Gold Price Today on 2 January 2023 : ವಾರದ ಮೊದಲ ದಿನದಂದು ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಇಂದು ಭರ್ಜರಿ ಏರಿಕೆಯೊಂದಿಗೆ ಚಿನ್ನದ ಬೆಲೆ 55,000  ಗಾಡಿಯನ್ನು ದಾಟಿದೆ. ಬಹು ಸರಕು ವಿನಿಮಯ ಕೇಂದ್ರದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರುತ್ತಲೇ ಇವೆ. 


COMMERCIAL BREAK
SCROLL TO CONTINUE READING

ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ : 
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ, ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 55,130 ರೂಪಾಯಿಗಳಷ್ಟಿದೆ. ಅಂದರೆ ಶೇಕಡಾ 0.21 ರಷ್ಟು ಏರಿಕೆಯಾದಂತಾಗಿದೆ.  ಇಂದು ಚಿನ್ನದ ಬೆಲೆ 55,052 ರೂ. ಆಗಿದೆ. ಕಳೆದ ವಹಿವಾಟಿನಲ್ಲಿ, ಚಿನ್ನದ ಬೆಲೆ 10 ಗ್ರಾಂಗೆ 54972 ರೂ. ಯಷ್ಟಿತ್ತು. 


ಇದನ್ನೂ ಓದಿ : Government Scheme : ಹೊಸ ವರ್ಷದಲ್ಲಿ ರೈತರಿಗೆ ಮೋದಿ ಸರ್ಕಾರದಿಂದ ಸಿಹಿ ಸುದ್ದಿ!


ಬೆಳ್ಳಿ ಕೂಡಾ ದುಬಾರಿ : 
ಬೆಳ್ಳಿಯ ದರ ಎಷ್ಟಿದೆ ಎಂದು ನೋಡುವುದಾದರೆ, ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ ನಲ್ಲಿ 0.24 ಶೇಕಡಾ  ಏರಿಕೆಯೊಂದಿಗೆ ಕೆ.ಜಿಗೆ 69,580 ರೂ. ತಲುಪಿದೆ. ಇಂದು ಬೆಳ್ಳಿ ಮಾರುಕಟ್ಟೆಯು ಕೆ.ಜಿಗೆ 69,503 ರೂ.ಯೊಂದಿಗೆ ಆರಂಭವಾಯಿತು. ಕಳೆದ ವಹಿವಾಟಿನಲ್ಲಿ, ಬೆಳ್ಳಿ 397 ರೂ.ನಷ್ಟು ಕುಸಿದು ಪ್ರತಿ ಕೆಜಿಗೆ 69,370 ರೂ. ಯಷ್ಟಾಗಿತ್ತು.  


ಜಾಗತಿಕ ಮಾರುಕಟ್ಟೆಯಲ್ಲೂ ಹೆಚ್ಚಳ : 
ಅಂತಾರಾಷ್ಟ್ರೀಯ ಮಾರುಕಟ್ಟೆಯ ಬಗ್ಗೆ ಹೇಳುವುದಾದರೆ ಇಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭರ್ಜರಿ ಏರಿಕೆಯಾಗಿದೆ. ಚಿನ್ನದ ಬೆಲೆ ಇಂದು 0.19 ಶೇಕಡಾ ಏರಿಕೆಯಾಗಿ ಔನ್ಸ್  ಬೆಲೆ 1,827.41 ಡಾಲರ್ ತಲುಪಿದೆ. ಬೆಳ್ಳಿಯ ಬೆಲೆಯು ಕೂಡಾ 0.02 ಪ್ರತಿಶತದಷ್ಟು ಜಿಗಿತ ಕಂಡಿದ್ದು,  ಔನ್ಸ್‌ಗೆ
23.96 ಡಾಲರ್ ನಷ್ಟಾಗಿದೆ.  


ಇದನ್ನೂ ಓದಿ : ಆಧಾರ್ ಕಾರ್ಡ್ ಅಪ್ಡೇಟ್ ಮಾಡದಿದ್ದಲ್ಲಿ ಸಿಗುವುದಿಲ್ಲ ಸರ್ಕಾರಿ ಯೋಜನಗೆಳ ಲಾಭ


62,000 ರೂಪಾಯಿ ಆಗಲಿದೆ ಚಿನ್ನದ ಬೆಲೆ : 
ಮಾರುಕಟ್ಟೆ ತಜ್ಞರ ಪ್ರಕಾರ, 2022 ರಲ್ಲಿ ಹೂಡಿಕೆದಾರರಿಗೆ ಚಿನ್ನವು ಶೇಕಡಾ 22 ಕ್ಕಿಂತ ಹೆಚ್ಚು ಲಾಭವನ್ನು ನೀಡಿದೆ. ಬೆಳ್ಳಿ ಶೇ.11ಕ್ಕೂ ಹೆಚ್ಚು ಆದಾಯ ನೀಡಿದೆ. ಇದೇ ವೇಳೆ ಹೊಸ ವರ್ಷದಲ್ಲಿ ಅಂದರೆ 2023 ರಲ್ಲಿ, ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 62,000 ರುಪಾಯಿ ತಲುಪಿ ಹೊಸ ದಾಖಲೆ ರಚಿಸಬಹುದು ಎಂದು ಅಂದಾಜಿಸಲಾಗಿದೆ. ಇದಲ್ಲದೇ ಬೆಳ್ಳಿಯ ಬೆಲೆ ಕೂಡಾ ಕೆಜಿಗೆ 90,000 ರೂ. ತಲುಪುವ ನಿರೀಕ್ಷೆ ಇದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.