Oberoi Realty shares rise 3%: ಐಷಾರಾಮಿ ಮನೆಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ದೆಹಲಿ, ನೋಯ್ಡಾ, ಗುರುಗ್ರಾಮ್, ಮುಂಬೈ, ಪುಣೆ, ಬೆಂಗಳೂರು ಮಾತ್ರವಲ್ಲದೆ ಥಾಣೆಯಲ್ಲೂ ಐಷಾರಾಮಿ ಮನೆಗಳ ಖರೀದಿಯಲ್ಲಿ ಭಾರೀ ಏರಿಕೆಯಾಗಿದೆ. ಪ್ರಸಿದ್ಧ ರಿಯಲ್ ಎಸ್ಟೇಟ್ ಕಂಪನಿ ಒಬೆರಾಯ್ ರಿಯಾಲ್ಟಿ ತನ್ನ ಹೊಸ ಯೋಜನೆಗಾಗಿ 3 ದಿನಗಳ ಹಿಂದೆಯಷ್ಟೇ ಬುಕ್ಕಿಂಗ್ ಆರಂಭಿಸಿದ್ದು, ಇಂದು ತನ್ನ ಎಲ್ಲಾ ಫ್ಲಾಟ್‌ಗಳನ್ನು ಮಾರಾಟ ಮಾಡಿದೆ. ಮುಂಬೈ ಮಹಾನಗರ ಪ್ರದೇಶದ (MMR) ಥಾಣೆಯಲ್ಲಿ ತನ್ನ ಹೊಸ ಯೋಜನೆಯ ಬುಕಿಂಗ್ ಪ್ರಾರಂಭವಾದ ನಂತರ ಕಂಪನಿಯು ಕೇವಲ 3 ದಿನಗಳಲ್ಲಿ ಬರೋಬ್ಬರಿ 1,348 ಕೋಟಿ ಮೌಲ್ಯದ ಎಲ್ಲಾ ಐಷಾರಾಮಿ ಫ್ಲಾಟ್‌ಗಳನ್ನು ಮಾರಾಟ ಮಾಡಿದೆ.


COMMERCIAL BREAK
SCROLL TO CONTINUE READING

ಅಕ್ಟೋಬರ್ 18ರಂದು ಬುಕ್ಕಿಂಗ್ ಪ್ರಾರಂಭ


ಕಂಪನಿಯು ಅಕ್ಟೋಬರ್ 18ರಂದು 'ಒಬೆರಾಯ್ ಗಾರ್ಡನ್ ಸಿಟಿ ಥಾಣೆ' ಯೋಜನೆಗಾಗಿ ಬುಕ್ಕಿಂಗ್ ಪ್ರಾರಂಭಿಸಿತು. ಈ ಯೋಜನೆಯನ್ನು ಹಂತ ಹಂತವಾಗಿ ತಯಾರಿಸಿ ಮಾರುಕಟ್ಟೆಗೆ ತರಲಾಗುವುದು. ಷೇರುಪೇಟೆಗೆ ಈ ಮಾಹಿತಿ ನೀಡಿರುವ ಒಬೆರಾಯ್ ರಿಯಾಲ್ಟಿ, ʼಬುಕ್ಕಿಂಗ್ ಆರಂಭದ ಮೊದಲ 3 ದಿನಗಳಲ್ಲಿ 5.65 ಲಕ್ಷ ಚದರ ಅಡಿ (ಕಾರ್ಪೆಟ್ ಏರಿಯಾ)ಗೆ ಸುಮಾರು 1,348 ಕೋಟಿ ರೂ.ಗಳ ಒಟ್ಟು ಬುಕ್ಕಿಂಗ್ ಮೌಲ್ಯವನ್ನು ದಾಖಲಿಸಿದೆ ಎಂದು ತಿಳಿಸಿದೆ. ಒಬೆರಾಯ್ ರಿಯಾಲ್ಟಿ ದೇಶದ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾಗಿದ್ದು, MMRನಲ್ಲಿ 49 ಯೋಜನೆಗಳನ್ನು ಪೂರ್ಣಗೊಳಿಸಿದೆ.


