Gold Price Today: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ...ಇಲ್ಲಿದೆ ಇಂದಿನ ಹಳದಿಲೋಹದ ಬೆಲೆ
ಇಂದು (ಏಪ್ರಿಲ್ 25) ದೇಶದಲ್ಲಿ 10 ಗ್ರಾಂ 24-ಕ್ಯಾರೆಟ್ ಚಿನ್ನದ ಬೆಲೆ 53,450 ರೂ. ಆಗಿದೆ. ಬೆಲೆಯಲ್ಲಿ 10 ರೂ. ಇಳಿಕೆ ಕಂಡುಬಂದಿದ್ದು, ಚಿನ್ನದ ಬೆಲೆಯಲ್ಲಿ ಏರಿಳಿತವಾಗಿದೆ. ಇನ್ನೊಂದೆಡೆ ಬೆಳ್ಳಿ ಬೆಲೆಯಲ್ಲಿ 100 ರೂ. ಏರಿಕೆ ಕಂಡುಬಂದಿದ್ದು, ಕೆಜಿ ಬೆಳ್ಳಿಯ ಬೆಲೆ 66,700 ರೂ. ಆಗಿದೆ. ಕಳೆದ ದಿನ 66,600 ರೂ.ಗೆ ಬೆಳ್ಳಿ ಮಾರಾಟವಾಗುತ್ತಿತ್ತು.
ನವದೆಹಲಿ : ಇಂದು (ಏಪ್ರಿಲ್ 25) ದೇಶದಲ್ಲಿ 10 ಗ್ರಾಂ 24-ಕ್ಯಾರೆಟ್ ಚಿನ್ನದ ಬೆಲೆ 53,450 ರೂ. ಆಗಿದೆ. ಬೆಲೆಯಲ್ಲಿ 10 ರೂ. ಇಳಿಕೆ ಕಂಡುಬಂದಿದ್ದು, ಚಿನ್ನದ ಬೆಲೆಯಲ್ಲಿ ಏರಿಳಿತವಾಗಿದೆ. ಇನ್ನೊಂದೆಡೆ ಬೆಳ್ಳಿ ಬೆಲೆಯಲ್ಲಿ 100 ರೂ. ಏರಿಕೆ ಕಂಡುಬಂದಿದ್ದು, ಕೆಜಿ ಬೆಳ್ಳಿಯ ಬೆಲೆ 66,700 ರೂ. ಆಗಿದೆ. ಕಳೆದ ದಿನ 66,600 ರೂ.ಗೆ ಬೆಳ್ಳಿ ಮಾರಾಟವಾಗುತ್ತಿತ್ತು.
ಇದನ್ನು ಓದಿ: ರಾಜ್ಯದಲ್ಲಿ ತರಕಾರಿ ಬೆಲೆ ಸ್ಥಿರ: ಇಂದಿನ ದರ ಇಂತಿದೆ
ಮೇಕಿಂಗ್ ಚಾರ್ಜ್‌ಗಳು, ರಾಜ್ಯ ತೆರಿಗೆಗಳು ಮತ್ತು ಅಬಕಾರಿ ಸುಂಕದಂತಹ ಅಂಶಗಳಿಂದಾಗಿ ಹಳದಿ ಲೋಹದ ದರವು ಪ್ರತಿದಿನ ಭಿನ್ನವಾಗಿರುತ್ತದೆ. ಇಂದು ದೇಶಾದ್ಯಂತ ಕೆಲವು ನಗರಗಳ ಚಿನ್ನದ ದರಗಳು ಇಲ್ಲಿವೆ:
ಗುಡ್ ರಿಟರ್ನ್ಸ್ ವೆಬ್‌ಸೈಟ್ ಪ್ರಕಾರ, ಮುಂಬೈ, ನವದೆಹಲಿ ಮತ್ತು ಕೋಲ್ಕತ್ತಾದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನವನ್ನು 49,300 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಚೆನ್ನೈನಲ್ಲಿ 10 ಗ್ರಾಂ ಬೆಲೆಬಾಳುವ ಹಳದಿ ಲೋಹದ ಬೆಲೆ 49,650 ರೂ. ಇದೆ.
