Gold-Silver: ಬಂಗಾರ-ಬೆಳ್ಳಿ ಖರೀದಿದಾರರಿಗೆ ಶಾಕಿಂಗ್ ಸುದ್ದಿ: ಚಿನ್ನ ದರ ಏರಿಕೆ
ಮೇಕಿಂಗ್ ಚಾರ್ಜ್‌ಗಳು, ರಾಜ್ಯ ತೆರಿಗೆಗಳು ಮತ್ತು ಅಬಕಾರಿ ಸುಂಕದಂತಹ ಅಂಶಗಳಿಂದಾಗಿ ಹಳದಿ ಲೋಹದ ದರವು ಪ್ರತಿದಿನ ಭಿನ್ನವಾಗಿರುತ್ತದೆ. ಇಂದು ದೇಶಾದ್ಯಂತ ಕೆಲವು ನಗರಗಳ ಚಿನ್ನದ ದರಗಳು ಇಲ್ಲಿವೆ:
ನವದೆಹಲಿ: ಕಳೆದ ಕೆಲ ದಿನಗಳಿಂದ ಬಂಗಾರ ಬೆಲೆಯಲ್ಲಿ ಇಳಿಕೆ ಕಾಣುತ್ತಿತ್ತು. ಆದರೆ ಇಂದು 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 30 ರೂ. ಏರಿಕೆ ಕಂಡರೆ, 24 ಕ್ಯಾರೆಟ್ ಒಂದು ಗ್ರಾಂ ಚಿನ್ನದಲ್ಲಿ 33 ರೂ. ಏರಿಕೆಯಾಗಿದೆ. ಈ ಸುದ್ದಿ ಚಿನ್ನ ಪ್ರಿಯರಿಗೆ ಶಾಕ್ ನೀಡಿದೆ. ಬೆಳ್ಳಿ ಬೆಲೆಯಲ್ಲಿಯೂ ಏರಿಕೆ ಕಂಡಿದ್ದು, ಒಂದು ಕೆಜಿ ಬೆಳ್ಳಿ ದರದಲ್ಲಿ 300 ರೂ. ಏರಿಕೆಯಾಗಿದೆ.
ಇದನ್ನು ಓದಿ: ಡೇವಿಡ್ ವಾರ್ನರ್ ಹಾಡಿ ಹೊಗಳಿದ ವೀರೇಂದ್ರ ಸೆಹ್ವಾಗ್
ಇಂದು 10 ಗ್ರಾಂ 24-ಕ್ಯಾರೆಟ್ ಚಿನ್ನದ ಬೆಲೆ 52,790 ರೂ. ಆಗಿದೆ. ಇಂದು ಒಂದು ಕೆಜಿ ಬೆಳ್ಳಿಯು 66,800 ರೂ.ಗೆ ಮಾರಾಟವಾಗುತ್ತಿದೆ.
ಮೇಕಿಂಗ್ ಚಾರ್ಜ್‌ಗಳು, ರಾಜ್ಯ ತೆರಿಗೆಗಳು ಮತ್ತು ಅಬಕಾರಿ ಸುಂಕದಂತಹ ಅಂಶಗಳಿಂದಾಗಿ ಹಳದಿ ಲೋಹದ ದರವು ಪ್ರತಿದಿನ ಭಿನ್ನವಾಗಿರುತ್ತದೆ. ಇಂದು ದೇಶಾದ್ಯಂತ ಕೆಲವು ನಗರಗಳ ಚಿನ್ನದ ದರಗಳು ಇಲ್ಲಿವೆ:
ಗುಡ್ ರಿಟರ್ನ್ಸ್ ವೆಬ್‌ಸೈಟ್ ಪ್ರಕಾರ, ಬೆಂಗಳೂರು, ಹೈದರಾಬಾದ್ ಕೇರಳ, ಮುಂಬೈ, ನವದೆಹಲಿ ಮತ್ತು ಕೋಲ್ಕತ್ತಾದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನ 47,400ರೂ.ಗೆ ಮಾರಾಟ ಮಾಡಲಾಗುತ್ತಿದೆ. ಚೆನ್ನೈನಲ್ಲಿ 48,770 ರೂ.ಗೆ ಹಳದಿ ಲೋಹ ಮಾರಾಟವಾಗುತ್ತಿದೆ. ಇನ್ನು 24 ಗ್ರಾಂ ಚಿನ್ನದ ಬೆಲೆ ಬೆಂಗಳೂರು, ಹೈದರಾಬಾದ್ ಕೇರಳ, ಮುಂಬೈ, ನವದೆಹಲಿ ಮತ್ತು ಕೋಲ್ಕತ್ತಾದಲ್ಲಿ 51,710 ರೂ. ಇದ್ದು, ಚೆನ್ನೈನಲ್ಲಿ 53,200 ರೂ. ಇದೆ.
ಇದನ್ನು ಓದಿ: Viral News: ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ ಈ ಮೂವರ ಸಂಬಂಧ!
ಮಧುರೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 48,770 ರೂ. ಇದ್ದು, 24 ಕ್ಯಾರೆಟ್ ಚಿನ್ನದ ಬೆಲೆ 53,200 ರೂ. ಇದೆ. ಇನ್ನು ಪಾಟ್ನಾದಲ್ಲಿ 24-ಕ್ಯಾರೆಟ್ ಶುದ್ಧತೆಯ ಚಿನ್ನಕ್ಕೆ 51,860 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 47,550 ರೂ. ಇದೆ. ಮೈಸೂರು, ಮಂಗಳೂರು, ವಿಜಯವಾಡದಲ್ಲಿ ಇದೇ ಪ್ರಮಾಣದ 22 ಕ್ಯಾರೆಟ್ ಶುದ್ಧತೆ 47,400 ರೂ.ಗೆ ಮಾರಾಟವಾಗುತ್ತಿದೆ. 24 ಕ್ಯಾರೆಟ್ ಚಿನ್ನದ ಬೆಲೆ 51,710 ರೂ. ಇದೆ.
ಇನ್ನು ಒಡಿಶಾದ ಭುವನೇಶ್ವರ ಮತ್ತು ಆಂಧ್ರಪ್ರದೇಶ ವಿಶಾಖಪಟ್ಟಣಂನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,400 ರೂ.ಆದರೆ, 24 ಕ್ಯಾರೆಟ್ ಚಿನ್ನದ ಬೆಲೆ 51,710 ರೂ. ಇದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.