರ್ 3ನೇ ಸ್ಥಾನದಲ್ಲೂ ಕ್ರಿಕೆಟ್ ಆಟಗಾರರೇ ಇದ್ದಾರೆ.
ಇದು ಬಹಳ ಅಚ್ಚರಿ ಉಂಟುಮಾಡುವ ವಿಷಯ. ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಇನ್ನೂ ಆಟವಾಡುತ್ತಿದ್ದಾರೆ ಹಾಗಾಗಿ ಅವರು ಫೇಮಸ್ ಎಂದುಕೊಳ್ಳಬಹುದು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ ಬಹುದಿನಗಳಾದರೂ ‘ರನ್ ಮಷಿನ್’ ಸಚಿನ್ ತೆಂಡೂಲ್ಕರ್ ಈಗಲೂ ಭಾರತದಲ್ಲಿ ಬ್ರ್ಯಾಂಡ್ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇರುವ ಸೆಲಬ್ರಿಟಿ. ಸಚಿನ್ ತೆಂಡೂಲ್ಕರ್ ಅವರು ಹಂಸಾ ರಿಸರ್ಚ್ ಇತ್ತೀಚಿಗೆ ನಡೆಸಿದ ಬ್ರ್ಯಾಂಡ್ ಎಂಡೋಸರ್ ವರದಿ-2024ರಲ್ಲಿ ನಂಬರ್ 3ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ- ರಶ್ಮಿಕಾ ಮಂದಣ್ಣ ಅಪ್ಪಟ ಕೊಡಗಿನ ಬೆಡಗಿ ಎಂಬುದಕ್ಕೆ ಇಲ್ಲಿದೆ ಪ್ರೂಫ್...
ಹಂಸಾ ರಿಸರ್ಚ್ ನಡೆಸಿದ ಬ್ರ್ಯಾಂಡ್ ಎಂಡೋಸರ್ ವರದಿ-2024ರ ಪ್ರಕಾರ ಈ ಕೆಳಗಿನ 10 ಆಟಗಾರರರು ಟಾಪ್ ಟೆನ್ ಸ್ಥಾನವನ್ನು ಪಡೆದಿದ್ದಾರೆ.
ಭಾರತದ ಟಾಪ್ ಟೆನ್ ಬ್ರ್ಯಾಂಡ್ ಅಂಬಾಸಿಡರ್ ಗಳು!
ವಿರಾಟ್ ಕೊಹ್ಲಿ
ಎಂಎಸ್ ಧೋನಿ
ಸಚಿನ್ ತೆಂಡೂಲ್ಕರ್
ಶಾರುಖ್ ಖಾನ್
ಅಕ್ಷಯ್ ಕುಮಾರ್
ಅಮಿತಾಬ್ ಬಚ್ಚನ್
ಅಲ್ಲು ಅರ್ಜುನ್
ಸಲ್ಮಾನ್ ಖಾನ್
ಹೃತಿಕ್ ರೋಷನ್
ದೀಪಿಕಾ ಪಡುಕೋಣೆ
ಹಂಸಾ ರಿಸರ್ಚ್ ನಡೆಸಿದ ಬ್ರ್ಯಾಂಡ್ ಎಂಡೋಸರ್ ವರದಿ-2024ರ ಬಗ್ಗೆ ಮಾತನಾಡಿರುವ ಹಂಸ ರಿಸರ್ಚ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆಶಿಶ್ ಕಾರ್ನಾಡ್ ಅವರು ಭಾರತದ ಕ್ರಿಕೆಟ್ ಆಟಗಾರರು ಬಾಲಿವುಡ್ ನಟರನ್ನು ಮೀರಿಸುವಂತಹ ಸೆಲಬ್ರಿಟಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.
ದೇಶದ 36 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. 4,000 ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಆನಲೈನ್ ಪ್ರಶ್ನಾವಳಿಗಳ ಮೂಲಕ ಸಮೀಕ್ಷೆ ನಡೆಸಲಾಗಿದೆ. ಉದ್ಯಮ ವರ್ಗಗಳ 29 ಉಪ ವಿಭಾಗಗಳ ಆಧಾರದ ಮೇಲೆ ಹಂಸಾ ರಿಸರ್ಚ್ ನಡೆಸಿದ ಬ್ರ್ಯಾಂಡ್ ಎಂಡೋಸರ್ ವರದಿ-2024ಯನ್ನು ತಯಾರಿಸಲಾಗಿದೆ ಎಂದು ಆಶಿಶ್ ಕಾರ್ನಾಡ್ ಅವರು ತಿಳಿಸಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.