ನವದೆಹಲಿ : ಇಂದು ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರಿಕೆಯಾಗಿವೆ ಆದರೆ ಜಾಗತಿಕ ದರಗಳು ಸಮತೋಲಿತವಾಗಿರುವುದರಿಂದ ಲಾಭ ಸ್ಥಿರವಾಗಿವೆ. MCX ನಲ್ಲಿ, ಚಿನ್ನ ಪ್ರತಿ 10 ಗ್ರಾಂಗೆ 0.2% ನಷ್ಟು ಹೆಚ್ಚಾಗಿದ್ದು ₹ 47,374 ರೂ. ನಷ್ಟಿದ್ದರೆ, ಬೆಳ್ಳಿಯ ದರ ಪ್ರತಿ ಕೆಜಿಗೆ 0.37% ರಿಂದ ₹ 63,462 ರೂ. ಗೆ ತಲುಪಿದೆ.


COMMERCIAL BREAK
SCROLL TO CONTINUE READING

ಚಿನ್ನದ ಬೆಲೆ(Gold Rate)ಯಲ್ಲಿ ಚೇತರಿಕೆ ಕಾಣುತ್ತಿದೆ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಬುಧವಾರ 190 ರೂ. ನಷ್ಟು ಏರಿಕೆಯಾಗಿ 46,350 ರೂ. ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಪ್ರತಿ 10 ಗ್ರಾಂ ಚಿನ್ನ 46,160 ರೂ. ಇತ್ತು.


ಇದನ್ನೂ ಓದಿ :Petrol, Diesel Price Today : ವಾಹನ ಸವಾರರಿಗೆ ಸಿಹಿ ಸುದ್ದಿ : 20 ಪೈಸೆ ಇಳಿಕೆಯಾದ ಡೀಸೆಲ್, ಪೆಟ್ರೋಲ್ ಬೆಲೆ ಸ್ಥಿರ


ಬೆಳ್ಳಿ(silver price) ಪ್ರತಿ ಕೆಜಿಗೆ 63,600 ರೂ.ಗೆ ಮಾರಾಟವಾಗುತ್ತಿದೆ, ಆದ್ರೆ ಇದರ ಬೆಲೆ 900 ರೂ. ಹೆಚ್ಚಾಗಿದೆ.


ಅಬಕಾರಿ ಸುಂಕ, ರಾಜ್ಯ ತೆರಿಗೆಗಳು(State Taxs) ಮತ್ತು ಮೇಕಿಂಗ್ ಶುಲ್ಕಗಳಿಂದಾಗಿ ಚಿನ್ನದ ಆಭರಣವು ಭಾರತದಾದ್ಯಂತ ಬೆಲೆಯಲ್ಲಿ ಬದಲಾಗುತ್ತದೆ.


ನವದೆಹಲಿ ಮತ್ತು ಮುಂಬೈ(Mumbai)ನಲ್ಲಿ, ಪ್ರತಿ 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 46,350 ಮತ್ತು 46,430 ರೂ. ಇದ್ದು. ಚೆನ್ನೈನಲ್ಲಿ ಚಿನ್ನದ ಬೆಲೆ 44,580 ರೂ.ಗೆ ಮಾರಾಟವಾಗುತ್ತಿದೆ.


ಇದನ್ನೂ ಓದಿ : WhatsApp Payments: ಭಾರತೀಯ ಬಳಕೆದಾರರಿಗೆ ತಂದಿದೆ ಹೊಸ ಪಾವತಿ ಹಿನ್ನೆಲೆ ವೈಶಿಷ್ಟ್ಯ, ವಿಶೇಷತೆ ತಿಳಿಯಿರಿ


24 ಕ್ಯಾರೆಟ್ ಚಿನ್ನದ ದರ(24 Carat Gold Rate) 450 ರೂ. ನಿಂದ 10 ಗ್ರಾಂಗೆ 47,430 ರೂ.ಗೆ ಏರಿಕೆಯಾಗಿದೆ.


ನವದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ (24 ಕ್ಯಾರೆಟ್) ಗೆ 50,560 ರೂ. ನಷ್ಟಿದ್ದರೆ ಮುಂಬೈನಲ್ಲಿ ಇದು 47,430 ರೂ. ಆಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