ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಕೆಲವೇ ದಿನಗಳಲ್ಲಿ 3,000 ರೂ.ಗಳಷ್ಟು ಅಗ್ಗವಾಗುವುದು ಚಿನ್ನ
Gold Price Today : ಕೆಲವೇ ದಿನಗಳಲ್ಲಿ ಚಿನ್ನದ ದರ 10 ಗ್ರಾಂಗೆ ಸುಮಾರು 3,000 ರೂ. ಗಳಷ್ಟು ಅಗ್ಗವಾಗಲಿದೆ. ಕಳೆದ ದಿನಗಳಲ್ಲಿ ದಾಖಲೆಯ ಮಟ್ಟ ತಲುಪಿದ್ದ ಚಿನ್ನ, ಬೆಳ್ಳಿ ದರಗಳು ಇದೀಗ ಕುಸಿಯುತ್ತಿವೆ.
ಬೆಂಗಳೂರು : ಇದು ಮದುವೆಯ ಸೀಸನ್ ಆಗಿರುವುದರಿಂದ ಚಿನ್ನದ ಮಾರಾಟದಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಚಿನ್ನದ ಬೆಲೆಯಲ್ಲಿಯೂ ಕುಸಿತ ಕಂಡು ಬರುತ್ತಿದೆ. ಈ ಕುಸಿತದ ಟ್ರೆಂಡ್ ಮುಂದುವರಿದರೆ ಕೆಲವೇ ದಿನಗಳಲ್ಲಿ ಚಿನ್ನದ ದರ 10 ಗ್ರಾಂಗೆ ಸುಮಾರು 3,000 ರೂ. ಗಳಷ್ಟು ಅಗ್ಗವಾಗಲಿದೆ. ಕಳೆದ ದಿನಗಳಲ್ಲಿ ದಾಖಲೆಯ ಮಟ್ಟ ತಲುಪಿದ್ದ ಚಿನ್ನ, ಬೆಳ್ಳಿ ದರಗಳು ಇದೀಗ ಕುಸಿಯುತ್ತಿವೆ.
ಎರಡು ವಾರಗಳ ಹಿಂದೆ ಚಿನ್ನದ ಬೆಲೆ 58,000 ರೂ ಗಡಿ ದಾಟಿದ್ದು, ಬೆಳ್ಳಿ ಕೆಜಿಗೆ 71000 ರೂ ತಲುಪಿತ್ತು. ಇದು ಚಿನ್ನ ಮತ್ತು ಬೆಳ್ಳಿಯ ದಾಖಲೆಯ ಮಟ್ಟವಾಗಿತ್ತು. ಆದರೆ ಅಂದಿನಿಂದ ಎರಡೂ ಅಮೂಲ್ಯ ಲೋಹಗಳ ದರದಲ್ಲಿ ಕುಸಿತ ಕಾಣುತ್ತಿದೆ. ದಾಖಲೆ ಮಟ್ಟದಿಂದ ಚಿನ್ನ ಸುಮಾರು 3000 ರೂ. ಹಾಗೂ ಬೆಳ್ಳಿ 5000 ರೂಪಾಯಿಗೂ ಹೆಚ್ಚು ಇಳಿಕೆಯಾಗಿದೆ.
ಇದನ್ನೂ ಓದಿ : ಪಿಎಂ ಕಿಸಾನ್ 13 ನೇ ಕಂತಿನ ಬಗ್ಗೆ ಬಿಗ್ ಅಪ್ಡೇಟ್ ! ರೈತರಿಗೆ ಸಿಗುವುದು ಸಿಹಿ ಸುದ್ದಿ
ಎಂಸಿಎಕ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ವಹಿವಾಟು :
ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ದೊಡ್ಡ ಮಟ್ಟದ ಇಳಿಕೆ ಕಂಡುಬಂದಿದೆ. ಸುಮಾರು ಎರಡೂವರೆ ವಾರಗಳ ಹಿಂದೆ 58,000 ದ ಸಮೀಪ ತಲುಪಿದ್ದ ಚಿನ್ನ 55,500ರ ಆಸುಪಾಸಿನಲ್ಲಿ ಸಾಗುತ್ತಿದೆ. ಶುಕ್ರವಾರ, ಮಧ್ಯಾಹ್ನ ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ 163 ರೂ ಏರಿಕೆಯೊಂದಿಗೆ 55750 ರಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಮತ್ತೊಂದೆಡೆ ಬೆಳ್ಳಿ 115 ರೂಪಾಯಿ ಇಳಿಕೆಯಾಗಿ 64236 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ.
ಈ ಸಮಯದಲ್ಲಿ, ಚಿನ್ನದ ಬೆಲೆಯು ಆಗಸ್ಟ್ 2020 ರ ಮಟ್ಟಕ್ಕಿಂತ ಕಡಿಮೆಯಾಗಿದೆ. ಎರಡೂವರೆ ವರ್ಷಗಳ ಹಿಂದೆ ಚಿನ್ನ 56,200 ರೂ.ಗಳಷ್ಟು ಏರಿಕೆ ಕಂಡು ದಾಖಲೆ ಮಾಡಿತ್ತು. ಅಂದರೆ, ಈ ಸಮಯದಲ್ಲಿ ಚಿನ್ನದ ಬೆಲೆ ಎರಡೂವರೆ ವರ್ಷದ ಹಿಂದಿನ ದರಕ್ಕಿಂತ ಅಗ್ಗವಾಗುತ್ತಿದೆ.
ಇದನ್ನೂ ಓದಿ : Business Idea: ಈ ವ್ಯವಹಾರ ಪ್ರಾರಂಭಿಸಿದ್ರೆ ಪ್ರತಿ ತಿಂಗಳು ಲಕ್ಷ ಲಕ್ಷ ಗಳಿಸಬಹುದು!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.