Fixed Deposit: ಎಫ್‌ಡಿಯಲ್ಲಿ ಎಸ್ಬಿಐಗಿಂತ ಹೆಚ್ಚಿನ ಬಡ್ಡಿಯನ್ನು ನೀಡುತ್ತಿವೆ ಈ ಬ್ಯಾಂಕುಗಳು
Fixed Deposit: ನೀವು ಫಿಕ್ಸೆಡ್ ಡೆಪಾಸಿಟ್ (FD) ನಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ ಮಾತ್ರ. 1 ರಿಂದ 5 ವರ್ಷಗಳವರೆಗೆ ಎಫ್‌ಡಿಯಲ್ಲಿ ಹೆಚ್ಚಿನ ಬಡ್ಡಿಯನ್ನು ನೀಡುತ್ತಿರುವ ಅಂತಹ ಬ್ಯಾಂಕ್‌ಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಲಿದ್ದೇವೆ.
Fixed Deposit: ಹೂಡಿಕೆ ಮಾಡಲು ಬಯಸುವ ಆದರೆ ಅಪಾಯವನ್ನು ತೆಗೆದುಕೊಳ್ಳಲು ಬಯಸದವರಿಗೆ ಫಿಕ್ಸೆಡ್ ಡೆಪಾಸಿಟ್ (ಎಫ್‌ಡಿ) ಉತ್ತಮ ಆಯ್ಕೆಯಾಗಿದೆ. ಆದರೆ ಕಳೆದ ಕೆಲವು ತಿಂಗಳುಗಳಿಂದ, ಎಫ್‌ಡಿ ಮೇಲಿನ ಬಡ್ಡಿದರಗಳು ಗಮನಾರ್ಹವಾಗಿ ಕಡಿಮೆಯಾಗಿದೆ, ಇದರಿಂದಾಗಿ ಹೂಡಿಕೆದಾರರಲ್ಲಿ ಫಿಕ್ಸೆಡ್ ಡೆಪಾಸಿಟ್ ಮೇಲಿನ ಆಸಕ್ತಿ ಕೂಡ ಸ್ವಲ್ಪ ಕಡಿಮೆಯಾಗಿದೆ. ಆದರೆ 1 ರಿಂದ 5 ವರ್ಷಗಳವರೆಗೆ ಎಫ್‌ಡಿಯಲ್ಲಿ ಹೆಚ್ಚಿನ ಬಡ್ಡಿಯನ್ನು ನೀಡುತ್ತಿರುವ ಕೆಲವು ಬ್ಯಾಂಕ್‌ಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.
ಎಸ್‌ಬಿಐ ಕೂಡ ಎಫ್‌ಡಿ ಮೇಲಿನ ಬಡ್ಡಿಯನ್ನು ಹೆಚ್ಚಿಸಿದೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. ಈ ಹೆಚ್ಚಳವು ರೂ. 2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ದೇಶೀಯ ಬೃಹತ್ ಅವಧಿಯ ಠೇವಣಿಗಳ ಮೇಲಿನ ಬಡ್ಡಿಯನ್ನು ಹೆಚ್ಚಿಸಿದೆ. 2 ಕೋಟಿಗಿಂತ ಕಡಿಮೆ ಚಿಲ್ಲರೆ ಅವಧಿಯ ಠೇವಣಿಗಳ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಹೊಸ FD ಬಡ್ಡಿ ದರಗಳು 15 ಡಿಸೆಂಬರ್ 2021 ರಿಂದ ಜಾರಿಗೆ ಬಂದಿವೆ. ಬ್ಯಾಂಕ್ ಎಫ್‌ಡಿ ದರವನ್ನು ಶೇಕಡಾ 0.10 ರಷ್ಟು ಹೆಚ್ಚಿಸಿದೆ. ಆದರೆ ಇದಾದ ನಂತರವೂ ಅತಿ ಹೆಚ್ಚು ಬಡ್ಡಿ ನೀಡುವ ಟಾಪ್ 5 ಬ್ಯಾಂಕ್‌ಗಳ ಪಟ್ಟಿಯಲ್ಲಿ ಎಸ್‌ಬಿಐ ಸೇರ್ಪಡೆಯಾಗಿಲ್ಲ.
ಇದನ್ನೂ ಓದಿ-
1 ವರ್ಷದ FD ಮೇಲೆ ಯಾವ ಬ್ಯಾಂಕ್ ಎಷ್ಟು ಬಡ್ಡಿ ನೀಡುತ್ತಿದೆ?