ಇದನ್ನೂ ಓದಿ: ನಿವೃತ್ತ ನೌಕರರ ಮರು ನೇಮಕಕ್ಕೆ ಸರ್ಕಾರ ನಿರ್ಧಾರ !ದೀಪಾವಳಿ ಹೊತ್ತಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಗುಡ್ ನ್ಯೂಸ್


ಯೋಜನೆಯು 5 ಸ್ಟಾರ್ ಹೋಟೆಲ್ ಒಳಗೊಂಡಿದೆ


ಸರಿಸುಮಾರು 75 ಎಕರೆಗಳಲ್ಲಿ ಹರಡಿರುವ ಈ ಯೋಜನೆಯು 30ಕ್ಕೂ ಹೆಚ್ಚು ವಿಶ್ವ ದರ್ಜೆಯ ಸೌಕರ್ಯಗಳೊಂದಿಗೆ ಫ್ಲಾಟ್‌ಗಳು, 5-ಸ್ಟಾರ್ ಡೀಲಕ್ಸ್ JW ಮ್ಯಾರಿಯೊಟ್ ಹೋಟೆಲ್ ಥಾಣೆ ಗಾರ್ಡನ್ ಸಿಟಿ ಮತ್ತು ಒಬೆರಾಯ್ ಇಂಟರ್ನ್ಯಾಷನಲ್ ಸ್ಕೂಲ್ ಅನ್ನು ಒಳಗೊಂಡಿರುತ್ತದೆ. ಮೊದಲ ಹಂತದ ಅಭಿವೃದ್ಧಿಯು 5 ವಸತಿ ಗೋಪುರಗಳನ್ನು ಒಳಗೊಂಡಿರುತ್ತದೆ ಮತ್ತು 2 ಟವರ್‌ಗಳಿಗೆ ಬುಕಿಂಗ್ ಅಕ್ಟೋಬರ್ 18ರಿಂದ ಪ್ರಾರಂಭವಾಯಿತು.


ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ  


ಒಬೆರಾಯ್ ರಿಯಾಲ್ಟಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಒಬೆರಾಯ್, ʼಒಬೆರಾಯ್ ಗಾರ್ಡನ್ ಸಿಟಿ ಥಾಣೆಯಲ್ಲಿ ನಮ್ಮ ಹೊಸ ಯೋಜನೆಗೆ ಅಗಾಧ ಪ್ರತಿಕ್ರಿಯೆಯಿಂದ ನಮಗೆ ತುಂಬಾ ಸಂತೋಷವಾಗಿದೆ. ನಮ್ಮ ಗ್ರಾಹಕರು ನಮ್ಮ ಬ್ರ್ಯಾಂಡ್ ಮತ್ತು ಉತ್ಪನ್ನಗಳಲ್ಲಿ ತೋರಿದ ನಂಬಿಕೆಯು ನಮ್ಮನ್ನು ಇನ್ನಷ್ಟು ಪ್ರೋತ್ಸಾಹಿಸಿದಂತಾಗಿದೆ. ಈ ಯೋಜನೆಗಳು ಸಮಗ್ರ, ಐಷಾರಾಮಿ ಜೀವನ ಅನುಭವ ನೀಡುವ ನಮ್ಮ ದೃಷ್ಟಿಯನ್ನು ಸಾರುತ್ತವೆ. ಇದು ಥಾಣೆಯಲ್ಲಿ ಐಷಾರಾಮಿಗೆ ಹೊಸ ಮಾನದಂಡವನ್ನು ಹೊಂದಿಸುತ್ತದೆ ಎಂಬ ವಿಶ್ವಾಸ ನಮಗಿದೆʼ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಎಸ್‌ಬಿ‌ಐನ ಇಂತಹ ಸೇವಿಂಗ್ಸ್ ಖಾತೆಯಲ್ಲಿ Zero Balanceಗೂ ಬೀಳಲ್ಲ ದಂಡ, ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ


ಸೋಮವಾರ ಷೇರಿನಲ್ಲಿ ಭರ್ಜರಿ ಏರಿಕೆ


ಸೋಮವಾರ ಮಧ್ಯಾಹ್ನ 2.24ಕ್ಕೆ ಒಬೆರಾಯ್ ರಿಯಾಲ್ಟಿಯ ಷೇರುಗಳು BSEಯಲ್ಲಿ 4.09% (79 ರೂ.)ರಷ್ಟು ಏರಿಕೆಯಾಗಿ 2010 ರೂ. ತಲುಪಿತ್ತು. ಈ ಮೂಲಕ ಕಂಪನಿಯ ಷೇರುಗಳು ತಮ್ಮ 52 ವಾರದ ಗರಿಷ್ಠ ಮಟ್ಟದ ಹತ್ತಿರದಲ್ಲಿ ವಹಿವಾಟು ನಡೆಸುತ್ತಿವೆ. ಒಬೆರಾಯ್ ರಿಯಾಲ್ಟಿ ಷೇರುಗಳು 52 ವಾರದ ಗರಿಷ್ಠ 2067.65 ರೂ. ಇದ್ದರೆ, 52 ವಾರದ ಕನಿಷ್ಠ 1051.25 ರೂ. ಇದೆ. ಈ ರಿಯಲ್ ಎಸ್ಟೇಟ್ ಕಂಪನಿಯ ಪ್ರಸ್ತುತ ಮಾರುಕಟ್ಟೆಯ ಮೌಲ್ಯವು 72,664.09 ಕೋಟಿ ರೂ. ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.