ನವದೆಹಲಿ: ದೇಶದಲ್ಲಿ ಚಿನ್ನದ ಬೆಲೆ(Gold Rate)ಯಲ್ಲಿ ಶನಿವಾರವೂ ಇಳಿಕೆ ಪ್ರವೃತ್ತಿ ಮುಂದುವರಿದಿದೆ. ಹಳದಿ ಲೋಹವು ಪ್ರತಿ 10 ಗ್ರಾಂಗೆ 4,000 ರೂ. ನಷ್ಟು ಇಳಿಕೆ ಕಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ದರವು ಪ್ರತಿ 100 ಗ್ರಾಂಗೆ  4,53,900 ರೂ. ಆಸುಪಾಸಿನಲ್ಲಿದೆ ಎಂದು ತಿಳಿದುಬಂದಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಬೆಲೆಬಾಳುವ ಲೋಹವು 100 ಗ್ರಾಂಗೆ 4,57,800 ರೂ.ನಲ್ಲಿ ವಹಿವಾಟು ನಡೆಸಿತ್ತು. 


COMMERCIAL BREAK
SCROLL TO CONTINUE READING

ಬೆಳ್ಳಿಯ ಬೆಲೆಯಲ್ಲಿಯೂ ಶನಿವಾರ ಇಳಿಕೆಯಾಗಿದೆ. ಪ್ರತಿ ಕೆಜಿಗೆ ಬೆಳ್ಳಿ 61,600 ರೂ.ನಂತೆ ವಹಿವಾಟು ನಡೆಸುತ್ತಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಪ್ರತಿ ಕೆಜಿ ಬೆಳ್ಳಿ ದರ 62,800 ರೂ. ಇತ್ತು. ಹೀಗಾಗಿ ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ 1,200 ರೂ. ಇಳಿಕೆಯಾಗಿದೆ.   


ಇದನ್ನೂ ಓದಿ: ಈ ಮೂರು ರೀತಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಸಿಗಲಿದೆ ಭಾರೀ ಲಾಭ..! ನಿಮಗೆ ಸರಿ ಹೊಂದುವ ಆಯ್ಕೆ ಯಾವುದು ತಿಳಿಯಿರಿ


ನಗರ

22K Gold (Per 10gm) 24K Gold (Per 10gm)

ಬೆಂಗಳೂರು

43,390 ರೂ. 47,340 ರೂ.

ದೆಹಲಿ

45,550 ರೂ. 49,690 ರೂ.

ಮುಂಬೈ

45,390 ರೂ. 46,390 ರೂ.

ಚೆನ್ನೈ

Rs 43,710 ರೂ.  47,690 ರೂ.

ಕೋಲ್ಕತ್ತಾ

45,650 ರೂ.  48,350 ರೂ.

ಹೈದರಾಬಾದ್

43,400 ರೂ. 47,350 ರೂ.

ಅಹಮದಾಬಾದ್

44,680 ರೂ. 48,200 ರೂ.

ಲಕ್ನೋ

45,550 ರೂ. 49,690 ರೂ.

ಕೇರಳ

43,400 ರೂ. 47,350 ರೂ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಪ್ರತಿ ಔನ್ಸ್‌ ಗೆ 1,762 ಡಾಲರ್ ಮತ್ತು ಬೆಳ್ಳಿಯು ಪ್ರತಿ ಔನ್ಸ್‌ ಗೆ 22.95 ಡಾಲರ್‌ನಂತೆ ವ್ಯಾಪಾರ ಮಾಡುತ್ತಿದೆ. ‘ಅಮೆರಿಕದ ಬಲವಾದ ಚಿಲ್ಲರೆ ಮಾರಾಟ ದತ್ತಾಂಶಗಳ ನಂತರ 5 ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿದ ನಂತರ ಚಿನ್ನವು ನಷ್ಟವನ್ನು ಅನುಭವಿಸಿದೆ’ ಎಂದು HDFC  ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಹೇಳಿದ್ದಾರೆ.


ಇದನ್ನೂ ಓದಿ: SBI Festive Bonanza : SBI ಗ್ರಾಹಕರಿಗೆ ಸಿಹಿ ಸುದ್ದಿ : ಗೃಹ ಸಾಲದ ಬಡ್ಡಿ ದರವನ್ನ ಶೇ.6.70 ಕ್ಕೆ ಇಳಿಸಿದ ಬ್ಯಾಂಕ್


ಚಿನ್ನದ ಆಭರಣ ವಿಚಾರದಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ(Gold Jewellery Retailers) ಒಂದು ಒಳ್ಳೆಯ ಸುದ್ದಿ ಇದೆ. ವ್ಯಾಪಾರಿಗಳು 2021-22ರ ಅವಧಿಯಲ್ಲಿ ಆದಾಯದಲ್ಲಿ ಶೇ.12-14 ರಷ್ಟು ಬೆಳವಣಿಗೆಗೆ ಸಾಕ್ಷಿಯಾಗಿದೆ. ಸ್ಥಿರ ಚಿನ್ನದ ಬೆಲೆ ಮತ್ತು ಮದುವೆ ಹಾಗೂ ಹಬ್ಬದ ಆಭರಣಗಳ ಮೇಲೆ ವಿವೇಚನೆಯ ವೆಚ್ಚದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಪಿಟಿಐ ವರದಿ ಮಾಡಿದೆ.


ಮೇಲೆ ಉಲ್ಲೇಖಿಸಿರುವ ಚಿನ್ನದ ಬೆಲೆ ಸರಕು ಮತ್ತು ಸೇವಾ ತೆರಿಗೆ (GST) ಇಲ್ಲದಿದ್ದು ಮತ್ತು ಆಭರಣ ಅಂಗಡಿಗಳಲ್ಲಿನ ದರಕ್ಕೆ ಹೊಂದಿಕೆಯಾಗದೇ ಇರಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.