ಬೆಂಗಳೂರು : ಜನವರಿ 1, 2023 ರಿಂದ ಒಂದು ವರ್ಷದ ಅವಧಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸುತ್ತಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ. 80 ಕೋಟಿಗೂ ಹೆಚ್ಚು ಜನರರೂ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ತಮ್ಮ ಸರ್ಕಾರದ ಉಚಿತ ಪಡಿತರ ಯೋಜನೆ PMGKAY ಅನ್ನು ಮುಂದಿನ ಐದು ವರ್ಷಗಳವರೆಗೆ ವಿಸ್ತರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು  ಘೋಷಿಸಿದ್ದಾರೆ. ಇತ್ತೀಚೆಗೆ, ದುರ್ಗ್‌ನಲ್ಲಿ (ಛತ್ತೀಸ್‌ಗಢ) ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವಾಗ,ಅವರು ಈ ಘೋಷಣೆ ಮಾಡಿದ್ದಾರೆ. ಆದರೆ ಪ್ರತಿಪಕ್ಷ ಕಾಂಗ್ರೆಸ್ ಈ ಘೋಷಣೆಯನ್ನು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಹೇಳಿದೆ. 


COMMERCIAL BREAK
SCROLL TO CONTINUE READING

ಉಚಿತ ಆಹಾರ ಧಾನ್ಯಗಳು : 
ಅಧಿಕೃತ ಹೇಳಿಕೆಯಲ್ಲಿ, ಆಹಾರ ಸಚಿವಾಲಯವು "ಜನವರಿ 1, 2023 ರಿಂದ  ಮುಂದಿನ ಒಂದು ವರ್ಷದವರೆಗೆ PMGKAY ಅಡಿಯಲ್ಲಿ ಅಂತ್ಯೋದಯ ಅನ್ನ ಯೋಜನೆ (AAY) ಕುಟುಂಬಗಳು ಮತ್ತು ಆದ್ಯತಾ ಕುಟುಂಬಗಳ (PHH) ಫಲಾನುಭವಿಗಳಿಗೆ ಕೇಂದ್ರವು ಉಚಿತ ಆಹಾರ ಧಾನ್ಯಗಳನ್ನು ಒದಗಿಸುತ್ತಿದೆ" ಎಂದು ಹೇಳಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ, 2020 ರಲ್ಲಿ ಹೆಚ್ಚುವರಿ ಆಹಾರ ಧಾನ್ಯಗಳನ್ನು ಉಚಿತವಾಗಿ ಒದಗಿಸಲು ಪ್ರಾರಂಭಿಸಲಾದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA)ಯೊಂದಿಗೆ PMGKAY ಅನ್ನು ವಿಲೀನಗೊಳಿಸಲು ಕೇಂದ್ರವು ನಿರ್ಧರಿಸಿದೆ. 


ಇದನ್ನೂ ಓದಿ : ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಪ್ರಮಾಣಪತ್ರ: ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಲು ಇಲ್ಲಿದೆ ಸುಲಭ ಮಾರ್ಗಗಳು...


ಇಷ್ಟು ಪ್ರಮಾಣದಲ್ಲಿ ಲಭ್ಯವಿದೆ ಧಾನ್ಯ : 
NFSA ಅಡಿಯಲ್ಲಿ, ಗ್ರಾಮೀಣ ಜನಸಂಖ್ಯೆಯ ಶೇಕಡಾ 75 ಮತ್ತು ನಗರ ಜನಸಂಖ್ಯೆಯ ಶೇಕಡಾ 50 ರಷ್ಟು ಜನರು, ಅಂತ್ಯೋದಯ ಅನ್ನ ಯೋಜನೆ (AAY) ಮತ್ತು ಆದ್ಯತೆಯ ವಸತಿ ಹೀಗೆ ಎರಡು ವರ್ಗಗಳ ಅಡಿಯಲ್ಲಿ  ಯೋಜನೆಯ ಲಾಭ ಪಡೆಯುತ್ತಾರೆ. ಆದರೆ AAY ಕುಟುಂಬಗಳು ಪ್ರತಿ ತಿಂಗಳಿಗೆ 35 ಕೆಜಿ ಆಹಾರ ಧಾನ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದ್ಯತೆಯ ಕುಟುಂಬಗಳು ತಿಂಗಳಿಗೆ ಒಬ್ಬ ವ್ಯಕ್ತಿಗೆ ಐದು ಕಿಲೋಗ್ರಾಂಗಳಷ್ಟು ಆಹಾರ ಧಾನ್ಯಗಳನ್ನು ಪಡೆಯುತ್ತವೆ.


ಬಡವರಿಗೆ ಸಹಾಯ : 
ಬಡ ಫಲಾನುಭವಿಗಳ ಆರ್ಥಿಕ ಹೊರೆಯನ್ನು ನಿವಾರಿಸಲು ಮತ್ತು ರಾಷ್ಟ್ರವ್ಯಾಪಿ ಏಕರೂಪತೆ ಮತ್ತು NFSA (ವರ್ಷ 2013) ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಎನ್‌ಎಫ್‌ಎಸ್‌ಎ (ಒಂದು ರಾಷ್ಟ್ರ-ಒಂದು ಬೆಲೆ-ಒಂದು ಪಡಿತರ) ಪರಿಣಾಮಕಾರಿ ಮತ್ತು ಸಮಾನ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವನ್ನು ಜಾರಿಗೆ ತರಲಾಗಿದೆ  ಎಂದು ಸಚಿವಾಲಯ ಹೇಳಿದೆ. 


ಇದನ್ನೂ ಓದಿ : ಆರ್‌ಬಿಐ ಬಜಾಜ್ ಫೈನಾನ್ಸ್ ಸಾಲ ವಿತರಣೆಯನ್ನು ಎರಡು ಯೋಜನೆಗಳ ಅಡಿಯಲ್ಲಿ ನಿರ್ಬಂಧಿಸಿದೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.