Ration Card Update: ಕಳೆದ ಕೆಲವು ದಿನಗಳಿಂದ  ಬಿತ್ತರಗೊಳ್ಳುತ್ತಿರುವ ಪಡಿತರ ಚೀಟಿ ಸರೆಂಡರ್, ಧಾನ್ಯ ವಸೂಲಿ ಸುದ್ದಿಗಳು ಜನರನ್ನು ಆತಂಕಕ್ಕೀಡು ಮಾಡಿವೆ. ನಿಮಗೂ ಕೂಡ ಅಂತಹ ಯಾವುದೇ ಸಂದೇಶ ಬಂದಿದ್ದಾರೆ ಅಥವಾ ಸರ್ಕಾರವು ನಿಮ್ಮಿಂದ ಧಾನ್ಯ ವಸೂಲಿ ನಡೆಸಲಿದೆಯಾ ಎಂಬ ಗೊಂದಲದಲ್ಲಿದ್ದರೆ? ಮೊದಲು ಟೆನ್ಶನ್ ಫ್ರೀ ಆಗಿ. ಏಕೆಂದರೆ, ಕಳೆದ ಎರಡು ತಿಂಗಳುಗಳಿಂದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಅನರ್ಹ ಪಡಿತರ ಚೀಟಿ ಧಾರಕರಿಗೆ ತಮ್ಮ ಪಡಿತರ ಚೀಟಿಯನ್ನು ಸರೆಂಡರ್ ಮಾಡಲು ಸೂಚಿಸುತ್ತಿದ್ದು, ಅವರುಗಳು ಪಡೆದ ಧಾನ್ಯಗಳನ್ನು ವಾಪಸ್ ಪಡೆಯಲಿದೆ ಎಂಬ ಸುದ್ದಿಗಳು ನಿರಂತರವಾಗಿ ಹರಿದಾಡುತ್ತಿವೆ. ಅಷ್ಟೇ ಅಲ್ಲ ಅನರ್ಹ ಪಡಿತರ ಚೀಟಿ ಧಾರಕರ ವಿರುದ್ಧ ಸರ್ಕಾರ ಕ್ರಮ ಕೂಡ ಕೈಗೊಳ್ಳಲಿದೆ ಎಂದು ವರದಿಗಳಲ್ಲಿ ಹೇಳಲಾಗಿದೆ.  ಆದರೆ, ಇದೀಗ ಈ ಕುರಿತು ಸರ್ಕಾರ ಮಹತ್ವದ ಹೇಳಿಕೆಯೊಂದನ್ನು ನೀಡಿದೆ.


COMMERCIAL BREAK
SCROLL TO CONTINUE READING

ಸರೆಂಡರ್ ಮಾಡುವಂತೆ ಯಾವುದೇ ಆದೇಶವಿಲ್ಲ
ಹಲವು ಮಾಧ್ಯಮಗಳಲ್ಲಿ ಬಿತ್ತರಗೊಂಡ ಈ ಸುದ್ದಿ ಫಲಾನುಭವಿಗಳಲ್ಲಿ ವೇಗವಾಗಿ ಪಸರಿಸಿದೆ ಮತ್ತು ಅನೇಕ ಜಿಲ್ಲೆಗಳಲ್ಲಿ ಪಡಿತರ ಚೀಟಿಯನ್ನು ಸರೆಂಡರ್ ಮಾಡಲು ಜನರು ಸರದಿಯಲ್ಲಿ ನಿಲ್ಲುತ್ತಿದ್ದಾರೆ ಎಂಬ ವದಂತಿಗಳಿಗೆ ಸರ್ಕಾರ ಇದೀಗ ಬ್ರೇಕ್ ಹಾಕಿದೆ. ಏಕೆಂದರೆ ಪಡಿತರ ಚೀಟಿಯನ್ನು ಸರೆಂಡರ್ ಮಾಡಲು ಅಥವಾ ರದ್ದುಗೊಳಿಸಲು ಸರ್ಕಾರದ ವತಿಯಿಂದ ಯಾವುದೇ ಆದೇಶ ನೀಡಲಾಗಿಲ್ಲ.


ಜನರಿಗೆ ಭಾರಿ ಪರಿಹಾರ
ಇಂತಹ ಆದೇಶವನ್ನು ಯಾರು ನೀಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇದೀಗ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಆದೇಶಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ರಾಜ್ಯದ ಆಹಾರ ಆಯುಕ್ತರು ಮಾಹಿತಿಯನ್ನು ನೀಡಿದ್ದಾರೆ. ಸರ್ಕಾರ ಜಾರಿಗೊಳಿಸಿರುವ ಈ ಆದೇಶದ ಬಳಿಕ ಉಚಿತ ಪಡಿತರ ಲಾಭ ಪಡೆದವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.


