ನವದೆಹಲಿ: ಬ್ಯಾಂಕ್‌ಗಳು ಮತ್ತು ಇತರ ಹಣಕಾಸು ಸಂಸ್ಥೆಗಳ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ  ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ಕೆವೈಸಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಮತ್ತೊಂದು ಯೋಜನೆ ರೂಪಿಸಲಾಗುತ್ತಿದ್ದು ಇದರಿಂದ ಬ್ಯಾಂಕ್ ಗ್ರಾಹಕರು ಮತ್ತು ಹಣಕಾಸು ಸಂಸ್ಥೆಗಳ ಗ್ರಾಹಕರಿಗೆ ಮುಂದಿನ ದಿನಗಳಲ್ಲಿ ಪರಿಹಾರ ಸಿಗಲಿದೆ. ವಿವಿಧ ಹಣಕಾಸು ಸಂಸ್ಥೆಗಳ ನಡುವಿನ ವಹಿವಾಟುಗಳನ್ನು ಸುಲಭಗೊಳಿಸಲು ಏಕರೂಪದ ಕೆವೈಸಿ ಯೋಜನೆಯನ್ನು ಜಾರಿಗೆ ತರುವ ಕೆಲಸ ನಡೆಯುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ. ಒಮ್ಮೆ ಕೆವೈಸಿ ಸಲ್ಲಿಸಿದ ನಂತರ, ಅದನ್ನು ಹಲವು ಬಾರಿ ಬಳಸಬಹುದು. ಅದರ ಕೆಲಸವು ಹೊಸ ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 


COMMERCIAL BREAK
SCROLL TO CONTINUE READING

FICCI ಲೀಡ್ಸ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿವಿಧ ಹಣಕಾಸು ಸಂಸ್ಥೆಗಳಲ್ಲಿ ವಹಿವಾಟುಗಳಿಗೆ ಒಂದೇ ಕೆವೈಸಿ ಅನ್ನು ಬಳಸುವ ವ್ಯವಸ್ಥೆಯನ್ನು ಜಾರಿಗೆ ತರಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ.  ಈ ನಿಯಮ ಜಾರಿಗೆ ಬಂದರೆ ಗ್ರಾಹಕರು ಕೆವೈಸಿ ಅನ್ನು ಸಲ್ಲಿಸಿದ ನಂತರ, ಅದನ್ನು ವಿವಿಧ ಹಣಕಾಸು ಸಂಸ್ಥೆಗಳಾದ್ಯಂತ ವಹಿವಾಟುಗಳಿಗೆ ಹಲವಾರು ಬಾರಿ ಬಳಸಬಹುದು  ಎಂದು ಹೇಳಿದರು.


ಇದನ್ನೂ ಓದಿ- Indian Economy: ಪ್ರಸಕ್ತ ದಶಕದಲ್ಲಿ ಭಾರತದ ಅಭಿವೃದ್ಧಿ ದರ ಶೇ.7 ರಷ್ಟು ಮುಂದುವರೆಯಲಿದೆ


ನೀವು ಪ್ರತಿ ಬಾರಿಯೂ ಪ್ರತ್ಯೇಕ ಕೆವೈಸಿ ಸಲ್ಲಿಸಬೇಕಿಲ್ಲ:
ಈ ವ್ಯವಸ್ಥೆಯ ಅನುಷ್ಠಾನದ ನಂತರ, ವಿವಿಧ ಸಂಸ್ಥೆಗಳಲ್ಲಿನ ವಹಿವಾಟುಗಳಿಗಾಗಿ ನೀವು ಪ್ರತಿ ಬಾರಿ ನಿಮ್ಮ ಕೆವೈಸಿ ಅನ್ನು ನೀಡಬೇಕಾಗಿಲ್ಲ. ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿದ ಸರ್ಕಾರ ಮತ್ತು ನಿಯಂತ್ರಕರನ್ನು ಒಂದೇ ವೇದಿಕೆಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಇದು ವ್ಯವಹಾರವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ  ಎಂದು ಹಣಕಾಸು ಸಚಿವರು ಹೇಳಿದರು. 


ವಾಸ್ತವವಾಗಿ, ಬ್ಯಾಂಕಿಂಗ್, ವಿಮೆ ಮತ್ತು ಬಂಡವಾಳ ಮಾರುಕಟ್ಟೆಗಳಲ್ಲಿ ಏಕರೂಪದ ಕೆವೈಸಿ ಬಳಕೆಯ ವಿಷಯವನ್ನು ಕಳೆದ ವಾರ ಹಣಕಾಸು ನಿಯಂತ್ರಕರು ಮತ್ತು ಹಣಕಾಸು ಸಚಿವರ ಸಭೆಯಲ್ಲಿ ಚರ್ಚಿಸಲಾಗಿದೆ.


ಇದನ್ನೂ ಓದಿ- SBI: ವಿಶೇಷ ನಿಶ್ಚಿತ ಠೇವಣಿ ಯೋಜನೆ ಅನ್ನು ಮಾರ್ಚ್ 31, 2023 ರವರೆಗೆ ವಿಸ್ತರಿಸಿದ ಎಸ್‌ಬಿಐ


ಯುಪಿಐ ವಹಿವಾಟುಗಳನ್ನು ಒಂದು ಶತಕೋಟಿಗೆ ಕೊಂಡೊಯ್ಯಲು ಉದ್ದೇಶಿಸಿರುವ
ಸಾಮಾನ್ಯ ಕೆವೈಸಿ ಸಾಮಾನ್ಯ ಜನರು ವಿವಿಧ ಸೇವೆಗಳಿಗೆ ಪ್ರತ್ಯೇಕ ಪೇಪರ್‌ಗಳನ್ನು ಸಲ್ಲಿಸುವ ಅಗತ್ಯವನ್ನು ನಿವಾರಿಸುತ್ತದೆ. ಜುಲೈನಲ್ಲಿ ಯುಪಿಐ ಮೂಲಕ 10.62 ಲಕ್ಷ ಕೋಟಿ ರೂ.ಗೆ ವಹಿವಾಟು ನಡೆಸಲಾಗಿದ್ದು, 6.28 ಬಿಲಿಯನ್ ವಹಿವಾಟು ನಡೆದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ದೈನಂದಿನ ಯುಪಿಐ ವಹಿವಾಟಿನ ಸಂಖ್ಯೆಯನ್ನು ಒಂದು ಬಿಲಿಯನ್‌ಗೆ ಹೆಚ್ಚಿಸುವ ಉದ್ದೇಶವಿದೆ ಎಂದವರು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.