ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಮೀನು ಉತ್ಪಾದನೆ
ಸಿಲಿಕಾನ್ ಸಿಟಿಯ ಕೆರೆಗಳು ಕಲುಷಿತಗೋಳ್ಳುತ್ತಿವೆ. ಹೀಗಾಗಿ, ಒಂದೆಡೆ ನೀರನ್ನು ಮುಟ್ಟುವುದಕ್ಕೆ ಸಹ ಜನರು ಹಿಂದೇಟು ಹಾಕುತ್ತಾರೆ. ಆದರೆ ನಗರದಲ್ಲಿ ಇರುವ 196 ಕೆರೆಗಳಲ್ಲಿ ಒಂದು ವರ್ಷದಲ್ಲಿ ಒಟ್ಟು 9126 ಟನ್ ಮೀನು ಉತ್ಪಾದನೆ ಮಾಡಲಾಗಿದೆ.
ಮೀನು ಅಂದರೆ ಯಾರಿಗೆ ಇಷ್ಟ ಇಲ್ಲಾ ಹೇಳಿ, ಮೀನು ಎಂದರೆ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅಚ್ಚುಮೆಚ್ಚಿನ ಖಾದ್ಯವಾಗಿದೆ. ಮೀನು ಉತ್ಪಾದನೆ ನಗರದಲ್ಲಿ ವರ್ಷಕ್ಕೆ ಸಾವಿರಾರು ಟನ್ ಗಳಷ್ಟು ಮೀನು ಉತ್ಪಾದನೆ ಆಗುತ್ತಿದೆ. ಅಷ್ಟಕ್ಕೂ ಪ್ರತಿವರ್ಷ ಸಿಲಿಕಾನ್ ಸಿಟಿಯಲ್ಲಿ ಎಷ್ಟು ಟನ್ ಮೀನು ಉತ್ಪಾದನೆ ಆಗುತ್ತಿದೆ ಅಂತೀರಾ ಈ ಸ್ಟೊರಿ ಓದಿ...
ಸಿಲಿಕಾನ್ ಸಿಟಿಯ ಕೆರೆಗಳು ಕಲುಷಿತಗೋಳ್ಳುತ್ತಿವೆ. ಹೀಗಾಗಿ, ಒಂದೆಡೆ ನೀರನ್ನು ಮುಟ್ಟುವುದಕ್ಕೆ ಸಹ ಜನರು ಹಿಂದೇಟು ಹಾಕುತ್ತಾರೆ. ಆದರೆ ನಗರದಲ್ಲಿ ಇರುವ 196 ಕೆರೆಗಳಲ್ಲಿ ಒಂದು ವರ್ಷದಲ್ಲಿ ಒಟ್ಟು 9126 ಟನ್ ಮೀನು ಉತ್ಪಾದನೆ ಮಾಡಲಾಗಿದೆ.
ವಾಸ್ತವವಾಗಿ, ಮೀನುಗಾರಿಕೆ ಇಲಾಖೆ ಸಮುದ್ರ ಹಾಗೂ ನದಿಗಳಲ್ಲಿನ ಮೀನುಗಾರಿಕೆಯನ್ನಷ್ಟೆ ಅಲ್ಲದೆ ಬೆಂಗಳೂರಿನಂತಹ ನಗರಗಳಲ್ಲಿಯೂ ಸಹ ಮೀನುಗಾರಿಕೆಗೆ ವಿಶೇಷ ಒತ್ತು ನೀಡುತ್ತಿದೆ.
ಇದನ್ನೂ ಓದಿ- ಟೊಮೇಟೊ ಬೆಲೆ ಮುಗಿಲು ಮುಟ್ಟಲು ಇದೇ ಕಾರಣ! ಮತ್ತೆ ದರ ಇಳಿಕೆ ಯಾವಾಗ ?
