Cryptocurrency In India: ದೇಶದ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಡಿಸೆಂಬರ್‌ನಿಂದ ಭಾರಿ ಏರಿಳಿತ ಕಂಡುಬರುತ್ತಿದೆ. ಇದಕ್ಕೆ ಕಾರಣ ಎಂದರೆ ಡಿಸೆಂಬರ್‌ನಲ್ಲಿ, ಸರ್ಕಾರ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಮಸೂದೆಯನ್ನು ಕಾನೂನು ತರಲಿದೆ ಎಂಬ ಊಹಾಪೋಹ. ಈ ಹಿನ್ನೆಲೆಯಲ್ಲಿ  ಹೂಡಿಕೆದಾರರಿಂದ ಹಿಡಿದು ಕ್ರಿಪ್ಟೋ ಎಕ್ಸ್‌ಚೇಂಜ್‌ಗಳು ಮತ್ತು ಕ್ರಿಪ್ಟೋಕರೆನ್ಸಿಗಳವರೆಗೆ ಎಲ್ಲರಲ್ಲೂ ಗೊಂದಲದ ವಾತಾವರಣ ನಿರ್ಮಾಣಗೊಂಡಿದೆ. ಜನರು ತರಾತುರಿಯಲ್ಲಿ ಮಾರಾಟ  ಪ್ರಕ್ರಿಯೆಯಲ್ಲಿ ತೊಡಗಿದರು ಮತ್ತು ಹಲವರು ಅದನ್ನು ಮಾರಾಟ  ಮಾಡಬೇಕೆ ಅಥವಾ ಇತ್ತುಕೊಳ್ಳಬೇಕೆ ಎಂಬುದರ ಬಗ್ಗೆ ಗೊಂದಲಕ್ಕೊಳಗಾದರು.


COMMERCIAL BREAK
SCROLL TO CONTINUE READING

ಡಿಜಿಟಲ್ ಆಸ್ತಿಗಳ ಮೇಲಿನ ತೆರಿಗೆ
ಆದರೆ, ಈ ಬಾರಿ ಬಜೆಟ್‌ನಲ್ಲಿ ಡಿಜಿಟಲ್ ಆಸ್ತಿಗಳ ಹೆಸರಿನಲ್ಲಿ ಕ್ರಿಪ್ಟೋಕರೆನ್ಸಿಗಳ ಮೇಲೆ ತೆರಿಗೆ ವಿಧಿಸುವುದಾಗಿ ಸರ್ಕಾರ ಘೋಷಿಸಿದ ಕೂಡಲೇ ಸರ್ಕಾರ ಅವುಗಳನ್ನು ನಿಷೇಧಿಸುವುದಿಲ್ಲ ಎಂಬುದು ಇದೀಗ ಜನರಿಗೆ ಮನವರಿಕೆಯಾಗಿದೆ. ಹಣಕಾಸು ಕಾರ್ಯದರ್ಶಿ (Finance Secretary) ಟಿವಿ ಸೋಮನಾಥನ್ (TV Somanathan) ಕೂಡ ಕ್ರಿಪ್ಟೋ (Cryptocurrency) ಅಕ್ರಮವಲ್ಲ ಎಂದು ಇದೀಗ ಸ್ಪಷ್ಟಪಡಿಸಿದ್ದಾರೆ. ಆದರೆ, ಹಣಕಾಸು ಕಾರ್ಯದರ್ಶಿ ಇದನ್ನು ಕಾನೂನುಬದ್ಧ ಎಂದೂ ಕೂಡ ಹೇಳಿಲ್ಲ. NITI ಆಯೋಗ್ (NITI Aayog) CEO ಅಮಿತಾಬ್ ಕಾಂತ್ (Amitabh Kant) ಕೂಡ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಕ್ರಿಪ್ಟೋ ನಿಷೇಧಿಸುವುದು ಕಷ್ಟ ಎಂದು ಹೇಳಿದ್ದಾರೆ.


ಇದುವರೆಗೆ ಕ್ರಿಪ್ಟೋವನ್ನು ನಿಷೇಧಿಸಲಾಗಿಲ್ಲ ಎಂಬುದು ಹೇಳಿಕೆಗಳಲ್ಲಿ ಮಾತ್ರ ಸೂಚನೆಗಳಿವೆ, ಆದರೆ ಈಗ ಹೂಡಿಕೆದಾರರು ಕ್ರಿಪ್ಟೋಗೆ ಕಾನೂನು ಸ್ಥಾನಮಾನ ಸಿಗುವುದರ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ತೆರಿಗೆಯನ್ನು ಘೋಷಿಸಿದಾಗಿನಿಂದ, ಹೂಡಿಕೆದಾರರಿಗೆ ಏನಾಗಲಿದೆ ಎಂಬುದು ಖಚಿತವಾಗಿದೆ ಮತ್ತು ಸರ್ಕಾರ ಸದ್ಯಕ್ಕೆ ಅವುಗಳನ್ನು ನಿಷೇಧಿಸುವುದಿಲ್ಲ ಎಂಬುದು ಜನರಿಗೆ ಮನವರಿಕೆಯಾಗಿದೆ.


