Airlines Financial Crisis: ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಏರ್‌ಲೈನ್ ಕಂಪನಿ ಗೋ ಫರ್ಸ್ಟ್ ಕುರಿತು ಮಹತ್ವದ ಅಪ್ಡೇಟ್ ಪ್ರಕಟಗೊಂಡಿದೆ. ಮೇ 19 ರವರೆಗೆ ವಿಮಾನಯಾನ ಸಂಸ್ಥೆಯ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ದಿವಾಳಿತನದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಕಂಪನಿಯ ಮಂಡಳಿಯನ್ನು ಅಮಾನತುಗೊಳಿಸಿದೆ. ಇದರೊಂದಿಗೆ ನೌಕರರಿಗೂ ಹೆಚ್ಚಿನ ಪರಿಹಾರ ಒದಗಿಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Oil Price : ಈ ಖಾದ್ಯ ತೈಲ ಬೆಲೆಯಲ್ಲಿ ಭಾರಿ ಇಳಿಕೆ, ಶ್ರೀಸಾಮಾನ್ಯರಿಗೊಂದು ಸಂತಸದ ಸುದ್ದಿ!


ನೌಕರರ ಕಡಿತ ಇರುವುದಿಲ್ಲ
ಗೋ ಫಸ್ಟ್‌ನ ದಿವಾಳಿತನ ಅರ್ಜಿಯನ್ನು ಎನ್‌ಸಿಎಲ್‌ಟಿ ಅನುಮೋದಿಸಿದೆ. ಮಂಡಳಿಯನ್ನು ಅಮಾನತುಗೊಳಿಸುವುದರೊಂದಿಗೆ, ಇಂಟರಿಮ್ ರೆಸಲ್ಯೂಶನ್ ಪ್ರೊಫೆಷನಲ್ಸ್  (IRP) ನೇಮಿಸಲಾಗಿದೆ. ಇದಲ್ಲದೇ ನಿಯಮಿತ ವೆಚ್ಚಕ್ಕಾಗಿ 5 ಕೋಟಿ ರೂ.ಗಳನ್ನು ಠೇವಣಿ ಇಡುವಂತೆ ಮಂಡಳಿಗೆ ಆದೇಶಿಸಲಾಗಿದೆ. ಉದ್ಯೋಗಿಗಳ ಹಿತದೃಷ್ಟಿಯಿಂದ ಎನ್‌ಸಿಎಲ್‌ಟಿಯೂ ಈ ಆದೇಶ ನೀಡಿದೆ. ಇದರ ಅಡಿಯಲ್ಲಿ, ಯಾವುದೇ ಉದ್ಯೋಗಿಯನ್ನು ಕಂಪನಿಯಿಂದ ತೆಗೆದುಹಾಕಲಾಗುವುದಿಲ್ಲ.


ಇದನ್ನೂ ಓದಿ-Savings Tips: ಏಪ್ರಿಲ್ ತಿಂಗಳಿನಲ್ಲಿ ಆಪ್ರೇಸಲ್ ಸಿಕ್ಕಿದೆಯಾ? ಈ ರೀತಿ ಉಳಿತಾಯ ಮಾಡಿ!


₹11,463 ಕೋಟಿ ಸಾಲ ಉಳಿಸಿಕೊಂಡ ಗೋ ಫಸ್ಟ್
ಇಂದು ಅಂದರೆ ಬುಧವಾರದಂದು ಎನ್‌ಸಿಎಲ್‌ಟಿಯ ಪೀಠವು ಏರ್‌ಲೈನ್‌ನ ಅರ್ಜಿಯ ಬಗ್ಗೆ ನಿರ್ಧಾರ ಕೈಗೊಂಡಿದೆ, ಇದರಲ್ಲಿ ಅದರ ಹಣಕಾಸಿನ ಹೊಣೆಗಾರಿಕೆಗಳ ಮೇಲೆ ಮಧ್ಯಂತರ ತಡೆಗೆ ಮನವಿ ಮಾಡಲಾಗಿದೆ.  ಏರ್‌ಲೈನ್ ಕಂಪನಿಯು ಸುಮಾರು 11,463 ಕೋಟಿ ರೂ.ಗಳ ಹೊಣೆಗಾರಿಕೆಯನ್ನು ಹೊಂದಿದೆ. ಏರ್‌ಕ್ರಾಫ್ಟ್ ಎಂಜಿನ್‌ಗಳ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಲ್ಲೇಖಿಸಿ, ವಾಡಿಯಾ ಗ್ರೂಪ್‌ನ ಏರ್‌ಲೈನ್ ಕಂಪನಿಯು ಹಣಕಾಸಿನ ಬಿಕ್ಕಟ್ಟಿನಿಂದ ವಿಮಾನಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.