ಬೆಂಗಳೂರು : Gold Price Today : ಇಂದು ಕೂಡಾ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ.  ಒಂದೇ ದಿನಕ್ಕೆ ಬಂಗಾರದ ಬೆಲೆಯಲ್ಲಿ 540 ರೂಪಾಯಿಗಳ ಇಳಿಕೆ ದಾಖಲಾಗಿದೆ. ಈ ಇಳಿಕೆಯ ನಂತರ  24 ಕ್ಯಾರೆಟ್ ಚಿನ್ನದ ಬೆಲೆ 50,730  ರೂ. ಆಗಿದೆ. ಇನ್ನು 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 46,500 ರೂ. ಆಗಿದೆ.


COMMERCIAL BREAK
SCROLL TO CONTINUE READING

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.


ನಗರ  22 ಕ್ಯಾರೆಟ್ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನದ ಬೆಲೆ
 ಚೆನ್ನೈ 47,100 51,380
 ಮುಂಬಯಿ 46,500 50,730
ದೆಹಲಿ 46,700 50,950
ಕೋಲ್ಕತ್ತಾ 46,500 50,730
ಬೆಂಗಳೂರು 46,550 50,780
ಹೈದರಾಬಾದ್ 46,500 50,730
ಕೇರಳ 46,500 50,730

ಇದನ್ನೂ ಓದಿ : 7th Pay Commission : ಕೇಂದ್ರ ಸರ್ಕಾರಿ ನೌಕರರಗೆ ಶೇ.4 ರಷ್ಟು ತುಟ್ಟಿಭತ್ಯ ಹೆಚ್ಚಳ!


ಎರಡು ದಿನಗಳಿಂದ ಇಳಿಕೆ ಕಂಡಿದ್ದ ಬೆಳ್ಳಿ ಬೆಲೆಯಲ್ಲಿ ಇಂದು ಭರ್ಜರಿ ಏರಿಕೆ ದಾಖಲಾಗಿದೆ. ಬೆಳ್ಳಿ ಬೆಲೆಯಲ್ಲಿ 800 ರೂಪಾಯಿಗಳ ಜಿಗಿತ ಕಂಡು ಬಂದಿದೆ. ಈ ಲೇಖನ ಬರೆಯುವ ಹೊತ್ತಿಗೆ ಗುಡ್ ರಿಟರ್ನ್ ಮಾಹಿತಿ ಪ್ರಕಾರ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ.


ನಗರ  ಇಂದಿನ ಬೆಳ್ಳಿ ಬೆಲೆ 
 ಚೆನ್ನೈ 58,000
 ಮುಂಬಯಿ 51,600
ದೆಹಲಿ 51,600
ಕೋಲ್ಕತ್ತಾ 51,600
ಬೆಂಗಳೂರು 58,000
ಹೈದರಾಬಾದ್ 58,000
ಕೇರಳ 58,000

ಇದನ್ನೂ ಓದಿ :1000 ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಖರೀದಿಸಿ ಈ ಹೊಸ ಸ್ಮಾರ್ಟ್‌ಫೋನ್


ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ  ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.



 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.