GII Ranking 2022: ಉದಯೋನ್ಮುಖ ಆರ್ಥಿಕತೆಯಲ್ಲಿ ಭಾರತದ ಉತ್ತಮ ಪ್ರದರ್ಶನ, ಜಿಐಐ ಶ್ರೇಯಾಂಕ ಪಟ್ಟಿಯಲ್ಲಿ 40ನೇ ಸ್ಥಾನ
Global Innovation Index Ranking 2022: ಈ ಶ್ರೇಯಾಂಕ ಪಟ್ಟಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ಅಗ್ರ 40 ರಲ್ಲಿ ಸ್ಥಾನ ಗಳಿಸಿದೆ. ಈ ವಾರ್ಷಿಕ ವರದಿಯನ್ನು ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ ಸೆಪ್ಟೆಂಬರ್ 29 ರಂದು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಭಾರತನ್ನು ಕೆಳ ಮಧ್ಯಮ ಆದಾಯ ವರ್ಗದಲ್ಲಿ ಇನ್ನೋವೇಶನ್ ಲೀಡರ್ ಎಂದು ಗುರುತಿಸಲಾಗಿದೆ.
GII Ranking 2022: ದೇಶದಲ್ಲಿ ಸ್ಟಾರ್ಟಪ್ ವಲಯಕ್ಕೆ ಸಿಗುತ್ತಿರುವ ಉತ್ತಮ ವಾತಾವರಣದ ಕಾರಣ, ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕದಲ್ಲಿ ಸಾಕಷ್ಟು ಸುಧಾರಣೆ ಗಮನಿಸಲಾಗಿದೆ. ಈ ಶ್ರೇಯಾಂಕ ಪಟ್ಟಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ಅಗ್ರ 40 ರಲ್ಲಿ ಸ್ಥಾನ ಗಳಿಸಿದೆ. ಈ ವಾರ್ಷಿಕ ವರದಿಯನ್ನು ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ ಸೆಪ್ಟೆಂಬರ್ 29 ರಂದು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಭಾರತನ್ನು ಕೆಳ ಮಧ್ಯಮ ಆದಾಯ ವರ್ಗದಲ್ಲಿ ಇನ್ನೋವೇಶನ್ ಲೀಡರ್ ಎಂದು ಗುರುತಿಸಲಾಗಿದೆ.
ಈ WIPO ವರದಿಯ ಪ್ರಕಾರ, ಸ್ವಿಟ್ಜರ್ಲೆಂಡ್, ಯುನೈಟೆಡ್ ಸ್ಟೇಟ್ಸ್, ಸ್ವೀಡನ್, ಯುನೈಟೆಡ್ ಕಿಂಗ್‌ಡಮ್ ಮತ್ತು ನೆದರ್ಲ್ಯಾಂಡ್ಸ್ ವಿಶ್ವದ ಅತ್ಯಂತ ನಾವಿನ್ಯತೆ ಹೊಂದಿರುವ ಆರ್ಥಿಕತೆಗಳಾಗಿವೆ, ಚೀನಾವು ಟಾಪ್ 10 ರ ಹೊಸ್ತಿಲಲ್ಲಿದೆ. ಮತ್ತೊಂದೆಡೆ, ಉದಯೋನ್ಮುಖ ಆರ್ಥಿಕತೆಯು ಸ್ಥಿರವಾಗಿ ಕಾರ್ಯನಿರ್ವಹಿಸುತ್ತಿದೆ, ಇದರಲ್ಲಿ ಭಾರತವು 40 ನೇ ಸ್ಥಾನಕ್ಕೆ ತಲುಪಿದೆ.
7 ವರ್ಷಗಳಲ್ಲಿ ಭಾರತ 81ನೇ ಸ್ಥಾನದಿಂದ 40ನೇ ಸ್ಥಾನಕ್ಕೆ ತಲುಪಿದೆ
ಭಾರತವು 2020 ರಲ್ಲಿ ಈ ಪಟ್ಟಿಯ ಅಗ್ರ 50 ದೇಶಗಳಲ್ಲಿ ಸ್ಥಾನ ಪಡೆದಿತ್ತು ಮತ್ತು ಈ ವರ್ಷ ಅಗ್ರ 40 ರೊಳಗೆ ಪ್ರವೇಶಿಸಿದೆ. ಈ ಹಿಂದೆ 2015ರಲ್ಲಿ ಭಾರತ 81ನೇ ಶ್ರೇಯಾಂಕ ಹೊಂದಿತ್ತು. ಕರೋನಾ ಸಾಂಕ್ರಾಮಿಕದ ಹೊರತಾಗಿಯೂ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಇತರ ಹೂಡಿಕೆಗಳಲ್ಲಿನ ಭಾರತದ ಉತ್ಕರ್ಷವು 2021 ರಲ್ಲಿ ಮುಂದುವರೆದಿದೆ ಎಂದು ಈ ವರದಿ ಹೇಳಿದೆ. ಆದರೆ ನಾವೀನ್ಯತೆ ಹೂಡಿಕೆಯಲ್ಲಿ ಹಲವು ಸವಾಲುಗಳಿವೆ ಎಂದೂ ಕೂಡ ವರದಿ ಹೇಳಿದೆ. ಇದೇ ವೇಳೆ, ಭಾರತದಲ್ಲಿ ಆವಿಷ್ಕಾರವನ್ನು ನಿರಂತರವಾಗಿ ಉತ್ತೇಜಿಸಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ ಶ್ರೇಯಾಂಕದಲ್ಲಿ ಸ್ವಿಟ್ಜರ್ಲೆಂಡ್ ಸತತ 12 ನೇ ವರ್ಷದಲ್ಲಿ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿದೆ. ಇದಕ್ಕೆ ದೊಡ್ಡ ಕಾರಣವೆಂದರೆ ಈ ದೇಶವು ಪೇಟೆಂಟ್‌ಗಳು, ಸಾಫ್ಟ್‌ವೇರ್ ಖರ್ಚು, ಹೈಟೆಕ್ ಉತ್ಪಾದನೆ ಮತ್ತು ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಶ್ರೇಯಾಂಕಕ್ಕಾಗಿ, ಪ್ರತಿ ದೇಶವನ್ನು ಹಲವಾರು ನಿಯತಾಂಕಗಳ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಇವುಗಳಲ್ಲಿ ಸಂಸ್ಥೆಗಳು, ಹ್ಯೂಮ್ ಮತ್ತು ಬಂಡವಾಳ ಸಂಶೋಧನೆ ಮತ್ತು ಮೂಲಸೌಕರ್ಯ ಶಾಮೀಲಾಗಿವೆ.
