Gold price today : ಮದುವೆಯ ಸೀಸನ್ ಪ್ರಾರಂಭವಾಗಲಿದ್ದು, ಈ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಬಗ್ಗೆ ಒಳ್ಳೆಯ ಸುದ್ದಿ ಕೇಳಿ ಬರುತ್ತಿದೆ (Gold Price today). ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಮದುವೆಗೆ ಆಭರಣಗಳನ್ನು ಖರೀದಿಸಲು ಯೋಜಿಸುವ ಜನರಿಗೆ ಈ ಸಮಯವು ಪ್ರಯೋಜನಕಾರಿಯಾಗಿದೆ.  ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತದಿಂದಾಗಿ, ಗುರುವಾರ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ (Gold and Silver price). 


COMMERCIAL BREAK
SCROLL TO CONTINUE READING

51 ಸಾವಿರ ರೂಪಾಯಿಗಿಂತ ಕಡಿಮೆಯಾಯಿತು ಚಿನ್ನದ ಬೆಲೆ :  
ಮಲ್ಟಿಕಮೊಡಿಟಿ ಎಕ್ಸ್‌ಚೇಂಜ್ (MCX) ಪ್ರಕಾರ, 24 ಕ್ಯಾರೆಟ್ ನ ವಾಯಿದಾ ಬೆಲೆಯು  47 ರೂ.ಯಷ್ಟು ಕಡಿಮೆಯಾಗಿದೆ (Gold future trading). ಈ ಹಿನ್ನೆಲೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 50,906 ರೂ.ಗೆ ಇಳಿದಿದೆ. ಈ ರೀತಿಯಾಗಿ, ಚಿನ್ನವು ತನ್ನ ದಾಖಲೆಯ ಮಟ್ಟಕ್ಕಿಂತ 10 ಗ್ರಾಂಗೆ ಸುಮಾರು 4,700 ರೂ.ಯಷ್ಟು ಇಳಿಕೆಯಾಗಿದೆ. 


ಇದನ್ನೂ ಓದಿ : ಟೋಲ್ ತೆರಿಗೆಯಲ್ಲಿ 10-15% ಹೆಚ್ಚಳ ; ಇಂದು ರಾತ್ರಿಯಿಂದ ಹೆದ್ದಾರಿ ಚಾಲನೆ ದುಬಾರಿ


ಬೆಳ್ಳಿಯ ಬೆಲೆಯಲ್ಲಿಯೂ  ಇಳಿಕೆ :  
ಮತ್ತೊಂದೆಡೆ, ಬೆಳ್ಳಿಯ ಬೆಲೆಗಳ ಬಗ್ಗೆ ಹೇಳುವುದಾದರೆ,  ಎಂಸಿಎಕ್ಸ್‌ನಲ್ಲಿ ಬೆಳ್ಳಿ ಬೆಲೆಯಲ್ಲಿ ದೊಡ್ಡ ಮಟ್ಟದ ಕುಸಿತ ಕಂಡುಬಂದಿದೆ (Silver rate).  ಪತ್ರಿ ಕೆ.ಜಿ ಬೆಳ್ಳಿಯ ಬೆಲೆ 537 ರೂಪಾಯಿ ಇಳಿಕೆಯಾಗಿ 66,869 ರೂಪಾಯಿಗಳಿಗೆ ತಲುಪಿದೆ. 


ಇನ್ನೂ ಕಡಿಮೆಯಾಗಬಹುದು ಚಿನ್ನದ ಬೆಲೆ : 
ಬೆಲೆ ಕುಸಿತದ ನಡುವೆ, ರಷ್ಯಾ ಮತ್ತು ಉಕ್ರೇನ್ ನಡುವಿನ ನಡೆಯುತ್ತಿರುವ ಯುದ್ಧದ ನಂತರ ಚಿನ್ನದ ಬೆಲೆಗಳು ಮತ್ತಷ್ಟು ಕಡಿಮೆಯಾಗಬಹುದು ಎಂದು ತಜ್ಞರು ಹೇಳುತ್ತಾರೆ (Russia Ukraine war). ಈ ಹಿಂದೆ ಕರೋನಾ ಸಾಂಕ್ರಾಮಿಕ (Coronavirus) ಸಮಯದಲ್ಲಿ, ಚಿನ್ನದ ಬೆಲೆ ತನ್ನ ದಾಖಲೆಯ ಮಟ್ಟವನ್ನು ತಲುಪಿತ್ತು. 


ಇದನ್ನೂ ಓದಿ :  Harley-Davidson 338R: ರಾಯಲ್ ಎನ್‌ಫೀಲ್ಡ್‌ಗೆ ಟಕ್ಕರ್ ನೀಡಲಿದೆ Harley-Davidson's ಅಗ್ಗದ ಬೈಕ್!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.