ಬೆಂಗಳೂರು : ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಕಳೆದ ಕೆಲವು ವರ್ಷಗಳಿಂದ ಭಾರತ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸರ್ಕಾರ ವಿದ್ಯಾರ್ಥಿವೇತನ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ, ಹಕ್ಕುಗಳು ಮತ್ತು ಆರೋಗ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು  ಕೂಡಾ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. 


COMMERCIAL BREAK
SCROLL TO CONTINUE READING

'ಬೇಟಿ ಬಚಾವೋ ಬೇಟಿ ಪಢಾವೋ' ಸರ್ಕಾರದ ಪ್ರಮುಖ ಯೋಜನೆಯಾಗಿದ್ದು  ಕಳೆದ ಕೆಲವು ವರ್ಷಗಳಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಹೆಣ್ಣು ಮಗುವಿನ ಶಿಕ್ಷಣ ಮತ್ತು ಇತರ ಯೋಗಕ್ಷೇಮಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಟಾಪ್ 5 ಯೋಜನೆಗಳ ಮಾಹಿತಿ ಇಲ್ಲಿದೆ. ಈ ಯೋಜನೆಗಳಲ್ಲಿ ಹೆಚ್ಚಿನವು ತೆರಿಗೆ ವಿನಾಯಿತಿ ನೀಡುವುದಲ್ಲದೆ, ಉತ್ತಮ ಬಡ್ಡಿದರಗಳನ್ನು ಕೂಡಾ ನೀಡುತ್ತವೆ.


ಇದನ್ನೂ ಓದಿ : ವಿಜಯ್ ಮಲ್ಯ, ನೀರವ್ ಮೋದಿ ಸೇರಿ ಆರ್ಥಿಕ ಅಪರಾಧಿಗಳಿಂದ ₹15,000 ಕೋಟಿ ವಸೂಲಿ..!


1. ಸುಕನ್ಯಾ ಸಮೃದ್ಧಿ ಯೋಜನೆ :
ಸುಕನ್ಯಾ ಸಮೃದ್ಧಿ ಯೋಜನೆ (SSY)ಜನವರಿ 22, 2015 ರಂದು ಪ್ರಾರಂಭವಾಯಿತು.  ಈ ಯೋಜನೆಯಲ್ಲಿ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 250 ರೂಪಾಯಿಯಿಂದ ಗರಿಷ್ಟ 1.5 ಲಕ್ಷ ದವರೆಗೆ ಹೂಡಿಕೆ ಮಾಡಬಹುದು. 
ಬ್ಯಾಂಕ್‌ಗಳಲ್ಲಿ ಹೆಣ್ಣು ಮಗುವಿನ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು. ಹೆಣ್ಣು ಮಗುವಿಗೆ 10 ವರ್ಷ ತುಂಬುವವರೆಗೆ ಖಾತೆಯನ್ನು ತೆರೆಯಬಹುದು. ಈ ಖಾತೆಯ ಮೆಚ್ಯೂರಿಟಿ ಅವಧಿ 21 ವರ್ಷಗಳು, ಅಥವಾ 18 ವರ್ಷ ವಯಸ್ಸಿನ ನಂತರ ಹುಡುಗಿಯ ಮದುವೆಯಾಗುವವರೆಗೆ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊತ್ತಕ್ಕೆ ವಾರ್ಷಿಕವಾಗಿ 7.6 ಶೇಕಡಾ ಬಡ್ಡಿದರ ಸಿಗುತ್ತದೆ. 


2. CBSE ಉಡಾನ್ ಯೋಜನೆ : 
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (MHRD) ಅಡಿಯಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 2014 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದೆ. ಫಲಾನುಭವಿ ವಿದ್ಯಾರ್ಥಿನಿ ಐಐಟಿ ಅಥವಾ ಎನ್‌ಐಟಿ ಅಥವಾ ಯಾವುದೇ ಕೇಂದ್ರೀಯ ಅನುದಾನಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆದರೆ ಮತ್ತು ಉಡಾನ್ ತರಗತಿಗಳಲ್ಲಿ ಕನಿಷ್ಠ 75% ಗಳಿಸಿದರೆ, ಅವರ ಬೋಧನಾ ಶುಲ್ಕಗಳು, ಪ್ರವೇಶ ಶುಲ್ಕಗಳು ಮತ್ತು ಹಾಸ್ಟೆಲ್‌ ಫೀಸ್ ವಿಷಯದಲ್ಲಿ ಹಣಕಾಸಿನ ನೆರವು ಸಿಗಲಿದೆ. 6 ಲಕ್ಷಕ್ಕಿಂತ ಕಡಿಮೆ ಕುಟುಂಬದ ಆದಾಯ ಹೊಂದಿರುವ ಯಾವುದೇ ಭಾರತೀಯ ಹೆಣ್ಣುಮಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.