* ಇಂಡಸ್‌ಇಂಡ್ ಬ್ಯಾಂಕ್- 6% ವಾರ್ಷಿಕ ಬಡ್ಡಿ
* RBL ಬ್ಯಾಂಕ್- 6% ವಾರ್ಷಿಕ ಬಡ್ಡಿ
* DCB ಬ್ಯಾಂಕ್- 5.55% ವಾರ್ಷಿಕ ಬಡ್ಡಿ
* ಬಂಧನ್ ಬ್ಯಾಂಕ್- 5.50% ವಾರ್ಷಿಕ ಬಡ್ಡಿ
* IDFC ಫಸ್ಟ್ ಬ್ಯಾಂಕ್- 5.25% ವಾರ್ಷಿಕ ಬಡ್ಡಿ
2 ವರ್ಷಗಳ ಫಿಕ್ಸೆಡ್ ಡೆಪಾಸಿಟ್ (Fixed Deposit) ಮೇಲೆ ಯಾವ ಬ್ಯಾಂಕ್ ಎಷ್ಟು ಬಡ್ಡಿ ನೀಡುತ್ತಿದೆ?
* ಇಂಡಸ್‌ಇಂಡ್ ಬ್ಯಾಂಕ್- 6% ವಾರ್ಷಿಕ ಬಡ್ಡಿ
* RBL ಬ್ಯಾಂಕ್- 6% ವಾರ್ಷಿಕ ಬಡ್ಡಿ
* DCB ಬ್ಯಾಂಕ್- 5.50% ವಾರ್ಷಿಕ ಬಡ್ಡಿ
* ಬಂಧನ್ ಬ್ಯಾಂಕ್- 5.50% ವಾರ್ಷಿಕ ಬಡ್ಡಿ
* ಆಕ್ಸಿಸ್ ಬ್ಯಾಂಕ್- 5.40% ವಾರ್ಷಿಕ ಬಡ್ಡಿ
3 ವರ್ಷಗಳ ಸ್ಥಿರ ಠೇವಣಿಗಳ ಮೇಲೆ ಯಾವ ಬ್ಯಾಂಕ್ ಹೆಚ್ಚು ಬಡ್ಡಿ ಪಾವತಿಸುತ್ತಿದೆ:
- RBL ಬ್ಯಾಂಕ್- 6.30% ವಾರ್ಷಿಕ ಬಡ್ಡಿ ದರ.
- ಇಂಡಸ್‌ಇಂಡ್ ಬ್ಯಾಂಕ್- 6% ವಾರ್ಷಿಕ ಬಡ್ಡಿ ದರ.
- DCB ಬ್ಯಾಂಕ್- 5.95% ವಾರ್ಷಿಕ ಬಡ್ಡಿ ದರ.
- IDFC ಫಸ್ಟ್ ಬ್ಯಾಂಕ್- 5.75% ವಾರ್ಷಿಕ ಬಡ್ಡಿ ದರ.
- ಸೌತ್ ಇಂಡಿಯನ್ ಬ್ಯಾಂಕ್- 5.50% ವಾರ್ಷಿಕ ಬಡ್ಡಿ ದರ.
ಇದನ್ನೂ ಓದಿ-
5 ವರ್ಷಗಳ FD ಮೇಲೆ ಅತಿ ಹೆಚ್ಚು ಬಡ್ಡಿ ಪಾವತಿಸುತ್ತಿರುವ ಬ್ಯಾಂಕ್:
- RBL ಬ್ಯಾಂಕ್- 6.30% ವಾರ್ಷಿಕ ಬಡ್ಡಿ ದರ.
- IDFC ಫಸ್ಟ್ ಬ್ಯಾಂಕ್- 6% ವಾರ್ಷಿಕ ಬಡ್ಡಿ ದರ.
- ಇಂಡಸ್‌ಇಂಡ್ ಬ್ಯಾಂಕ್- 6% ವಾರ್ಷಿಕ ಬಡ್ಡಿ ದರ.
- DCB ಬ್ಯಾಂಕ್- 5.95% ವಾರ್ಷಿಕ ಬಡ್ಡಿ ದರ.
- Axis Bank- 5.75% ವಾರ್ಷಿಕ ಬಡ್ಡಿ ದರ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.