Free Gas Connection: ಪ್ರಧಾನ ಮಂತ್ರಿ ಉಜ್ವಲಾ ಯೋಜನೆ (PMUY) ಇದು ಕೇಂದ್ರ ಸರ್ಕಾರದ ಒಂದು ಯೋಜನೆಯಾಗಿದೆ. ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಅಡುಗೆ ಅನಿಲವನ್ನು ಪೂರೈಸುವುದು ಈ ಯೋಜನೆಯ ಗುರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು 2016 ಮೇ 1ರಂದು ಈ ಯೋಜನೆಯನ್ನು ಉದ್ಘಾಟಿಸಿದರು. ಮೊದಲ ಹಂತದಲ್ಲಿ ಈ ಯೋಜನೆಗಾಗಿ ₹80 ಶತಕೋಟಿ ಮೊತ್ತವನ್ನು ಮೀಸಲಿರಿಸಲಾಗಿತ್ತು. ಈ ಯೋಜನೆಗೆ ಇದೀಗ ಉಜ್ವಲ ಯೋಜನೆ 2.0 ಎಂದು ಮರುಹೆಸರಿಸಲಾಯಿತು.


COMMERCIAL BREAK
SCROLL TO CONTINUE READING

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಮ್ಮ ದೇಶದ ಹಳ್ಳಿಗಳಲ್ಲಿರುವ ಜನರು ಅಡುಗೆ ವಿಚಾರಕ್ಕೆ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸದಿರಲಿ, ಹೊಗೆಮುಕ್ತರಾಗಿ ಅಡುಗೆ ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲಿ ಅನ್ನೋ ಉದ್ದೇಶದಿಂದ 2016ರಲ್ಲಿ ಉಜ್ವಲ ಯೋಜನೆಯನ್ನು ಜಾರಿಗೆ ತಂದರು. ಈ ಒಂದು ಯೋಜನೆಯ ಮೂಲಕ ದೇಶದ ಕೋಟ್ಯಂತರ ಜನರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಸಿಗುತ್ತಿದೆ.


ಇದನ್ನೂ ಓದಿ: ಯಶವಂತಪುರ - ಹಜರತ್ ನಿಜಾಮುದ್ದೀನ್ ಗೆ ಏಕಮುಖ ವಿಶೇಷ ರೈಲು ಸೇವೆ


ಉಚಿತ ಗ್ಯಾಸ್ ಸಿಲಿಂಡರ್‌ಗೆ ಅರ್ಜಿ


ಸಣ್ಣ ಸಣ್ಣ ಹಳ್ಳಿಗಳಲ್ಲಿ ಸಹ ಈ ಯೋಜನೆಯ ಸೌಲಭ್ಯ ಸಿಗಬೇಕು ಅನ್ನೋದು ಕೇಂದ್ರ ಸರ್ಕಾರದ ಉದ್ದೇಶವಾಗಿದ್ದು, ಉಜ್ವಲ ಯೋಜನೆಯ ಮೂಲಕ ಉಚಿತವಾಗಿ ಗ್ಯಾಸ್ ಸಿಲಿಂಡರ್ ಜೊತೆಗೆ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಪಡೆಯಲು ಸಬ್ಸಿಡಿಯನ್ನು ಸಹ ನೀಡಲಾಗುತ್ತದೆ. ಹೀಗಾಗಿ ಇದು ಹಳ್ಳಿಗಳಲ್ಲಿ ವಾಸ ಮಾಡುವ ಜನರಿಗೆ ಹೆಚ್ಚಿಗೆ ಅನುಕೂಲವಾಗುತ್ತಿದೆ. ಇದರಿಂದ ಹಳ್ಳಿಯ ಜನರು ತೊಂದರೆ ಇಲ್ಲದೇ ಅಡುಗೆ ಮಾಡಬಹುದು. 2016ರಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಈಗಾಗಲೇ 1 ಕೋಟಿಗಿಂತ ಹೆಚ್ಚು ಫಲಾನುಭವಿಗಳು ಈ ಯೋಜನೆಯ ಮೂಲಕ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆದುಕೊಂಡಿದ್ದಾರೆ. ಇದೀಗ ಉಜ್ವಲ ಯೋಜನೆಯ 2ನೇ ಹಂತದ ಪ್ರಕ್ರಿಯೆ ಶುರುವಾಗಿದ್ದು, ಯಾರೆಲ್ಲಾ ಈ ಯೋಜನೆಯ ಮೂಲಕ ಉಚಿತ ಗ್ಯಾಸ್ ಸಿಲಿಂಡರ್ ಪಡೆಯಬೇಕು ಎಂದುಕೊಂಡಿದ್ದಾರೋ ಅವರೆಲ್ಲರೂ ಸಹ ಸರ್ಕಾರದಿಂದ ಅಧಿಕೃತ ಮಾಹಿತಿ ಸಿಗುತ್ತಿದ್ದ ಹಾಗೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.  