24 ಕ್ಯಾರೆಟ್ ಚಿನ್ನದ ದರಗಳನ್ನು ಗಮನಿಸಿದರೆ, ಬೆಂಗಳೂರು, ಮುಂಬೈ, ನವದೆಹಲಿ, ಕೇರಳ, ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ 10 ಗ್ರಾಂ ಚಿನ್ನದ ಬೆಲೆ 53,440 ರೂ. ಇದೆ. ಅದೇ ಪ್ರಮಾಣದ 24 ಕ್ಯಾರೆಟ್ ಶುದ್ಧತೆಯ ಚಿನ್ನ ಚೆನ್ನೈನಲ್ಲಿ 53,940 ರೂ.ಗೆ ವ್ಯಾಪಾರವಾಗುತ್ತಿದೆ.
ಮಧುರೈ ಮತ್ತು ಪಾಟ್ನಾದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನವನ್ನು ಕ್ರಮವಾಗಿ 49,440 ಮತ್ತು 49,040 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದೇ ಪ್ರಮಾಣದ 24-ಕ್ಯಾರೆಟ್ ಶುದ್ಧತೆಯನ್ನು ಮಧುರೈನಲ್ಲಿ ರೂ 53,940 ಮತ್ತು ಪಾಟ್ನಾದಲ್ಲಿ 53,490 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಮೈಸೂರು, ಮಂಗಳೂರು, ವಿಜಯವಾಡ ಸೇರಿದಂತೆ ನಗರಗಳಲ್ಲಿಯೂ ಇದೇ ಪ್ರಮಾಣದ 22 ಕ್ಯಾರೆಟ್ ಶುದ್ಧತೆ 48,990 ರೂ.ಗೆ ಮಾರಾಟವಾಗುತ್ತಿದೆ. ಆದಾಗ್ಯೂ, ಮೇಲಿನ ಎಲ್ಲಾ ಪ್ರದೇಶಗಳಲ್ಲಿ 10 ಗ್ರಾಂ 24-ಕ್ಯಾರೆಟ್ ಚಿನ್ನದ ಬೆಲೆ ಇಂದು 53,440 ರೂ. ಇದೆ.
ಜೈಪುರ ಮತ್ತು ನಾಗ್ಪುರದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನವನ್ನು ಕ್ರಮವಾಗಿ ರೂ 49,140 ಮತ್ತು ರೂ 49,040 ಕ್ಕೆ ಖರೀದಿಸಲಾಗುತ್ತಿದೆ. ಅದೇ ಪ್ರಮಾಣದ 24-ಕ್ಯಾರೆಟ್ ಶುದ್ಧತೆಯ ಬೆಲೆ ಜೈಪುರದಲ್ಲಿ ರೂ 53,590 ಮತ್ತು ನಾಗ್ಪುರದಲ್ಲಿ ರೂ 53,490 ಆಗಿದೆ.
ಇದನ್ನು ಓದಿ: ಕೊರೊನಾವೈರಸ್‌ನಿಂದ ಮುಕ್ತವಾಗಿದೆ ಈ ರಾಜ್ಯ: ಕೊನೆಯ ಸೋಂಕಿತ ರೋಗಿ ಕೂಡ ಆಸ್ಪತ್ರೆಯಿಂದ ಡಿಸ್ಚಾರ್ಜ್
ಪುಣೆ ಮತ್ತು ಚಂಡೀಗಢ ಸೇರಿದಂತೆ ಇತರ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನ ಕ್ರಮವಾಗಿ 49,040 ಮತ್ತು 49,140 ರೂ.ಗೆ ಮಾರಾಟವಾಗುತ್ತಿದೆ. ಅದೇ ಪ್ರಮಾಣದ 24-ಕ್ಯಾರೆಟ್ ಶುದ್ಧತೆಯನ್ನು ಪುಣೆಯಲ್ಲಿ ರೂ 53,490 ಮತ್ತು ಚಂಡೀಗಢದಲ್ಲಿ ರೂ 53,590 ಕ್ಕೆ ಮಾರಾಟ ಮಾಡಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.