gas booking : ಬೆಲೆ ಏರಿಕೆ ಮಧ್ಯೆಯೇ ಸಿಹಿ ಸುದ್ದಿ, ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ಸಿಗಲಿದೆ ಚಿನ್ನ..!
ಬೆಲೆ ಏರಿಕೆಯ ಮಧ್ಯೆಯೇ ಗ್ರಾಹಕರಿಗೆ ಒಳ್ಳೆಯ ಸುದ್ದಿ ಇದೆ. ಈ ಹಬ್ಬದ ಸೀಸನ್ ನಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ, ಚಿನ್ನವನ್ನು ಗೆಲ್ಲಬಹುದು.
ನವದೆಹಲಿ : ಅಕ್ಟೋಬರ್ ತಿಂಗಳಿನಿಂದ ದೇಶಾದ್ಯಂತ ಹಬ್ಬದ ಸೀಸನ್ (Festive season) ಆರಂಭವಾಗುತ್ತದೆ. ಆದರೆ, ಈ ಬಾರಿ ಹಬ್ಬಗಳ ಆರಂಭದ ಮೊದಲು, ಮತ್ತೊಮ್ಮೆ ಸಿಲಿಂಡರ್‌ಗಳ ಬೆಲೆಗಳನ್ನು (Gas price) ಹೆಚ್ಚಿಸಲಾಗಿದೆ. ಅಕ್ಟೋಬರ್ 6 ರಂದು ತೈಲ ಕಂಪನಿಗಳು ಎಲ್‌ಪಿಜಿ ಬೆಲೆಯನ್ನು (LPG Price) 15 ರೂಪಾಯಿಯಷ್ಟು ಹೆಚ್ಚಿಸಿದೆ. ಆದರೂ, ಈ ಬೆಲೆ ಏರಿಕೆಯ ಮಧ್ಯೆಯೇ ಗ್ರಾಹಕರಿಗೆ ಒಳ್ಳೆಯ ಸುದ್ದಿ ಇದೆ. ಈ ಹಬ್ಬದ ಸೀಸನ್ ನಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ, ಚಿನ್ನವನ್ನು ಗೆಲ್ಲಬಹುದು. ಆನ್ಲೈನ್ ಪಾವತಿ ಕಂಪನಿ Paytm (Paytm) ವಿಶೇಷ ನವರಾತ್ರಿ ಗೋಲ್ಡ್ ಆಫರ್ ತಂದಿದೆ. ಈ ಆಫರ್ ಅಕ್ಟೋಬರ್ 7 ರಿಂದ 16 ರವರೆಗೆ ನಡೆಯಲಿದೆ. ಪ್ರತಿ ದಿನ ಐದು ಗ್ರಾಹಕರು 10,001 ರೂಪಾಯಿ ಮೌಲ್ಯದ ಪೇಟಿಎಂ ಡಿಜಿಟಲ್ ಗೋಲ್ಡ್ ಗೆಲ್ಲಬಹುದು.
ಏನಿದು ಪೇಟಿಎಂ ನವರಾತ್ರಿ ಗೋಲ್ಡ್ ಆಫರ್ ?
