ನವದೆಹಲಿ: ಮೇ 3ರಂದು ದೇಶದೆಲ್ಲೆಡೆ ಹಿಂದೂ ಬಾಂಧವರು ಅಕ್ಷಯ ತೃತೀಯ ಹಬ್ಬವನ್ನು ಸಡಗರದಿಂದ ಆಚರಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಜನರಿಗೆ ಸಿಹಿ ಸುದ್ದಿ ಲಭಿಸಿದ್ದು, ಬಂಗಾರದ ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದೆ. ಹಬ್ಬ ಎಂದರೆ ಚಿನ್ನ ಖರೀದಿಸಲು ಜನರು ಮುಂದಾಗುತ್ತಾರೆ. ಅಕ್ಷಯ ತೃತೀಯದಂದು ಬಂಗಾರ ಕೊಂಡರೆ ಮಂಗಳವಾಗುತ್ತದೆ ಎಂಬುದು ಭಾರತೀಯರ ನಂಬಿಕೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: Dharmendra Health Update: ಟ್ವೀಟ್ ಮೂಲಕ ಖುದ್ದಾಗಿ ತಮ್ಮ ಹೆಲ್ತ್  ಅಪ್ಡೇಟ್ ನೀಡಿದ ಧರ್ಮೇಂದ್ರ


ಕಳೆದ ಕೆಲ ದಿನವೂ ಭಾರಿ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಸಹ ಇಳಿಕೆ ಕಂಡಿದೆ. ಇಂದು (ಮೇ 2) 10 ಗ್ರಾಂ 24-ಕ್ಯಾರೆಟ್ ಚಿನ್ನದ ಬೆಲೆ 52,790 ರೂ. ಆಗಿದ್ದು, 10 ರೂ. ಕುಸಿತ ಕಂಡುಬಂದಿದೆ.  ಆದರೆ ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಕಳೆದ ದಿನದ ಬೆಲೆಯಲ್ಲಿ ಇಂದು ಸಹ ಮುಂದುವರೆದಿದೆ. ಇನ್ನು ಮೇ 1ರಂದು ಬೆಳ್ಳಿ ಬೆಲೆಯಲ್ಲಿ 500 ರೂ. ಇಳಿಕೆಯಾಗಿತ್ತು.  ಇಂದು ಕೆಜಿ ಬೆಳ್ಳಿಯ ಬೆಲೆ 63,500 ರೂ. ಆಗಿದೆ. 


ಮೇಕಿಂಗ್ ಚಾರ್ಜ್‌ಗಳು, ರಾಜ್ಯ ತೆರಿಗೆಗಳು ಮತ್ತು ಅಬಕಾರಿ ಸುಂಕದಂತಹ ಅಂಶಗಳಿಂದಾಗಿ ಹಳದಿ ಲೋಹದ ದರವು ಪ್ರತಿದಿನ ಭಿನ್ನವಾಗಿರುತ್ತದೆ. ಇಂದು ದೇಶಾದ್ಯಂತ ಕೆಲವು ನಗರಗಳ ಚಿನ್ನದ ದರಗಳು ಇಲ್ಲಿವೆ:


ಗುಡ್ ರಿಟರ್ನ್ಸ್ ವೆಬ್‌ಸೈಟ್ ಪ್ರಕಾರ, ಬೆಂಗಳೂರು, ಹೈದರಾಬಾದ್‌ ಕೇರಳ, ಮುಂಬೈ, ನವದೆಹಲಿ ಮತ್ತು ಕೋಲ್ಕತ್ತಾದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನವನ್ನು 48,390ರೂ.ಗೆ ಮಾರಾಟ ಮಾಡಲಾಗುತ್ತಿದೆ. ಚೆನ್ನೈನಲ್ಲಿ 49,020 ರೂ.ಗೆ ಹಳದಿ ಲೋಹ ಮಾರಾಟವಾಗುತ್ತಿದೆ. ಇನ್ನು 24 ಗ್ರಾಂ ಚಿನ್ನದ ಬೆಲೆ ಬೆಂಗಳೂರು, ಹೈದರಾಬಾದ್‌ ಕೇರಳ, ಮುಂಬೈ, ನವದೆಹಲಿ ಮತ್ತು ಕೋಲ್ಕತ್ತಾದಲ್ಲಿ 52,790 ರೂ. ಇದ್ದು, ಚೆನ್ನೈನಲ್ಲಿ 53,480 ರೂ. ಇದೆ. 


ಮಧುರೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 49,020 ರೂ. ಇದ್ದು, 24 ಕ್ಯಾರೆಟ್‌ ಚಿನ್ನದ ಬೆಲೆ 53,480 ರೂ. ಇದೆ. ಇನ್ನು ಪಾಟ್ನಾದಲ್ಲಿ 24-ಕ್ಯಾರೆಟ್ ಶುದ್ಧತೆಯ ಚಿನ್ನಕ್ಕೆ 52,870 ರೂ. ಇದ್ದರೆ, 22 ಕ್ಯಾರೆಟ್‌ ಚಿನ್ನದ ಬೆಲೆ 48,470 ರೂ. ಇದೆ. ಮೈಸೂರು, ಮಂಗಳೂರು, ವಿಜಯವಾಡದಲ್ಲಿ ಇದೇ ಪ್ರಮಾಣದ 22 ಕ್ಯಾರೆಟ್ ಶುದ್ಧತೆ 48,390 ರೂ.ಗೆ ಮಾರಾಟವಾಗುತ್ತಿದೆ. 24 ಕ್ಯಾರೆಟ್‌ ಚಿನ್ನದ ಬೆಲೆ 52,790 ರೂ. ಇದೆ. 


ಇದನ್ನು ಓದಿ: Summer Tips - ಕರೆಂಟ್ ಇಲ್ಲದೆಯೇ ಬಿಂದಾಸ್ ಚಲಾಯಿಸಿ ಎಸಿ-ಕೂಲರ್, ಈ ಕೆಲಸ ಮಾಡಿ ಸಾಕು


ಇನ್ನು ಒಡಿಶಾದ ಭುವನೇಶ್ವರ ಮತ್ತು ಆಂಧ್ರಪ್ರದೇಶ ವಿಶಾಖಪಟ್ಟಣಂನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 48,390 ರೂ.ಆದರೆ, 24 ಕ್ಯಾರೆಟ್‌ ಚಿನ್ನದ ಬೆಲೆ 52,790 ರೂ. ಇದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.