Standard Deduction Relief : ಕರೋನಾ ಸಾಂಕ್ರಾಮಿಕ ರೋಗದಿಂದಾಗಿ, 2022-23 ರ ಸಾಮಾನ್ಯ ಬಜೆಟ್‌ನಲ್ಲಿ ವೇತನ ವರ್ಗಕ್ಕೆ ಯಾವುದೇ ರೀತಿಯ ವಿನಾಯಿತಿ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ 2023-24ರ ಬಜೆಟ್‌ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಡಲಾಗಿದೆ. ಚುನಾವಣೆಗೂ ಮುನ್ನ ಮಂಡಿಸಲಿರುವ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ಬಜೆಟ್ ಮೇಲೆ ನಿರೀಕ್ಷೆ ಹೆಚ್ಚಾಗಿರಲು ಇದೂ ಒಂದು ಕಾರಣ. ಕರೋನಾ ನಂತರ ಹೆಚ್ಚುತ್ತಿರುವ ಹಣದುಬ್ಬರ ದರವನ್ನು ಗಮನದಲ್ಲಿಟ್ಟುಕೊಂಡು ಹಣಕಾಸು ಸಚಿವರು ಉದ್ಯೋಗಿಗಳಿಗೆ ಸ್ವಲ್ಪ ಮಟ್ಟಿನ ವಿನಾಯಿತಿ ನೀಡುವ ಸಾಧ್ಯತೆ ಇದೆ ಎಂದೇ  ನಿರೀಕ್ಷಿಸಲಾಗಿದೆ.


COMMERCIAL BREAK
SCROLL TO CONTINUE READING

ಏನು ಹೇಳುತ್ತಾರೆ ತಜ್ಞರು : 
ಉದ್ಯೋಗ ವೃತ್ತಿಯ ಸ್ಟ್ಯಾಂಡರ್ಡ್ ಡಿಡೆಕ್ಷನ್ ಮಿತಿಯನ್ನು ಹೆಚ್ಚಿಸಲು ತೆರಿಗೆ ತಜ್ಞರು ಶಿಫಾರಸು ಮಾಡಿದ್ದಾರೆ. ಕಾರ್ಮಿಕ ವರ್ಗಕ್ಕೆ ಈ ಬಾರಿ ಹಣಕಾಸು ಸಚಿವಾಲಯ ತೆರಿಗೆ ವಿನಾಯಿತಿ ನೀಡಬೇಕು ಎನ್ನುವುದು ತಜ್ಞರ ಅಭಿಪ್ರಾಯ. ಕರೋನಾ ನಂತರ ಕಚೇರಿ ಪುನರಾರಂಭದಿಂದ ಸಾರಿಗೆ, ಬಾಡಿಗೆ ಇತ್ಯಾದಿ ಖರ್ಚು ಹೆಚ್ಚಾದ ಕಾರಣ ಇಲ್ಲಿ ಉದ್ಯೋಗ ವರ್ಗಕ್ಕೆ ಪರಿಹಾರ ನೀಡುವುದು ಅನಿವಾರ್ಯವಾಗಿದೆ. ಇಷ್ಟೇ ಅಲ್ಲ, ಸಾಂಕ್ರಾಮಿಕ ರೋಗದ ಸಮಯದಲ್ಲಿ, ಕೆಲವು ಕಂಪನಿಗಳು ವರ್ಕ್ ಫ್ರಮ್ ಹೋಂ ನೀಡಿ ತಮ್ಮ ತಮ್ಮ ಊರುಗಳಿಗೆ ತೆರಳಲು ಅವಕಾಶ ನೀಡಿತ್ತು. 


