ಬೆಂಗಳೂರು : ಇಂದಿನ ವಯಸ್ಸಿನಲ್ಲಿ ಪಿಂಚಣಿ ಯೋಜನೆ ಎಲ್ಲರಿಗೂ  ಬಹಳ ಮುಖ್ಯ. ವಾಸ್ತವವಾಗಿ, ಪ್ರತಿಯೊಬ್ಬ ವ್ಯಕ್ತಿಯು ನಿವೃತ್ತಿಯ ನಂತರದ ಜೀವನವು ಆರ್ಥಿಕವಾಗಿ ಸುರಕ್ಷಿತವಾಗಿರಬೇಕು ಎಂದೇ ಬಯಸುತ್ತಾನೆ. ವೃದ್ದಾಪ್ಯದಲ್ಲಿ ತಮ್ಮ ದೈನಂದಿನ ವೆಚ್ಚಗಳಿಗಾಗಿ ಯಾರನ್ನೂ ಅವಲಂಬಿಸಬಾರದು ಎನ್ನುವ ದೃಷ್ಟಿಯಿಂದಲೇ ಈ ಯೋಜನೆಯನ್ನು ಬಹುತೇಕರು ಆಯ್ದುಕೊಳ್ಳುತ್ತಾರೆ. 


COMMERCIAL BREAK
SCROLL TO CONTINUE READING

ಪಿಂಚಣಿಯು ವೃದ್ಧಾಪ್ಯದ ಊರುಗೋಲು:
ಹೌದು, ಪಿಂಚಣಿ ಅನ್ನುವುದು ವೃದ್ಧಾಪ್ಯದ ಊರುಗೋಲು. ಇದೇ  ಕಾರಣಕ್ಕೆ  ಹೆಚ್ಚಿನವರು ಪಿಂಚಣಿ ಸೇರಿದಂತೆ ಇತರ ನಿಧಿಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುತ್ತಾರೆ. ಹೀಗಾಗಿ ಜನರ ಈ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರ ಸೇರಿದಂತೆ ಅನೇಕ ಖಾಸಗಿ ಹಣಕಾಸು ಸಂಸ್ಥೆಗಳು ವಿವಿಧ ರೀತಿಯ ಸ್ಕೀಮ್ ಗಳನ್ನು ನಡೆಸುತ್ತಿವೆ. ಈ ಸ್ಕೀಮ್ ಗಳ ಮೂಲಕ ತಮ್ಮ ವೃದ್ಧಾಪ್ಯದಲ್ಲಿ ತಮಗೆ ಆಸರೆಯಾಗಿ ಬಿಡುತ್ತಾರೆ. 


ಇದನ್ನೂ ಓದಿ : ವಾರ ಪೂರ್ತಿ ಇಳಿಕೆ ಕಂಡ ನಂತರ ಇಂದು ಎಷ್ಟಿದೆ 10 ಗ್ರಾಂ ಚಿನ್ನದ ಬೆಲೆ ?


ವಯಸ್ಸು ಹೆಚ್ಚಾದರೆ ಪ್ರೀಮಿಯಂ ಮೊತ್ತ ಕೂಡಾ ಹೆಚ್ಚುತ್ತದೆ :
ವಾಸ್ತವವಾಗಿ, ಪಿಂಚಣಿ ಯೋಜನೆಯು ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದೆ. ಇದಕ್ಕಾಗಿ, ಜನರು ಸಾಮಾನ್ಯವಾಗಿ 40 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುತ್ತಾರೆ. ವಯಸ್ಸು ಹೆಚ್ಚಾದಂತೆ ಹೂಡಿಕೆಯ ಮೊತ್ತವು ಅಂದರೆ ಪ್ರೀಮಿಯಂ ಕೂಡಾ ಹೆಚ್ಚಾಗಲು ಪ್ರಾರಂಭಿಸುತ್ತದೆ.


25,000 ಪಿಂಚಣಿ ಬೇಕೆಂದರೆ ಹೂಡಿಕೆ ಎಷ್ಟಿರಬೇಕು : 
ಒಬ್ಬ ವ್ಯಕ್ತಿಯ ವಯಸ್ಸು ಸುಮಾರು 57 ಆಗಿದ್ದರೆ, ಅವನು ಕೇವಲ 3 ವರ್ಷಗಳವರೆಗೆ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶವನ್ನು ಪಡೆಯುತ್ತಾನೆ. ಸಾಮಾನ್ಯವಾಗಿ, ಎಲ್ಲಾ ಪಿಂಚಣಿ ಯೋಜನೆಗಳಲ್ಲಿ, ಪಿಂಚಣಿಯು 60 ನೇ ವಯಸ್ಸಿನಿಂದ ಪ್ರಾರಂಭವಾಗುತ್ತದೆ. 


