Gold Price Today 19 January 2023 : ಚಿನ್ನದ ಬೆಲೆ ಇಂದು 19 ಜನವರಿ 2023: ನೀವು ಸಹ ಚಿನ್ನವನ್ನು ಖರೀದಿಸಲು ಯೋಚಿಸುತ್ತಿದ್ದರೆ, ಇದು ನಿಮಗೆ ಭರ್ಜರಿ ಸುದ್ದಿಯಾಗಿದೆ. ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದ್ದ, ಚಿನ್ನ ಇಂದು ಅದರ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ದೇಶಿಯ ಮಾರುಕಟ್ಟೆ ಜತೆಗೆ ಜಾಗತಿಕ ಮಾರುಕಟ್ಟೆಯಲ್ಲೂ ಕುಸಿತ ಕಂಡು ಬಂದಿದೆ. ಇಂದು ಚಿನ್ನದ ಬೆಲೆ 56,500 ರೂ.ಗಿಂತ ಕಡಿಮೆಯಾಗಿದೆ ಎಂದು HDFC ಸೆಕ್ಯುರಿಟೀಸ್ ತಿಳಿಸಿದೆ.


COMMERCIAL BREAK
SCROLL TO CONTINUE READING

ಇಂದು ಚಿನ್ನ - ಬೆಳ್ಳಿ ಬೆಲೆ ಎಷ್ಟು ಕಡಿಮೆಯಾಗಿದೆ?


ಗುರುವಾರದಂದು ರಾಷ್ಟ್ರ ರಾಜಧಾನಿ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ 52 ರೂಪಾಯಿ ಇಳಿಕೆಯಾಗಿ 56,475 ರೂಪಾಯಿಗಳಿಗೆ ತಲುಪಿದೆ. ಮತ್ತೊಂದೆಡೆ, ಕಳೆದ ವಹಿವಾಟಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 56,527 ರೂ. ಇದಲ್ಲದೇ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ ಕಾಣುತ್ತಿದೆ. ಇಂದು ಬೆಳ್ಳಿ 850 ರೂ.ಗಳಷ್ಟು ಅಗ್ಗವಾಗಿದ್ದು, ನಂತರ ಒಂದು ಕೆಜಿ ಬೆಳ್ಳಿಯ ಬೆಲೆ 68,500 ರೂ. ಇದೆ.


ಇದನ್ನೂ ಓದಿ : Income Tax : ಆದಾಯ ತೆರಿಗೆ ಉಳಿಸಲು ಇಲ್ಲಿದೆ ಸೂಪರ್‌ಹಿಟ್ ಮಾರ್ಗಗಳು!


ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಅಗ್ಗ


ಜಾಗತಿಕ ಮಾರುಕಟ್ಟೆಯ ಬಗ್ಗೆ ಹೇಳುವುದಾದರೆ, ಚಿನ್ನದ ಬೆಲೆಯಲ್ಲಿಯೂ ಇಳಿಕೆಯಾಗಿದೆ. ಚಿನ್ನವು ಪ್ರತಿ ಔನ್ಸ್‌ಗೆ $ 1,901 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಅದೇ ಸಮಯದಲ್ಲಿ, ಬೆಳ್ಳಿ ಲಾಭದೊಂದಿಗೆ ಔನ್ಸ್ಗೆ $ 24.23 ಆಗಿತ್ತು.


ನಿಮ್ಮ ನಗರದಲ್ಲಿ ದರಗಳನ್ನು ಪರಿಶೀಲಿಸಿ


ನೀವು ಮನೆಯಲ್ಲಿ ಕುಳಿತು ಇತ್ತೀಚಿನ ಚಿನ್ನದ ದರವನ್ನು ಪರಿಶೀಲಿಸಲು ಬಯಸಿದರೆ, ಇದಕ್ಕಾಗಿ ನೀವು 8955664433 ಗೆ ಮಿಸ್ಡ್ ಕಾಲ್ ನೀಡಬೇಕು. ಇದಾದ ನಂತರ ನಿಮ್ಮ ಮೊಬೈಲ್‌ಗೆ ಸಂದೇಶ ಬರುತ್ತದೆ. ಇದರೊಂದಿಗೆ, ಹೆಚ್ಚಿನ ಮಾಹಿತಿಗಾಗಿ, ನೀವು www.ibja.co ಅಥವಾ ibjarates.com ನಲ್ಲಿ ವಿವರಗಳನ್ನು ಪರಿಶೀಲಿಸಬಹುದು.


ಇದನ್ನೂ ಓದಿ : Old Pension : ಹಳೆಯ ಪಿಂಚಣಿ ಕುರಿತು ಮಹತ್ವದ ಮಾಹಿತಿ ಬಹಿರಂಗಪಡಿಸಿದ ರಘುರಾಮ್ ರಾಜನ್!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.