Gold Purchase: ಚಿನ್ನ ಖರೀದಿ ಆಲೋಚನೆಯಲ್ಲಿದ್ದೀರಾ? ಹಾಗಾದ್ರೆ ಇಲ್ಲಿದೆ ಮಹತ್ವದ ಮಾಹಿತಿ!
ಹೊಸ ಆದಾಯ ತೆರಿಗೆ ನಿಯಮದಿಂದಾಗಿ ಮನೆಯಲ್ಲಿ ಹಚ್ಚಿನ ಬಂಗಾರವನ್ನು ಇಟ್ಟುಕೊಳ್ಳುವಂತಿಲ್ಲ.
ಚಿನ್ನ ಹಾಗೂ ಭಾರತಕ್ಕೆ ಅವಿನಾಭಾವ ಸಂಬಂಧವಿದೆ. ಚಿನ್ನದ ಆಭರಣಗಳನ್ನು ಖರೀದಿಸುವುದು ಭಾರತೀಯ ಕುಟುಂಬಗಳ ಹಳೆಯ ಸಂಪ್ರದಾಯ. ಕೆಲವರು ಬಳಕೆಗಾಗಿ ಬಂಗಾರ ಖರೀದಿ ಮಾಡಿದ್ರೆ ಮತ್ತೆ ಕೆಲವರು ಹೂಡಿಕೆಗಾಗಿ ಖರೀದಿ ಮಾಡುತ್ತಾರೆ. ಮತ್ತೆ ಕೆಲವರು ಸಂಪ್ರದಾಯದಂತೆ ಕೆಲ ಹಬ್ಬಗಳಲ್ಲಿ ಬಂಗಾರ ಖರೀದಿ ಮಾಡುತ್ತಾರೆ. ಮದುವೆ, ಗೃಹ ಪ್ರವೇಶ, ಹುಟ್ಟುಹಬ್ಬ ಸೇರಿದಂತೆ ಕೆಲ ವಿಶೇಷ ಸಂದರ್ಭಗಳಲ್ಲಿ ಬಂಗಾರದವನ್ನು ಉಡುಗೊರೆ ರೂಪದಲ್ಲಿಯೂ ಕೊಡಲಾಗುತ್ತದೆ.
ಬಂಗಾರ ಖರೀದಿಗೆ ಮೊದಲು ಭಾರತ ಕಾನೂನನ್ನು ತಿಳಿಯಬೇಕು. ಕಪ್ಪು ಹಣ ನಿಯಂತ್ರಣಕ್ಕೆ ಮೋದಿ(Modi) ಸರ್ಕಾರ ಕಾನೂನಿನಲ್ಲಿ ಬದಲಾವಣೆ ಮಾಡಿದೆ. ಹೊಸ ಆದಾಯ ತೆರಿಗೆ ನಿಯಮದಿಂದಾಗಿ ಮನೆಯಲ್ಲಿ ಹಚ್ಚಿನ ಬಂಗಾರವನ್ನು ಇಟ್ಟುಕೊಳ್ಳುವಂತಿಲ್ಲ.
ಹನ್ನೆರಡು ಲಕ್ಷಕ್ಕೂ ಅಧಿಕ ಡೆಬಿಟ್ ಕ್ರೆಡಿಟ್ ಕಾರ್ಡ್ ಡಾಟಾ ಕಳ್ಳತನವಾಗಿರುವುದು ನಿಜಾನಾ ?
ತೆರಿಗೆ ಕಾಯ್ದೆ, 1961 ರ ಸೆಕ್ಷನ್ 132 ರ ಪ್ರಕಾರ ಬಂಗಾರ ಖರೀದಿಗೆ ದಾಖಲೆಗಳು ಬೇಕು. ಒಂದು ವೇಳೆ ದಾಖಲೆಗಳನ್ನು ಕೊಡಲು ನೀವು ವಿಫಲರಾದ್ರೆ ದಾಳಿ ವೇಳೆ ಸಿಕ್ಕ ಬಂಗಾರ(Gold), ಬೆಳ್ಳಿ ಸೇರಿದಂತೆ ಅಮೂಲ್ಯ ವಸ್ತುಗಳನ್ನು ತೆರಿಗೆ ಅಧಿಕಾರಿಗಳು ತಮ್ಮ ವಶಕ್ಕೆ ಪಡೆಯುತ್ತಾರೆ. ನ್ಯಾಯ ಸಮ್ಮತವಾಗಿ ಬಂಗಾರ ಖರೀದಿಗೆ ಯಾವುದೇ ಮಿತಿಯಿಲ್ಲ. ಖರೀದಿ ಬಗ್ಗೆ ಇನ್ವಾಯ್ಸ್ ನೀಡಬೇಕಾಗುತ್ತದೆ. ವಂಶಸ್ಥರಿಂದ ಬಂದಿದ್ದರೆ ವಿಲ್ ಪ್ರತಿ ನೀಡಬೇಕಾಗುತ್ತದೆ. ಉಡುಗೊರೆಯಾಗಿ ಪಡೆದಿದ್ದರೆ ಉಡುಗೊರೆ ಪತ್ರ ನೀಡಬೇಕು.
Gold-Silver Rate: ಚಿನ್ನದ ಬೆಲೆಯಲ್ಲಿ ಶೇ.20ರಷ್ಟು ಇಳಿಕೆ; ಬೆಳ್ಳಿ ಬೆಲೆಯಲ್ಲೂ ಇಳಿಕೆ!
ಸೂಕ್ತ ದಾಖಲೆಗಳಿದ್ದರೆ ನೀವು ಮಿತಿಯಿಲ್ಲದೆ ಬಂಗಾರದ ಆಭರಣಗಳನ್ನು ಖರೀದಿಸಬಹುದು. ಮನೆಯಲ್ಲಿ ಅಥವಾ ಬ್ಯಾಂಕ್ ಲಾಕರ್(Bank Locker) ನಲ್ಲಿರುವ ಆಭರಣಗಳಿಗೆ ದಾಖಲೆ ಕೇಳುವ ಹಕ್ಕು ತೆರಿಗೆ ಇಲಾಖೆಗಿದೆ. ಕೆಲ ಮಿತಿಯವರೆಗೆ ಮನೆಯಲ್ಲಿ ಆಭರಣಗಳನ್ನು ಇಡಬಹುದು. ಇದನ್ನು ತೆರಿಗೆ ಇಲಾಖೆ ಪ್ರಶ್ನಿಸುವುದಿಲ್ಲವೆಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
Pension : ನಿಯಮಗಳಲ್ಲಿ ಸಡಿಲಿಕೆ, ಈಗ ಪಿಂಚಣಿ ಪಡೆಯುವಲ್ಲಿ ಎದುರಾಗುವುದಿಲ್ಲ ಯಾವುದೇ ತೊಡುಕು
ವಿವಾಹಿತ ಮಹಿಳೆ 500 ಗ್ರಾಂ ಬಂಗಾರದ ಆಭರಣವನ್ನು ಇಟ್ಟುಕೊಳ್ಳಬಹುದು. ಅವಿವಾಹಿತೆ 250 ಗ್ರಾಂ ಬಂಗಾರವನ್ನು ಇಟ್ಟುಕೊಳ್ಳಬಹುದು. ಪುರುಷರು 100 ಗ್ರಾಂ ಬಂಗಾರವನ್ನು ಇಟ್ಟುಕೊಳ್ಳಬಹುದು.
mAadhaar: ಮನೆಯಲ್ಲಿಯೇ ಕುಳಿತು ಈ 35 ಸೇವೆಗಳ ಲಾಭ ಪಡೆಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.