ಇದನ್ನೂ ಓದಿ :ಹೊಸ ವರ್ಷದಲ್ಲಿ ಕೇವಲ 5 ಲಕ್ಷ ರೂ.ಗಳಿಗೆ ಲಭ್ಯವಾಗುತ್ತಿದೆ ಮಾರುತಿ ಬಲೆನೊ


ಸ್ಟ್ಯಾಂಡರ್ಡ್ ಡಿಡಕ್ಷನ್ 75 ಸಾವಿರ ರೂಪಾಯಿ : 
ಈಗ ಕಂಪನಿಗಳು ಉದ್ಯೋಗಿಗಳನ್ನು ಮತ್ತೆ ವಾಪಸ್ ಕರೆಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕಚೇರಿಗೆ ಸೇರಲು ಮತ್ತೆ ತಮ್ಮ ಊರೂಗಳಿಂದ ಬೇರೆ  ನಗರಗಳಿಗೆ ಹಿಂತಿರುಗುವುದು ಅನಿವಾರ್ಯವಾದ ಕಾರಣ ಅನೇಕ ವಸ್ತುಗಳ ವೆಚ್ಚವನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಸ್ಟ್ಯಾಂಡರ್ಡ್ ಡಿಡೆಕ್ಷನ್ ಮೊತ್ತವನ್ನು ಅಪ್ಡೇಟ್ ಮಾಡುವ ಅವಶ್ಯಕತೆಯಿದೆ. ಹಾಗಾಗಿ ಈ ಬಾರಿಯ ಕೇಂದ್ರ ಬಜೆಟ್‌ನಿಂದ ಹಣಕಾಸು ಸಚಿವರು ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50,000 ರೂ.ನಿಂದ 75,000 ರೂ.ಗೆ ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ. ಇದು ತೆರಿಗೆದಾರರಿಗೆ ಅಗತ್ಯವಾದ ಪರಿಹಾರವನ್ನು ನೀಡುತ್ತದೆ.


ಸ್ಟ್ಯಾಂಡರ್ಡ್ ಡಿಡಕ್ಷನ್ ಎಂದರೇನು? : 
ವೇತನದಾರರಿಗೆ ಎಲ್ಲಾ ರೀತಿಯ ವೆಚ್ಚಗಳ ಮೇಲೆ ತೆರಿಗೆ ವಿನಾಯಿತಿ ನೀಡಲು ಹಣಕಾಸು ಸಚಿವಾಲಯವು ಒಂದು ಮಿತಿಯನ್ನು ನಿಗದಿಪಡಿಸಿದೆ. ವೈದ್ಯಕೀಯ ವೆಚ್ಚ, ಸಾರಿಗೆ ಭತ್ಯೆ ಇತ್ಯಾದಿಗಳ ಖಾತೆಯಲ್ಲಿ 40,000  ರೂಪಾಯಿ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 2018-19 ನೇ ಸಾಲಿನಲ್ಲಿ ಪುನಃ ಪರಿಚಯಿಸಲಾಗಿದೆ. ಈ ಹಿಂದೆ ವೇತನ ವರ್ಗದವರಿಗೆ ಆದಾಯ ತೆರಿಗೆಯಿಂದ ಮುಕ್ತಿ ನೀಡಲು ಸಾರಿಗೆ ಭತ್ಯೆ ಹಾಗೂ ವೈದ್ಯಕೀಯ ಭತ್ಯೆಯಾಗಿ 19,200 ಹಾಗೂ 15 ಸಾವಿರ ರೂ.  ನೀಡಲಾಗುತ್ತಿತ್ತು. ಇವೆರಡೂ ಸೇರಿದರೆ ಈ ಮೊತ್ತ  34,200 ರೂ. ಆಗಲಿದೆ. 


ಇದನ್ನೂ ಓದಿ : Arecanut today price: ಮಂಗಳೂರು ಮಾರುಕಟ್ಟೆಯ ಇಂದಿನ ಅಡಿಕೆ ಧಾರಣೆ


ಇದಾದ ನಂತರ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 40,000 ರೂ.ಗೆ ಹೆಚ್ಚಿಸಲಾಯಿತು. ನಂತರ ಅದನ್ನು 50,000 ರೂ.ಗೆ ಹೆಚ್ಚಿಸಲಾಯಿತು. ಈ ಫ್ಲಾಟ್ ಮೊತ್ತವನ್ನು ತೆರಿಗೆದಾರರ ಒಟ್ಟು ಸಂಬಳದಿಂದ ಕಡಿಮೆ ಮಾಡಲಾಗುತ್ತದೆ. ಇದರ ಮೇಲೆ ಸಂಪೂರ್ಣ ತೆರಿಗೆ ವಿನಾಯಿತಿ ಇರಲಿದೆ. ಇದರ ಅಡಿಯಲ್ಲಿ ವಿನಾಯಿತಿ ಪಡೆಯಲು ಯಾವುದೇ ರೀತಿಯ ಕ್ಲೈಮ್ ಅಗತ್ಯವಿಲ್ಲ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.