Paytm ಆಪ್‌ನಲ್ಲಿರುವ 'ಬುಕ್ ಗ್ಯಾಸ್ ಸಿಲಿಂಡರ್' ಸೌಲಭ್ಯವನ್ನು ಬಳಸಿಕೊಂಡು, ಸಿಲಿಂಡರ್ ಬುಕ್ ಮಾಡಿದರೆ, ಈ ಆಫರ್ ಅನ್ವಯವಾಗುತ್ತದೆ. ಇದರ ಜೊತೆಯಲ್ಲಿ, ಎಲ್ಲಾ ಬಳಕೆದಾರರಿಗೆ ಪ್ರತಿ ಬುಕಿಂಗ್‌ನಲ್ಲಿ 1000 ಕ್ಯಾಶ್‌ಬ್ಯಾಕ್ (Cash back) ಪಾಯಿಂಟ್‌ಗಳವರೆಗೆ ರಿವಾರ್ಡ್ ಸಿಗಲಿದೆ. ಈ ಪಾಯಿಂಟ್ ಗಳನ್ನು ಡೀಲ್‌ಗಳು ಮತ್ತು ಉನ್ನತ ಬ್ರಾಂಡ್‌ಗಳ ವೋಚರ್‌ಗಳಲ್ಲಿ ಬಳಸಬಹುದು. ಇಂಡೇನ್ (Indane), ಎಚ್‌ಪಿ ಗ್ಯಾಸ್ ಮತ್ತು ಭಾರತ್ ಗ್ಯಾಸ್ - ಎಲ್ಲಾ 3 ಪ್ರಮುಖ ಎಲ್‌ಪಿಜಿ ಕಂಪನಿಗಳ ಸಿಲಿಂಡರ್ ಬುಕಿಂಗ್ ಮೇಲೆ, ಈ 'ನವರಾತ್ರಿ ಗೋಲ್ಡ್' ಆಫರ್ (navaratri gold offer) ಅನ್ವಯವಾಗುತ್ತದೆ.
ಇದನ್ನೂ ಓದಿ : ಈ ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿಯೂ ಸಿಗಲಿದೆ FDಯಷ್ಟೇ ಬಡ್ಡಿ
Paytm ನಲ್ಲಿ ಸಿಗಲಿದೆ ವಿಶೇಷ ಆಫರ್ :
Paytm ಇತ್ತೀಚೆಗೆ ಸಿಲಿಂಡರ್ ಬುಕಿಂಗ್ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಿದ್ದು, ಬಳಕೆದಾರರು ತಮ್ಮ ಗ್ಯಾಸ್ ಸಿಲಿಂಡರ್‌ಗಳ ವಿತರಣೆಯನ್ನು ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ ಮತ್ತು ರೆಫಿಲ್ಲಿಂಗ್ ಗಾಗಿ Automated Intelligent Reminders ಒದಗಿಸುತ್ತದೆ.
ಎಲ್‌ಪಿಜಿ ಬುಕಿಂಗ್ ಮಾಡುವುದು ಹೇಗೆ?
ಗ್ಯಾಸ್ ಬುಕಿಂಗ್ (Gas booking) ಮಾಡಲು, ಬಳಕೆದಾರರು 'ಬುಕ್ ಗ್ಯಾಸ್ ಸಿಲಿಂಡರ್' ಟ್ಯಾಬ್‌ಗೆ ಹೋಗಬೇಕು. ಇಲ್ಲಿ ಗ್ಯಾಸ್ ಕಂಪನಿಯನ್ನು ಆಯ್ಕೆ ಮಾಡಬೇಕು. ಮುಂದೆ, ಮೊಬೈಲ್ ಸಂಖ್ಯೆ / LPG ID / ಗ್ರಾಹಕ ಸಂಖ್ಯೆಯನ್ನು ನಮೂದಿಸಿ, ತದನಂತರ Paytm Wallet ನಂತಹ ನಿಮ್ಮ ಆದ್ಯತೆಯ ಪಾವತಿ ವಿಧಾನವನ್ನು ಬಳಸಿ ಪಾವತಿ ಮಾಡಿ. ಮತ್ತೊಂದೆಡೆ, ಪೇಟಿಎಂ ಯುಪಿಐ (UPI), ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಪೇಟಿಎಂ ಪೋಸ್ಟ್‌ಪೇಯ್ಡ್, ಬುಕ್ ನೌ ಪೇ ಲೇಟರ್ ಆಯ್ಕೆ ಕೂಡಾ ಇದೆ.
ಇದನ್ನೂ ಓದಿ : Driving Licence: ಡಿಎಲ್ ಮಾಡಿಸುವ ಮುನ್ನ ಹುಷಾರ್! ಎಚ್ಚರ ತಪ್ಪಿದರೆ ನಷ್ಟ ಆದೀತು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.