Gold Price Today : ಇಂದು ಕೂಡಾ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆ ಮುಂದುವರಿದಿದೆ. ದೇಶಿಯ ಮಾರುಕಟ್ಟೆ ಜೊತೆಗೆ  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಗಗನಕ್ಕೆ ಏರಿದೆ. ಇದರಿಂದಾಗಿ ಚಿನ್ನದ ಬೆಲೆ 3 ವಾರಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.


COMMERCIAL BREAK
SCROLL TO CONTINUE READING

ದಾಖಲೆ ಮತ್ತ ತಲುಪಿದ ಬಂಗಾರದ ಬೆಲೆ : 
ಬುಲಿಯನ್ ಮಾರುಕಟ್ಟೆಯಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 430 ರೂಪಾಯಿ ಏರಿಕೆಯಾಗಿದೆ. ಈ ಏರಿಕೆಯೊಂದಿಗೆ ಇಂದು ಬಂಗಾರದ ಬೆಲೆ  64,250 ರೂಪಾಯಿಗೆ ಏರಿದೆ. ಇದು ಇಲ್ಲಿಯವರೆಗಿನ ಗರಿಷ್ಟ ಬೆಲೆಯಾಗಿದೆ. ಅಂದರೆ ಚಿನ್ನದ ಬೆಲೆ  ಇಲ್ಲಿಯವರೆಗಿನ ಎಲ್ಲಾ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ. 


ಇದನ್ನೂ ಓದಿ : Smartphone ಬಳಕೆದಾರರೇ, ತಕ್ಷಣವೇ‌ ಈ ಕೆಲಸ ಮಾಡಿ


ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ : 
ದೇಶಿಯ ಫ್ಯೂಚರ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ಎಂಸಿಎಕ್ಸ್ ನಲ್ಲಿ ಚಿನ್ನದ ಬೆಲೆ 115 ರೂಪಾಯಿ ಹೆಚ್ಚಾಗಿದೆ. 10 ಗ್ರಾಂ ಚಿನ್ನ 63,800 ರೂ.ಗೆ ತಲುಪಿದೆ. ಅದೇ ರೀತಿ ಬೆಳ್ಳಿ ಕೂಡಾ ಸುಮಾರು 100 ರೂಪಾಯಿ ಏರಿಕೆಯೊಂದಿಗೆ ಪ್ರತಿ ಕೆಜಿಗೆ 75,730 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ. 


22 ಕ್ಯಾರೆಟ್ ಚಿನ್ನದ ಬೆಲೆ  (10 ಗ್ರಾಂ) :
ಬೆಂಗಳೂರು : 58,900ರೂ. 
ದೆಹಲಿ: 59,050 ರೂ. 
ಹೈದರಾಬಾದ್ : 58,900ರೂ. 
ಕೇರಳ : 58,900ರೂ.  
ತಮಿಳುನಾಡು : 59,450  ರೂ.
ಮುಂಬಯಿ  : 58,900ರೂ.
ಕೋಲ್ಕತಾ  : 58,900ರೂ.


ಇದನ್ನೂ ಓದಿ : ಹೊಸ ವರ್ಷದಲ್ಲಿ ಹೊಸ ನಿಯಮದಡಿ ವೇತನ ! ಸರ್ಕಾರಿ ನೌಕರರ ವೇತನದಲ್ಲಿ ಆಗುವುದು ಭಾರೀ ಹೆಚ್ಚಳ !


ವಿದೇಶಿ ಮಾರುಕಟ್ಟೆಯಲ್ಲಿ ಚಿನ್ನ : 
ಹೊಸ ವರ್ಷದಲ್ಲಿ ಬಡ್ಡಿದರ ಕಡಿತದ  ಸೂಚನೆಗಳಿಂದ ಅಂತಾರಾಷ್ಟ್ರೀಯ ಸ್ಪಾಟ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ದಾಖಲಿಸುತ್ತಿದೆ. COMEX ನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ 2096 ಡಾಲರ್ ನಲ್ಲಿ ವಹಿವಾಟು ನಡೆಸುತ್ತಿದೆ. ಬೆಳ್ಳಿಯ ಬೆಲೆ ಕೂಡಾ ಪ್ರತಿ ಔನ್ಸ್ ಗೆ  24.70 ಡಾಲರ್ ನಂತೆ ವಹಿವಾಟು ನಡೆಸುತ್ತಿದೆ. 


ನಿಮ್ಮ ನಗರದಲ್ಲಿನ ದರಗಳನ್ನು ಪರಿಶೀಲಿಸಿ :
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. 


ಇದನ್ನೂ ಓದಿ : ಭಾರತದಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ: ಡಿಸೆಂಬರ್‌ 28ರ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಪರಿಶೀಲಿಸಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.