ಇನ್ನು ನಗರದಲ್ಲಿ ಮೀನು ಉತ್ಪಾದನೆ ಹೆಚ್ಚಾಗಲು ಕಾರಣ ನೋಡುವುದಾದರೆ:-
>> ನಗರದ ಕೆರೆಗಳಲ್ಲಿ ಸ್ವಚ್ಚತೆಗೆ ಹೆಚ್ಚಿದ ಆದ್ಯತೆ
>> ನೀರಿನ ಗುಣಮಟ್ಟ ಆಧರಿಸಿ ಲೈಸೆನ್ಸ್ ನೀಡುತ್ತಿರುವ ಇಲಾಖೆ
>> ಮೀನುಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರೊತ್ಸಾಹ
>> ನಗರದ 196 ಕೆರೆಗಳಲ್ಲಿ ಮೀನುಗಾರಿಕೆ ಅವಕಾಶ
>> ಮೀನುಗಾರರ ಸಹಕಾರ ಸಂಘಗಳಿಗೆ ಗುತ್ತಿಗೆ ಆಧಾರದ ಮೇಲೆ ಟೆಂಡರ್ ನೀಡಲಾಗಿದೆ.
>> ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸುವ ಕೆರೆಗಳಲ್ಲಿ ಮಾತ್ರ ಮೀನುಗಾರಿಕೆ ಅವಕಾಶ
>> ಟೆಂಡರ್ ಪ್ರಕ್ರಿಯೆ ನಡೆಸಿ ಖಾಸಗಿ ವ್ಯಕ್ತಿಗಳಿಗೆ ಮೀನುಗಾರಿಕೆ ಅನುಮತಿ
>> ಕ್ಯಾಟಗರಿ ಆಧರಿಸಿ ಈ ಟೆಂಡರ್ ಮಾಡಲಾಗುತ್ತೆ
>> ಪ್ರಧಾನ ಮಂತ್ರಿ ಮತ್ಸ್ಯ ಸಂಪತ್ತು ಯೋಜನೆ ಕಟ್ಟುನಿಟ್ಟಾಗಿ ಅನುಷ್ಠಾನ
>> ಅತೀ ವೇಗವಾಗಿ ಬೆಳೆಯುವ ಹಾಗೂ ಒಳ್ಳೆಯ ಬೆಲೆ ಇರುವ ಮೀನು ಸಾಗಣಿಕೆ.
ಇದನ್ನೂ ಓದಿ- 7th Pay Commission: ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳ ಬಹುತೇಕ ಫಿಕ್ಸ್!
ಮೀನುಗಾರಿಕೆ ಇಲಾಖೆಗೆ ತಿಂಗಳಲ್ಲಿ 75 ಲಕ್ಷ ಆದಾಯ:
ಇನ್ನೂ ಈ ಕ್ರಮದಿಂದಾಗಿ ಮೀನುಗಾರಿಕೆ ಇಲಾಖೆಗೆ ತಿಂಗಳಿಗೆ 75ಲಕ್ಷ ಆದಾಯ ಬರುತ್ತಿದ್ದು
ಮುಂದಿನ ವರ್ಷ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಮೀನು ಉತ್ಪಾದನೆ ಗುರಿ ಹೊಂದಲಾಗಿದೆ. ಈ ವರ್ಷ ಶೇಕಡಾ 30 ರಷ್ಟು ಮೀನು ಉತ್ಪಾದನೆ ಮಾಡಲಾಗಿದೆ. ನಗರದಲ್ಲಿ ಮೀನಿನ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಂದಿನ ಆರ್ಥಿಕ ವರ್ಷಕ್ಕೆ 11 ಸಾವಿರ ಟನ್ ಮೀನು ಉತ್ಪಾದನೆ ಮಾಡುವ ಗುರಿ ಹೊಂದಲಾಗಿದ್ದು, ಪ್ರತಿವರ್ಷ ನಗರಕ್ಕೆ 40ರಿಂದ 45 ಸಾವಿರ ಟನ್ ಮೀನು ಆಮದು ಕೂಡ ಮಾಡಲಾಗುತ್ತದೆ. ಕೇರಳ, ಗೋವಾ , ಆಂದ್ರಪ್ರದೇಶದ, ತಮಿಳನಾಡು ಕರಾವಳಿ ಭಾಗದಿಂದ ಮೀನು ಆಮದು ಮಾಡಲಾಗುತ್ತಿದೆ.
ಒಟ್ಟಾರೆಯಾಗಿ ನಗರದಲ್ಲಿ ಮತ್ಸ್ಯ ಉತ್ಪಾದನೆ ಹೆಚ್ಚಾಗುತ್ತಿದ್ದು ಸಿಲಿಕಾನ್ ಸಿಟಿ ಮತ್ಸ್ಯ ಪ್ರಿಯರಿಗೆ ಸಂತಸದ ಸುದ್ದಿ ಆಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/38l6m8543Vk?feature=share
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.