ಇದನ್ನೂ ಓದಿ : ಇನ್ನು ಎನ್ ಪಿಎಸ್ ನಲ್ಲೂ ಸಿಗುವುದು ಈ ಲಾಭ ! ಪಿಂಚಣಿದಾರರಲ್ಲಿ ಸಂತಸ


ಲೆಕ್ಕಾಚಾರದ ಪ್ರಕಾರ, ತಿಂಗಳಿಗೆ 25,000 ರೂಪಾಯಿಗಳ ಪಿಂಚಣಿ ಪಡೆಯಬೇಕಾದರೆ, 60 ನೇ ವಯಸ್ಸಿನಲ್ಲಿ ಅಂದರೆ ಮೆಚ್ಯೂರಿಟಿ ಅವಧಿಯಲ್ಲಿ  NPS ಸೇರಿದಂತೆ ಇತರ ಯೋಜನೆಗಳಲ್ಲಿ ಅಂದಾಜು 53 ರಿಂದ 54 ಲಕ್ಷ ರೂ ಹೂಡಿಕೆ ಮಾಡಿರಬೇಕು. ಅಂದರೆ ವರ್ಷಕ್ಕೆ 18 ಲಕ್ಷ ಅಥವಾ ತಿಂಗಳಿಗೆ 1.50 ಲಕ್ಷ ಹೂಡಿಕೆ ಮಾಡಬೇಕು. ನೀವು ವಾರ್ಷಿಕ, ಅರೆ ವಾರ್ಷಿಕ, ತ್ರೈಮಾಸಿಕ ಅಥವಾ ಮಾಸಿಕ ಆಧಾರದ ಮೇಲೆ ಈ ಹೂಡಿಕೆಯನ್ನು ಆಯ್ಕೆ ಮಾಡಬಹುದು.


ಹಿರಿಯ ನಾಗರಿಕರಿಗಾಗಿ 6 ​​ಯೋಜನೆಗಳು:
* ಅಟಲ್ ಪಿಂಚಣಿ ಯೋಜನೆ: ಈ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ವಹಿಸುತ್ತದೆ. ಈ ಯೋಜನೆಯಲ್ಲಿ 5 ರೀತಿಯ ಪಿಂಚಣಿ ಶ್ರೇಣಿಗಳಿವೆ. 60 ವರ್ಷದ ನಂತರ ನೀವು 1000 ರಿಂದ 5000 ರೂ. ವರೆಗೆ  ಪಿಂಚಣಿ ಪಡೆಯುತ್ತೀರಿ.
* ರಾಷ್ಟ್ರೀಯ ಪಿಂಚಣಿ ಯೋಜನೆ: ಈ ಯೋಜನೆಯನ್ನು PFRDA ನಿಯಂತ್ರಿಸುತ್ತದೆ ಮತ್ತು ನಿವೃತ್ತಿಯ ನಂತರ ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
* ಎಲ್ ಐಸಿ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ: ಇದರಲ್ಲಿ ವರ್ಷಕ್ಕೆ ಕನಿಷ್ಠ 12 ಸಾವಿರ ರೂ. ಹೂಡಿಕೆ ,ಮಾಡಬೇಕು. ತ್ರೈಮಾಸಿಕಕ್ಕೆ 3 ಸಾವಿರ, ಅರ್ಧ ವರ್ಷಕ್ಕೆ 6 ಸಾವಿರ ಮತ್ತು ತಿಂಗಳಿಗೆ 1000 ರೂ.  ಪಿಂಚಣಿ ಪಡೆಯಬಹುದು.


ಇದನ್ನೂ ಓದಿ : ಕೇವಲ ಒಂದು ಲಕ್ಷ ರೂ.ಗಳಲ್ಲಿ ಈ ತಳಿಯ ಸವತೆಕಾಯಿ ವ್ಯವಸಾಯ ಪ್ರಾರಂಭಿಸಿ ತಿಂಗಳಿಗೆ ಕೈತುಂಬಾ ಸಂಪಾದಿಸಿ!


* ವರಿಷ್ಠ ಪಿಂಚಣಿ ಭೀಮಾ ಯೋಜನೆ (VPBY): ವರಿಷ್ಠ ಪಿಂಚಣಿ ಭೀಮಾ ಯೋಜನೆಯು ಭಾರತೀಯ ಜೀವ ವಿಮಾ ನಿಗಮ (LIC) ನೀಡುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆಯು ವಾರ್ಷಿಕ 9 ಪ್ರತಿಶತದಷ್ಟು ಬಡ್ಡಿಯನ್ನು  ನೀಡುತ್ತದೆ. 
* ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (NSAP): ಈ ಯೋಜನೆಯಡಿಯಲ್ಲಿ, ಬಡತನ ರೇಖೆಗಿಂತ ಕೆಳಗಿರುವವರಿಗೆ  (BPL)  ವಿಧವೆಯರು ಮತ್ತು ಅಂಗವಿಕಲ ವ್ಯಕ್ತಿಗಳು ಮತ್ತು NSAP ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಲಾದ ಅರ್ಹತಾ ಮಾನದಂಡಗಳನ್ನು ಪೂರೈಸುವವರಿಗೆ 200 ರಿಂದ 500 ವರೆಗಿನ ಹಣಕಾಸಿನ ನೆರವು ನೀಡಲಾಗುತ್ತದೆ.
* ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ (IGNOAPS): ಮಾಸಿಕ 200 ರೂ.  ಪಿಂಚಣಿ ನೀಡಲಾಗುತ್ತದೆ. 80 ವರ್ಷ ವಯಸ್ಸಾದ ಮೇಲೆ ಈ ಪಿಂಚಣಿ ತಿಂಗಳಿಗೆ  500 ರೂಪಾಯಿಗೆ  ಏರಿಕೆಯಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