PMUY ಯೋಜನೆಯ ಅರ್ಹತೆ


  • ಪಿಎಂ ಉಜ್ವಲ ಯೋಜನೆಯ 2ನೇ ಹಂತದಲ್ಲಿ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಮಾತ್ರ ಅರ್ಹತೆ ಇರುತ್ತದೆ

  • ಅರ್ಜಿ ಸಲ್ಲಿಸುವ ಮಹಿಳೆ ಭಾರತೀಯರಾಗಿರಬೇಕು ಮತ್ತು ಅವರ ವಯಸ್ಸು 18 ವರ್ಷ ತುಂಬಿರಬೇಕು.

  • ಹಳ್ಳಿಯಿಂದ ಅರ್ಜಿ ಸಲ್ಲಿಸುವವರ ವಾರ್ಷಿಕ ಆದಾಯ 1 ಲಕ್ಷ ರೂ.ಗಿಂತ ಕಡಿಮೆ ಇರಬೇಕು. ನಗರದಿಂದ ಅರ್ಜಿ ಸಲ್ಲಿಸುವವರ ಆದಾಯ 1 ಲಕ್ಷ ರೂ.ಗಿಂತ ಕಡಿಮೆ ಇರಬೇಕು.

  • ಅರ್ಜಿ ಸಲ್ಲಿಸುವ ವ್ಯಕ್ತಿಯ ಕುಟುಂಬದ ಇನ್ನುಳಿದ ಸದಸ್ಯರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿರಬಾರದು. 


ಈ ಯೋಜನೆಗೆ ಅಗತ್ಯವಿರುವ ದಾಖಲೆ


  • ಆಧಾರ್ ಕಾರ್ಡ್

  • ಅಡ್ರೆಸ್‌ ಫ್ರೂಪ್

  • ರೇಷನ್ ಕಾರ್ಡ್

  • ಬ್ಯಾಂಕ್ ಪಾಸ್‌ಬುಕ್

  • ಫೋನ್ ನಂಬರ್

  • ಪಾಸ್‌ಪೋರ್ಟ್‌ ಸೈಜ್‌ ಫೋಟೊ


ಅರ್ಜಿ ಸಲ್ಲಿಕೆ ಪ್ರಕ್ರಿಯೆ


  • ಅಧಿಕೃತ ವೆಬ್‌ಸೈಟ್‌ https://pmuy.gov.in/ಗೆ ಭೇಟಿ ನೀಡಿ

  • ಹೋಮ್‌ಪೇಜ್‌ನಲ್ಲಿ ಪಿಎಂ ಉಲ್ವಲ ಯೋಜನೆ ೨.೦ಗೆ ಅಪ್ಲೈ ಮಾಡಿ ಎನ್ನುವ ಆಪ್ಶನ್‌ ಆಯ್ಕೆ ಮಾಡಿ.

  • ಈಗ ಈ ಯೋಜನೆಯ ಬಗ್ಗೆ ಎಲ್ಲಾ ಮಾಹಿತಿ ಬರುತ್ತದೆ. 

  • ಪೇಜ್‌ನ ಕೆಳಗೆ ಆನ್ಲೈನ್‌ ಪೋರ್ಟಲ್‌ ಎನ್ನುವ ಆಪ್ಶನ್‌ ಇರುತ್ತದೆ. ಅದನ್ನು ಆಯ್ಕೆ ಮಾಡಿ.

  • ಅಲ್ಲಿ ಬರುವ ಪಟ್ಟಿಯಿಂದ ಗ್ಯಾಸ್ ಕಂಪನಿಯನ್ನು ಆಯ್ಕೆ ಮಾಡಿ

  • ಬಳಿಕ ನಿಮ್ಮ ಫೋನ್ ನಂಬರ್‌ ಹಾಗೂ OTPಯಿಂದ ಲಾಗಿನ್‌ ಮಾಡಿ. ಬಳಿಕ ಅಪ್ಲಿಕೇಶನ್ ಫಾರ್ಮ್ ಬರುತ್ತದೆ.

  • ಅಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತುಂಬಿರಿ.

  • ಮಾಹಿತಿ ಎಲ್ಲವೂ ಸರಿ ಇದೆಯಾ ಎಂದು ಪರಿಶೀಲಿಸಿ ಬಳಿಕ ಅಪ್ಲಿಕೇಶನ್ ಫಾರ್ಮ್ ಪ್ರಿಂಟೌಟ್ ಪಡೆಯಿರಿ.


ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯವರ ತಿಂಗಳ ಸಂಬಳ ಮತ್ತು ವೆಚ್ಚ ಎಷ್ಟು ಗೊತ್ತೆ..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.