Gold Price Today : ಆಭರಣ ಪ್ರಿಯರಿಗೆ ಬಿಗ್ ಶಾಕ್ : ಚಿನ್ನ-ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ!
ಇಂದು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ 40 ರೂಪಾಯಿಗಳಷ್ಟು ಹೆಚ್ಚಾಗಿದೆ, ಹೀಗಾಗಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 46885 ರೂ. ಇದೆ. ಅದೇ ಸಮಯದಲ್ಲಿ, ಬೆಳ್ಳಿಯ ಬೆಲೆ 494 ರೂಪಾಯಿಗಳಷ್ಟು ಹೆಚ್ಚಾಗಿದೆ, ಇದರಿಂದ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 61078 ರೂ.ಗೆ ಏರಿಕೆಯಾಗಿದೆ.
ನವದೆಹಲಿ : ನವರಾತ್ರಿ ಆರಂಭವಾದ ತಕ್ಷಣ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಇಂದು ಬೆಳ್ಳಿಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೆಚ್ಚಾಗಿದೆ.
ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್ ಪ್ರಕಾರ, ಇಂದು 24 ಕ್ಯಾರೆಟ್ ಚಿನ್ನದ ಬೆಲೆ(Gold Price)ಯಲ್ಲಿ ಪ್ರತಿ 10 ಗ್ರಾಂಗೆ 40 ರೂಪಾಯಿಗಳಷ್ಟು ಹೆಚ್ಚಾಗಿದೆ, ಹೀಗಾಗಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 46885 ರೂ. ಇದೆ. ಅದೇ ಸಮಯದಲ್ಲಿ, ಬೆಳ್ಳಿಯ ಬೆಲೆ 494 ರೂಪಾಯಿಗಳಷ್ಟು ಹೆಚ್ಚಾಗಿದೆ, ಇದರಿಂದ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 61078 ರೂ.ಗೆ ಏರಿಕೆಯಾಗಿದೆ.
ಇದನ್ನೂ ಓದಿ : ಈ ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿಯೂ ಸಿಗಲಿದೆ FDಯಷ್ಟೇ ಬಡ್ಡಿ
ಈಗ 24 ಕ್ಯಾರೆಟ್ ಶುದ್ಧ ಚಿನ್ನವು 56126 ರೂ. ಸಾರ್ವಕಾಲಿಕ ಗರಿಷ್ಠ ದರದಿಂದ ಕೇವಲ 9369 ರೂ.ಗಳಷ್ಟು ಅಗ್ಗವಾಗಿದೆ. ಅದೇ ಸಮಯದಲ್ಲಿ, ಬೆಳ್ಳಿ(Silver Price) ಕಳೆದ ವರ್ಷದ ಗರಿಷ್ಠ ದರ 76004 ರೂ.ನಿಂದ 14930 ರೂ.ಗೆ ತಲುಪಿದೆ.
ಈ ರೀತಿಯಾಗಿ ನೀವು ಚಿನ್ನದ ಶುದ್ಧತೆಯನ್ನು ಪರಿಶೀಲಿಸಬಹುದು
ಈಗ ನೀವು ಚಿನ್ನದ ಶುದ್ಧತೆಯನ್ನು ಪರೀಕ್ಷಿಸಲು ಬಯಸಿದರೆ, ಇದಕ್ಕಾಗಿ ಸರ್ಕಾರದಿಂದ ಒಂದು ಆಪ್ ಮಾಡಲಾಗಿದೆ. ಈ ಆಪ್ ಹೆಸರು 'ಬಿಐಎಸ್ ಕೇರ್ ಆಪ್'(BIS Care App) ಮೂಲಕ ಗ್ರಾಹಕರು ಚಿನ್ನದ ಶುದ್ಧತೆಯನ್ನು ಪರಿಶೀಲಿಸಬಹುದು. ಈ ಆಪ್ ಮೂಲಕ, ನೀವು ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದಲ್ಲದೆ, ಅದಕ್ಕೆ ಸಂಬಂಧಿಸಿದ ಯಾವುದೇ ದೂರನ್ನು ಕೂಡ ನೀಡಬಹುದು.
ಇದನ್ನೂ ಓದಿ : Forbes 2021 ರ ಶ್ರೀಮಂತರ ಹೊಸ ಪಟ್ಟಿ ಬಿಡುಗಡೆ : ಭಾರತದ ಅತ್ಯಂತ ಶ್ರೀಮಂತರು ಇವರೇ ನೋಡಿ!
ಮಿಸ್ಡ್ ಕಾಲ್ ನೀಡುವ ಮೂಲಕ ಚಿನ್ನದ ದರ ತಿಳಿಯಬಹುದು
ಮನೆಯಲ್ಲಿ ಕುಳಿತು ಚಿನ್ನ ಮತ್ತು ಬೆಳ್ಳಿಯ ಬೆಲೆಯನ್ನ ನೀವು ಸುಲಭವಾಗಿ ತಿಳಿಯಬಹುದು. ಇದಕ್ಕಾಗಿ, ನೀವು ಈ ಸಂಖ್ಯೆಗೆ 8955664433 ಗೆ ಮಿಸ್ಡ್ ಕಾಲ್ ನೀಡಬೇಕು ಮತ್ತು ನಿಮ್ಮ ಫೋನ್‌ಗೆ ಸಂದೇಶ ಬರುತ್ತದೆ, ಇದರಲ್ಲಿ ನೀವು ಇತ್ತೀಚಿನ ದರಗಳನ್ನು ಪರಿಶೀಲಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