ಬೆಂಗಳೂರು : Gold Price Today : ಕಳೆದ ವಾರದ ಏರಿಳಿತದ ಮಧ್ಯೆ ಈ ವಾರದ ಮೊದಲ ದಿನವಾದ ಇಂದು ಚಿನ್ನದ ಬೆಲೆಯಲ್ಲಿ ಕೇವಲ 10 ರೂಪಾಯಿಗಳ ಏರಿಕೆ ಕಂಡು ಬಂದಿದೆ. ಇದರೊಂದಿಗೆ 24 ಕ್ಯಾರೆಟ್ ಚಿನ್ನದ ಬೆಲೆ 52,980 ರೂ. ಆಗಿದ್ದರೆ, 22 ಕ್ಯಾರೆಟ್ ಬಂಗಾರದ ಬೆಲೆ  48,560 ರೂ. ಆಗಿದೆ.


COMMERCIAL BREAK
SCROLL TO CONTINUE READING

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್  ಚಿನ್ನದ ಬೆಲೆ ಹೀಗಿದೆ.


ಚೆನ್ನೈಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 53,740 ರೂಪಾಯಿ ಆಗಿದ್ದು, ಮುಂಬಯಿಯಲ್ಲಿ 52, 980, ದೆಹಲಿಯಲ್ಲಿ 53,140 ರೂ.   
ಕೋಲ್ಕತ್ತಾದಲ್ಲಿ  52,980 ರೂಪಾಯಿ ಆಗಿದೆ. ಇನ್ನು ಬೆಂಗಳೂರಿನಲ್ಲಿ 53,030 ರೂಪಾಯಿ ಆಗಿದ್ದರೆ,  ಹೈದರಾಬಾದ್ ನಲ್ಲಿ  52, 980ರೂಪಾಯಿ ಆಗಿದೆ.  ಕೇರಳದಲ್ಲಿಯೂ 10 ಗ್ರಾಂ ಚಿನ್ನದ ಬೆಲೆ  52, 980ರೂಪಾಯಿ ಆಗಿದೆ. 


ಇದನ್ನೂ ಓದಿ : EPFO News: ಇಪಿಎಫ್ಓ ಕೊಡುಗೆದಾರರ ಪೆನ್ಷನ್ ಹೆಚ್ಚಾಗಲಿದೆಯಾ! ಮಹತ್ವದ ಹೇಳಿಕೆ ನೀಡಿದ ಸರ್ಕಾರ


ಇನ್ನು ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಬೆಳ್ಳಿ ಬೆಲೆ ಸ್ಥಿರವಾಗಿದೆ.  ಈ ಲೇಖನ ಬರೆಯುವ ಹೊತ್ತಿಗೆ ಗುಡ್ ರಿಟರ್ನ್ ಮಾಹಿತಿ ಪ್ರಕಾರ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ.


ಚೆನ್ನೈಯಲ್ಲಿ 67,500 ರೂಪಾಯಿ ಆಗಿದ್ದರೆ,  ಮುಂಬಯಿಯಲ್ಲಿ  61,800 ರೂಪಾಯಿ ಆಗಿದೆ. ಇನ್ನು ದೆಹಲಿಯಲ್ಲಿ  61,800  ರೂಪಾಯಿ, 
ಕೋಲ್ಕತ್ತಾದಲ್ಲಿಯೂ   61,800 ರೂಪಾಯಿ ಆಗಿದೆ. ಬೆಂಗಳೂರಿನ ಬೆಲೆ ನೋಡುವುದಾದರೆ 67,500 ರೂಪಾಯಿ, ಹೈದರಾಬಾದ್ ನಲ್ಲಿ  67,500 ರೂಪಾಯಿ, ಕೇರಳದಲ್ಲಿಯೂ 67,500 ರೂಪಾಯಿ ಆಗಿದೆ. 


ಇದನ್ನೂ ಓದಿ : ನಿಮ್ಮ ಆದಾಯ ₹5 ರಿಂದ ₹10 ಲಕ್ಷ ಆಗಿದ್ದರೆ, ಎಚ್ಚರ! ತಪ್ಪದೆ ಈ ಕೆಲಸ ಮಾಡಿ!


ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ? :
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ, ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.