ಇದನ್ನೂ ಓದಿ-ಭಾರತಕ್ಕೆ 5ಜಿ ಯಂತೂ ಬಂತು..! ಆದರೆ ನಿಮ್ಮ ಮೊಬೈಲ್ ಗೆ ಬರುವುದು ಯಾವಾಗ ಗೊತ್ತಾ?
ಪ್ರಧಾನಿ ಮೋದಿಯಿಂದ ವಿಜ್ಞಾನಿಗಳ ನಾವೀನ್ಯತೆಗೆ ಮನ್ನಣೆ
ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವನ್ನು ಸುಧಾರಿಸುವ ಬಗ್ಗೆ, ಪ್ರಧಾನಿ ಮೋದಿ ಅವರು ಇತ್ತೀಚೆಗೆ ನಮ್ಮ ವಿಜ್ಞಾನಿಗಳ ಸಾಧನೆಗಳನ್ನು ನಾವು ಆಚರಿಸಿದಾಗ ಮಾತ್ರ, ವಿಜ್ಞಾನವು ನಮ್ಮ ಸಮಾಜದ ಭಾಗವಾಗುತ್ತದೆ, ಅದು ಸಂಸ್ಕೃತಿಯ ಭಾಗವಾಗುತ್ತದೆ ಎಂದು ಹೇಳಿದ್ದರು. ಪ್ರಧಾನಿ ಮೋದಿಯವರ ಪ್ರಕಾರ, ನಮ್ಮ ಸರ್ಕಾರ ವಿಜ್ಞಾನ ಆಧಾರಿತ ಅಭಿವೃದ್ಧಿಯ ಚಿಂತನೆಯೊಂದಿಗೆ ಕೆಲಸ ಮಾಡುತ್ತಿದೆ. 2014 ರಿಂದ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಸರ್ಕಾರದ ಪ್ರಯತ್ನಗಳಿಂದಾಗಿ ಭಾರತದ ಜಾಗತಿಕ ಆವಿಷ್ಕಾರ ಸೂಚ್ಯಂಕ ಶ್ರೇಯಾಂಕವು ಇಂದು ಸುಧಾರಿಸಿದೆ.
ಇದನ್ನೂ ಓದಿ-LPG Price : ದೇಶದ ಜನತೆಗೆ ಗುಡ್ ನ್ಯೂಸ್.. LPG ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ
ಈ ವರದಿಯ ಸಹಾಯದಿಂದ, ಎಲ್ಲಾ ದೇಶಗಳ ಸರ್ಕಾರಗಳು ನಾವೀನ್ಯತೆಯಂತಹ ಸಂಬಂಧಿತ ಅವಕಾಶಗಳನ್ನು ಹೆಚ್ಚಿಸಲು ಸ್ಫೂರ್ತಿ ಪಡೆದಿವೆ ಮತ್ತು ಅನೇಕ ದೇಶಗಳ ಸರ್ಕಾರಗಳು ತಮ್ಮ ನೀತಿಗಳನ್ನು ಸುಧಾರಿಸಲು ಇದೊಂದು ಪ್ರಮುಖ ಮಾರ್ಗವೆಂದು ಪರಿಗಣಿಸುತ್ತವೆ. WIPO ಡಿಜಿ ಡ್ಯಾರೆನ್ ಟ್ಯಾಂಗ್ ತಮ್ಮ ವರದಿಯಲ್ಲಿ, ಈ ವರ್ಷದ ಜಾಗತಿಕ ನಾವೀನ್ಯತೆ ಸೂಚ್ಯಂಕವು ಸಾಂಕ್ರಾಮಿಕ ರೋಗದಿಂದ ಹೊರಹೊಮ್ಮುತ್ತಿರುವಾಗ ನಾವೀನ್ಯತೆ ಒಂದು ಅಡ್ಡಹಾದಿಯಲ್ಲಿದೆ ಎಂದು ಕಂಡುಹಿಡಿದಿದೆ, ಆದ್ದರಿಂದ ನಾವು ಅದರ ಮೇಲೆ ಕೇಂದ್ರೀಕರಿಸಿ ಅದರಲ್ಲಿ ಹೂಡಿಕೆ ಮಾಡಬೇಕಾಗಿದೆ ಎಂದಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.