ವದಂತಿಗಳಿಗೆ ಬ್ರೇಕ್ ಹಾಕಿ
ಪಡಿತರ ಚೀಟಿ ಪರಿಶೀಲನೆ ಒಂದು ಸಾಮಾನ್ಯ ಪ್ರಕ್ರಿಯೆ ಎಂದು ರಾಜ್ಯ ಆಹಾರ ಆಯುಕ್ತರು ತಿಳಿಸಿದ್ದಾರೆ. ಇದನ್ನು ಸರ್ಕಾರವು ಕಾಲಕಾಲಕ್ಕೆ ನಡೆಸುತ್ತದೆ. ಪಡಿತರ ಚೀಟಿ ಸರೆಂಡರ್ ಮತ್ತು ಹೊಸ ಅರ್ಹತಾ ಷರತ್ತುಗಳಿಗೆ ಸಂಬಂಧಿಸಿದ ತಪ್ಪು ವರದಿಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಇಂತಹ ಸುದ್ದಿಗಳಿಂದ ಆದಷ್ಟು ದೂರವಿರಬೇಕು ಎಂದು ವಿನಂತಿಸಿಕೊಳ್ಳಲಾಗಿದೆ.


ಇದನ್ನೂ ಓದಿ-Good News: ಹಸುವಿನ ಸಗಣಿಯಿಂದ ರೈತರ ಆದಾಯ ಹೆಚ್ಚಳಕ್ಕೆ ಮಹತ್ವದ ಹೆಜ್ಜೆ ಇಟ್ಟ ಮೋದಿ ಸರ್ಕಾರ


ನಿಯಮ ಏನು ಗೊತ್ತಾ?
'ದೇಶೀಯ ಪಡಿತರ ಚೀಟಿಗಳಿಗೆ ಅರ್ಹತೆ / ಅನರ್ಹತೆಯ ಮಾನದಂಡ'ಗಳನ್ನು 2014 ರಲ್ಲಿ ನಿಗದಿಪಡಿಸಲಾಗಿದೆ. ಅದರ ನಂತರ ಇದುವರೆಗೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದಲ್ಲದೇ 2011ರ ಜನಗಣತಿ ಆಧಾರದ ಮೇಲೆ ಪಡಿತರ ಚೀಟಿ ಹಂಚಿಕೆ ಮಾಡಲಾಗಿದೆ. ಪಡಿತರ ಚೀಟಿ ಹೊಂದಿರುವವರು ಪಕ್ಕಾ ಮನೆ, ವಿದ್ಯುತ್ ಸಂಪರ್ಕ ಅಥವಾ ಏಕೈಕ ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವವರು ಅಥವಾ ಮೋಟಾರ್ ಸೈಕಲ್ ಮಾಲೀಕರು ಮತ್ತು ಕೋಳಿ/ಹಸು ಸಾಕಣೆಯಲ್ಲಿ ತೊಡಗಿರುವ ಕಾರಣಕ್ಕೆ ಅನರ್ಹರೆಂದು ಘೋಷಿಸಲಾಗುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಇದೀಗ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.


ಇದನ್ನೂ ಓದಿ-Hero ಕಂಪನಿಯಿಂದ ಮತ್ತೊಂದು ಅಗ್ಗದ ಬೈಕ್ ಬಿಡುಗಡೆ ..!


ಯಾವುದೇ ರೀತಿಯ ವಸೂಲಿ ನಡೆಸಲಾಗುವುದಿಲ್ಲ
ಅಷ್ಟೇ ಅಲ್ಲ, ವಸೂಲಾತಿ ಬಗ್ಗೆಯೂ ಜನರಲ್ಲಿ ಭಯ ಹುಟ್ಟಿಕೊಂಡಿದ್ದು, (ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013ರ ಪ್ರಕಾರ) ಅನರ್ಹ ಕಾರ್ಡ್ ಹೊಂದಿರುವವರಿಂದ ವಸೂಲಾತಿಗೆ ಅವಕಾಶವಿಲ್ಲ ಎಂದು ಸರ್ಕಾರ ಹೇಳಿದ್ದು, ವಸೂಲಾತಿ ಸಂಬಂಧ ಸರ್ಕಾರದ ಮಟ್ಟದಿಂದಾಗಲಿ ಅಥವಾ ಆಹಾರ ಆಯುಕ್ತರ ಕಚೇರಿಯಿಂದಾಗಲಿ ಯಾವುದೇ ಆದೇಶ ನೀಡಲಾಗಿಲ್ಲ.  ಆದ್ದರಿಂದ ನೀವು ಉಚಿತ ಪಡಿತರ ಫಲಾನುಭವಿಯಾಗಿದ್ದರೆ, ನೀವು ಈಗ ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.