ಬೆಂಗಳೂರು : Gold Price Today : ಕಳೆದ ಎರಡು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ ಏರಿಕೆ ಕಂಡು ಬಂದಿದೆ. ಬಂಗಾರದ ಬೆಲೆಯಲ್ಲಿ ಬರೋಬ್ಬರಿ 700 ರೂಪಾಯಿ ಏರಿಕೆಯಾಗಿದೆ. ಇಂದು 24 ಕ್ಯಾರೆಟ್ ಚಿನ್ನದ ಬೆಲೆ 51,380  ರೂ. ಆಗಿದೆ. ಇನ್ನು 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 47,100 ರೂ. ಆಗಿದೆ.


COMMERCIAL BREAK
SCROLL TO CONTINUE READING

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.


ನಗರ  22 ಕ್ಯಾರೆಟ್ ಚಿನ್ನದ ಬೆಲೆ    24 ಕ್ಯಾರೆಟ್ ಚಿನ್ನದ ಬೆಲೆ
 ಚೆನ್ನೈ 47,670 52,000
ದೆಹಲಿ 47,100 51,380
ಮುಂಬಯಿ 47,250 51,550
ಕೋಲ್ಕತ್ತಾ 47,100 51,380
ಬೆಂಗಳೂರು 47,150 51,440
ಹೈದರಾಬಾದ್ 47,100 51,380
ಕೇರಳ 47,100 51,380

ಇದನ್ನೂ ಓದಿ : Vegetable Price: ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಳ! ಇಲ್ಲಿದೆ ನೋಡಿ ತರಕಾರಿಗಳ ದರ ವಿವರ


ಕಳೆದ ಎರಡು ದಿನಗಳಿಂದ ಬೆಳ್ಳಿ ಬೆಲೆಯಲ್ಲಿಇಳಿಕೆ ಕಂಡು ಬಂದಿತ್ತು. ಆದರೆ ಇಂದು ಬೆಳ್ಳಿ ಬೆಲೆಯಲ್ಲಿ ಕೂಡಾ ಏರಿಕೆಯಾಗಿದೆ. ಇಂದು ಬೆಳ್ಳಿಯಲ್ಲಿ 190 ರೂಪಾಯಿಗಳಷ್ಟು ಏರಿಕೆ ಕಂಡು ಬಂದಿದೆ.  ಗುಡ್ ರಿಟರ್ನ್ ಮಾಹಿತಿ ಪ್ರಕಾರ ಈ ಲೇಖನ ಬರೆಯುವ ಹೊತ್ತಿಗೆ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ.


ನಗರ  ಇಂದಿನ ಬೆಳ್ಳಿ ಬೆಲೆ 
 ಚೆನ್ನೈ 61,200
ದೆಹಲಿ 56,500
ಮುಂಬಯಿ 56,500
ಕೋಲ್ಕತ್ತಾ 56,500
ಬೆಂಗಳೂರು 61,200
ಹೈದರಾಬಾದ್ 61,200
ಕೇರಳ 61,200

ಇದನ್ನೂ ಓದಿ : ರೈತರ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ಮತ್ತೊಂದು ಘೋಷಣೆ


ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ  ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.