ಇದನ್ನೂ ಓದಿ-One Nation One Registration : ಈಗ ಭೂಮಿಗೂ ಬರಲಿದೆ ‘ಆಧಾರ್ ಸಂಖ್ಯೆ' : ಸರ್ಕಾರ ಆರಂಭಿಸುತ್ತಿದೆ ಹೊಸ ಯೋಜನೆ!


ಕ್ರಿಪ್ಟೋದಲ್ಲಿ ಹೆಚ್ಚುತ್ತಿರುವ ನೋಂದಣಿಗಳಿಂದ ಹೂಡಿಕೆದಾರರ ಈ ವಿಶ್ವಾಸವು ಬಲಗೊಳ್ಳುತ್ತಿದೆ. ಆದರೆ, ಈ ಬಗ್ಗೆ ಸರ್ಕಾರ ಎಷ್ಟು ದಿನ ತನ್ನ ನಿಲುವನ್ನು ಸ್ಪಷ್ಟಪಡಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.


ಇದನ್ನೂ ಓದಿ-Gas Cylinder Booking : ಈಗ ನೀವು LPG ಸಿಲಿಂಡರ್ ಅನ್ನು ಉಚಿತವಾಗಿ ಪಡೆಯಬಹುದು! ಅದಕ್ಕೆ ತಕ್ಷಣ ಈ ಕೆಲಸ ಮಾಡಿ


ಎಲ್ಲಾ ದೇಶಗಳ ಕ್ರಿಪ್ಟೋ ಹೂಡಿಕೆದಾರರನ್ನು ಭಾರತದಲ್ಲಿನ ಕ್ರಿಪ್ಟೋ ಹೂಡಿಕೆದಾರರೊಂದಿಗೆ ಹೋಲಿಸಿದರೆ, ನಮ್ಮ ದೇಶವು ಇತರ ದೇಶಗಳಿಗಿಂತ ಹೆಚ್ಚಿನ ಕ್ರಿಪ್ಟೋ ಹೂಡಿಕೆದಾರರನ್ನು ಹೊಂದಿದೆ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ. $10 ಮಿಲಿಯನ್ ಮೌಲ್ಯದ ಒಟ್ಟು ಜಾಗತಿಕ ಕ್ರಿಪ್ಟೋಕರೆನ್ಸಿ ವರ್ಗಾವಣೆಯಲ್ಲಿ ಭಾರತವು ಶೇ.41ರಷ್ಟು ಪಾಲನ್ನು ಹೊಂದಿದೆ. ಈ ಅಂಕಿ ಅಂಶವು ಇತರ ಯಾವುದೇ ದೇಶಗಳಿಗಿಂತ ಹೆಚ್ಚು. ಈ ಹೂಡಿಕೆಯಲ್ಲಿ ಕಪ್ಪು, ಬಿಳಿ ಎಲ್ಲಾ ರೀತಿಯ ಹಣವೂ ಸೇರಿದೆ ಹೇಳಲಾಗುತ್ತಿದೆ. ಇದೇ ವೇಳೆ ಹಿಂದೆ ಬಂದ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಇದುವರೆಗೆ 6 ಲಕ್ಷ ಕೋಟಿಗೂ ಹೆಚ್ಚು ಕ್ರಿಪ್ಟೋ ಹೂಡಿಕೆಯಾಗಿದೆ. ಕೆಲವು ವರದಿಗಳು 10 ಲಕ್ಷ ಕೋಟಿ ಹೂಡಿಕೆಯ ಬಗ್ಗೆಯೂ ಕೂಡ ಹೇಳುತ್ತವೆ.


ಇದನ್ನೂ ಓದಿ-ನಿಮ್ಮ PF ಖಾತೆ ನಿಷ್ಕ್ರಿಯವಾದಾಗ ಅದರಲ್ಲಿ ಇದ್ದ ಹಣ ಏನಾಗುತ್ತೆ? ನಿಯಮಗಳೇನು ಗೊತ್ತಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.