ಇದನ್ನೂ ಓದಿ : ಈ 7 ಸೀಟರ್ ಕಾರಿನ ಬೆಲೆ ಕೇವಲ 8.6 ಲಕ್ಷ.. ಸಿಕ್ಕಾಪಟ್ಟೆ ಮೈಲೇಜ್‌, ಸಖತ್‌ ಫೀಚರ್ಸ್‌!


3. ಧನಲಕ್ಷ್ಮಿ ಯೋಜನೆ :
ಭಾರತದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯು 2008 ರಲ್ಲಿ ಯೋಜನೆಯನ್ನು ಪ್ರಾರಂಭಿಸಿತು. ನವೆಂಬರ್ 8, 2008 ರ ನಂತರ ಜನಿಸಿದ ಎಲ್ಲಾ ಹೆಣ್ಣು ಮಕ್ಕಳು  5,000 ರೂಪಾಯಿ ಆರಂಭಿಕ ನಗದನ್ನು ಪಡೆಯಬಹುದು.  ಹೆಣ್ಣು ಮಗುವಿನ ಜನನ ನೋಂದಣಿಯ ವೇಳೆ 5,000 ರೂ. ನೀಡಲಾಗುವುದು. ನಂತರ ಶಿಶು ಅವಸ್ಥೆಯ ವಿವಿಧ  ಹಂತಗಳಲ್ಲಿ 1,250 ರೂ. ಪಾವತಿಸಲಾಗುವುದು. ಶಾಲಾ ದಾಖಲಾತಿ ಮತ್ತು ಪ್ರಾಥಮಿಕ ಶಾಲಾ ಶಿಕ್ಷಣ ಪೂರ್ಣಗೊಂಡಾಗ 3,500, 8 ನೇ ತರಗತಿವರೆಗಿನ ಮಾಧ್ಯಮಿಕ ಶಾಲಾ ದಾಖಲಾತಿ ವೇಳೆ 3,750, ಹೆಣ್ಣು ಮಗುವಿಗೆ 18 ವರ್ಷವಾದಾಗ 1 ಲಕ್ಷದ ವಿಮಾ ಮೆಚ್ಯೂರಿಟಿ ಕವರ್ ನೀಡಲಾಗುವುದು. 


4. ಪ್ರೌಢ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪ್ರೋತ್ಸಾಹಕ ಯೋಜನೆ : 
ಈ ಯೋಜನೆಯ ಮೂಲಕ, ಶಿಕ್ಷಣ ಸಚಿವಾಲಯವು 14-18 ವರ್ಷ ವಯಸ್ಸಿನ ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಒಂಬತ್ತನೇ ತರಗತಿಗೆ ದಾಖಲಾದ ಮೇಲೆ 3000 ರೂ ಮೊತ್ತವನ್ನು ಅರ್ಹ ಅವಿವಾಹಿತ ಹುಡುಗಿಯರ ಹೆಸರಿನಲ್ಲಿ ಸ್ಥಿರ ಠೇವಣಿಯಾಗಿ ಠೇವಣಿ ಮಾಡಲಾಗುತ್ತದೆ. ಆ ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಮತ್ತು  10 ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಅದನ್ನು ಬಡ್ಡಿಯೊಂದಿಗೆ ಅವರಿಗೆ ನೀಡಲಾಗುವುದು. 


ಇದನ್ನೂ ಓದಿ : ಇ.ವಿ ಬ್ಯಾಟರಿ ಉತ್ಪಾದನೆ: ಐಬಿಸಿ ಜತೆ ಒಡಂಬಡಿಕೆ, 8 ಸಾವಿರ ಕೋಟಿ ರೂ. ಹೂಡಿಕೆಗೆ ಅಸ್ತು


5. ಬಾಲಿಕಾ ಸಮೃದ್ಧಿ ಯೋಜನೆ : 
ಬಾಲಿಕಾ ಸಮೃದ್ಧಿ ಯೋಜನೆಯನ್ನು ಭಾರತ ಸರ್ಕಾರವು ವ್ಯಾಖ್ಯಾನಿಸಿದಂತೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಎರಡು ಹೆಣ್ಣು ಮಕ್ಕಳಿಗೆ ನೀಡಲಾಗುವುದು. BPL ಕುಟುಂಬಗಳ ಹೆಣ್ಣು ಮಗುವಿಗೆ ಜನ್ಮ ನೀಡುವ ತಾಯಿಗೆ 500/- ರೂ ನೀಡಲಾಗುವುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.