ಲಂಚ ನೀಡಿ ಗುತ್ತಿಗೆ ಪಡೆದ ಆರೋಪ : ಅಮೆರಿಕದಲ್ಲಿ ಗೌತಮ್ ಅದಾನಿ ಅರೆಸ್ಟ್ ವಾರೆಂಟ್ ಜಾರಿ
ಲಂಚ ಮತ್ತು ವಂಚನೆ ಆರೋಪ ಹೊತ್ತಿರುವವರಲ್ಲಿ ಗ್ರೂಪ್ ನೊಂದಿಗೆ ಸಂಬಂಧ ಹೊಂದಿರುವ ಇತರ ಏಳು ಜನರು ಕೂಡ ಸೇರಿದ್ದಾರೆ.
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತೊಮ್ಮೆ ಭಾರಿ ಮುಖಭಂಗ ಅನುಭವಿಸಿದ್ದಾರೆ. ಸೋಲಾರ್ ಒಪ್ಪಂದಗಳಿಗೆ ಶತಕೋಟಿ ಡಾಲರ್‌ಗಳನ್ನು ಲಂಚವಾಗಿ ಪಾವತಿಸಿದ ಮತ್ತು ಅಂತರರಾಷ್ಟ್ರೀಯ ಹೂಡಿಕೆದಾರರನ್ನು ದಾರಿ ತಪ್ಪಿಸಿದ ಆರೋಪದ ಮೇಲೆ ನ್ಯೂಯಾರ್ಕ್ ಫೆಡರಲ್ ಕೋರ್ಟ್ ಗೌತಮ್ ಅದಾನಿಯನ್ನು ದೋಷಿ ಎಂದು ತೀರ್ಪು ನೀಡಿದೆ. ಲಂಚ ಮತ್ತು ವಂಚನೆ ಆರೋಪ ಹೊತ್ತಿರುವವರಲ್ಲಿ ಗ್ರೂಪ್ ನೊಂದಿಗೆ ಸಂಬಂಧ ಹೊಂದಿರುವ ಇತರ ಏಳು ಜನರು ಕೂಡಾ ಸೇರಿದ್ದಾರೆ. ಆರೋಪದ ಹಿನ್ನೆಲೆಯಲ್ಲಿ ಅದಾನಿ ಎಂಟರ್‌ಪ್ರೈಸಸ್ ಬಾಂಡ್‌ಗಳ ಮೂಲಕ 600 ಮಿಲಿಯನ್ ಡಾಲರ್ ಸಂಗ್ರಹಿಸುವ ತನ್ನ ಯೋಜನೆಯನ್ನು ರದ್ದುಗೊಳಿಸಿದೆ. ಸುದ್ದಿ ಸಂಸ್ಥೆಗಳ ಪ್ರಕಾರ, ಸೌರ ಶಕ್ತಿಯ ಒಪ್ಪಂದಗಳನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ ಈ ಲಂಚವನ್ನು ನೀಡಲಾಗಿದೆ.
ಹಸಿರು ಇಂಧನ ವಲಯದಲ್ಲಿ ಭಾರೀ ಹೂಡಿಕೆಯ ಘೋಷಣೆ :
ಅದಾನಿ ಇತ್ತೀಚೆಗಷ್ಟೇ ಹಸಿರು ಇಂಧನ ಕ್ಷೇತ್ರದಲ್ಲಿ ಭಾರೀ ಹೂಡಿಕೆಯನ್ನು ಘೋಷಿಸಿತ್ತು. ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಗೆಲುವಿಗೆ ಅಭಿನಂದನೆ ಸಲ್ಲಿಸುವುದರೊಂದಿಗೆ ಈ ಘೋಷಣೆ ಮಾಡಿದ್ದಾರೆ. ಇಂಧನ ಕಂಪನಿಗಳಿಗೆ ನಿಯಮಗಳನ್ನು ಸರಳೀಕರಿಸುವ ಬಗ್ಗೆ ಟ್ರಂಪ್ ಭರವಸೆ ನೀಡಿದ್ದಾರೆ. ಇದರೊಂದಿಗೆ ಫೆಡರಲ್ ಭೂಮಿಯಲ್ಲಿ ಪೈಪ್ಲೈನ್ ಗಳನ್ನು ಕೊರೆಯಲು ಮತ್ತು ನಿರ್ಮಿಸಲು ಸುಲಭವಾಗುತ್ತದೆ. ಮತ್ತೊಂದೆಡೆ, ಅಮೆರಿಕದ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (ಎಸ್‌ಇಸಿ) ಗೌತಮ್ ಅದಾನಿ ಅಮೆರಿಕದ ಹೂಡಿಕೆದಾರರನ್ನು ವಂಚಿಸಿದ್ದಾರೆ, ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಆರೋಪಿಸಿದೆ.
ಇದನ್ನೂ ಓದಿ : ಪಿಂಚಣಿದಾರರಿಗೆ ಪಿಂಚಣಿ ಹೆಚ್ಚಳ ಘೋಷಿಸಿದ ಸರ್ಕಾರ !ಯಾರಿಗೆ ಎಷ್ಟು ಹೆಚ್ಚಳ ಇಲ್ಲಿದೆ ಸಂಪೂರ್ಣ ವಿವರ
ಬಹುಕೋಟಿ ಡಾಲರ್ ಪ್ರಾಜೆಕ್ಟ್ :
ಅದಾನಿ, ಸಹೋದರನ ಪುತ್ರ ಸಾಗರ್ ಅದಾನಿ (30), ಅದಾನಿ ಗ್ರೀನ್ ಎನರ್ಜಿ ಎಕ್ಸಿಕ್ಯೂಟಿವ್ ಮತ್ತು ಅಜುರೆ ಪವರ್ ಗ್ಲೋಬಲ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಸಿರಿಲ್ ಕ್ಯಾಬನೆಸ್‌ಗೆ ಸಂಬಂಧಿಸಿದ ಲಂಚ ಪ್ರಕರಣದಲ್ಲಿ ಅಮೆರಿಕವನ್ನು ವಂಚಿಸಲು ಬಹು-ಶತಕೋಟಿ ಡಾಲರ್ ಯೋಜನೆ ರೂಪಿಸಿದ್ದರು ಎಂದು ಆರೋಪಿಸಲಾಗಿದೆ. ಹೂಡಿಕೆದಾರರು ಮತ್ತು ಗ್ಲೋಬಲ್ ಫೈನಾನ್ಷಿಯಲ್ ಇನ್‌ಸ್ಟಿಟ್ಯೂಷನ್‌ಗಳು ಹಣವನ್ನು ಪಡೆಯಲು ಸುಳ್ಳು ಮತ್ತು ತಪ್ಪು ದಾರಿಗೆಳೆಯುವ ಹೇಳಿಕೆಗಳನ್ನು ನೀಡುವ ಮೂಲಕ ವಂಚನೆಗೆ ಸಂಚು ರೂಪಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಆರೋಪಗಳು ಬಿಲಿಯನ್ ಡಾಲರ್ ಯೋಜನೆಗೆ ಸಂಬಂಧಿಸಿವೆ ಎನ್ನಲಾಗಿದೆ.
265 ಮಿಲಿಯನ್ ಡಾಲರ್ ಲಂಚ :
ಅದಾನಿ ಮತ್ತು ಇತರರು ಸುಮಾರು 265 ಮಿಲಿಯನ್ ಡಾಲರ್ ಲಂಚ ನೀಡಿದ್ದಾರೆ ಎಂದು ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ. ಮುಂದಿನ ಎರಡು ದಶಕಗಳಲ್ಲಿ ಈ ಒಪ್ಪಂದಗಳು 2 ಶತಕೋಟಿ ಡಾಲರ್ ಗಿಂತ ಹೆಚ್ಚಿನ ಲಾಭವನ್ನು ಗಳಿಸುತ್ತವೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಯಲ್ಲಿ ಭಾಗಿಯಾಗಿರುವ ಕೆಲವರು ಗೌತಮ್ ಅದಾನಿಗಾಗಿ 'ನ್ಯೂಮೆರೊ ಯುನೊ' ಮತ್ತು 'ದಿ ಬಿಗ್ ಮ್ಯಾನ್' ನಂತಹ ಕೋಡ್ ಪದಗಳನ್ನು ಬಳಸಿದ್ದಾರೆ ಎಂದು SEC ಹೇಳುತ್ತದೆ. ಅದಾನಿ ಗ್ರೀನ್ ಎನರ್ಜಿಗಾಗಿ 3 ಬಿಲಿಯನ್ ಡಾಲರ್‌ಗೂ ಹೆಚ್ಚು ಮೊತ್ತದ ಸಾಲ ಮತ್ತು ಬಾಂಡ್‌ಗಳನ್ನು ಪಡೆಯಲು ಗೌತಮ್ ಅದಾನಿ ಸಹೋದರನ ಪುತ್ರ ಸಾಗರ್ ಅದಾನಿ ಮತ್ತು ಮತ್ತೊಬ್ಬ ಕಾರ್ಯನಿರ್ವಾಹಕ ವನೀತ್ ಜೈನ್ ಸಾಲಗಾರರು ಮತ್ತು ಹೂಡಿಕೆದಾರರಿಂದ ಲಂಚವನ್ನು ಮರೆಮಾಚಿದ್ದಾರೆ ಎಂದು ಆರೋಪಿಸಲಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಈ ಆರೋಪಗಳಿಗೆ ಅದಾನಿ ಗ್ರೂಪ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ ಎಂದು ವರದಿಗಳು ಹೇಳಿವೆ. US ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (SEC) ಇಬ್ಬರು ವ್ಯಕ್ತಿಗಳು ಮತ್ತು ಇನ್ನೊಬ್ಬ ವ್ಯಕ್ತಿ ಸಿರಿಲ್ ಕ್ಯಾಬನೆಸ್ ವಿರುದ್ಧ ಸಂಬಂಧಿತ ನಾಗರಿಕ ಆರೋಪಗಳನ್ನು ಸಲ್ಲಿಸಿದೆ. ಅದಾನಿ ಮತ್ತು ಇತರ ವ್ಯಕ್ತಿಗಳ ವಿರುದ್ಧದ ನಿರ್ದಿಷ್ಟ ಆರೋಪಗಳ ಬಗ್ಗೆ ಯುಎಸ್ ಸರ್ಕಾರ ಇನ್ನೂ ಸಂಪೂರ್ಣ ಮಾಹಿತಿಯನ್ನು ಒದಗಿಸಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.