Gold Price Today - Good News:ವಾರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಇಳಿಕೆ
Gold Price Today - ಸೋಮವಾರ ಚಿನ್ನದ ಬೆಲೆಯಲ್ಲಿ (Gold Price Today) ಮತ್ತೆ ಇಳಿಕೆ ಕಂಡುಬಂದಿದೆ. ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ, ಚಿನ್ನದ ಗೋಲ್ಡ್ ಫ್ಯೂಚರ್ ಟ್ರೇಡ್ ಬೆಳಗ್ಗೆ 40 ರೂ.ಗಳ ಕುಸಿತದೊಂದಿಗೆ ವಹಿವಾಟು ನಡೆಸಿ 48,685.00 ರೂ. ತಲುಪಿದೆ.
Gold Price Today - ನವದೆಹಲಿ: ಸೋಮವಾರ ಚಿನ್ನದ ಬೆಲೆಯಲ್ಲಿ (Gold Price Today) ಮತ್ತೆ ಇಳಿಕೆ ಕಂಡುಬಂದಿದೆ. ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ, ಚಿನ್ನದ ಗೋಲ್ಡ್ ಫ್ಯೂಚರ್ ಟ್ರೇಡ್ ಬೆಳಗ್ಗೆ 40 ರೂ.ಗಳ ಕುಸಿತದೊಂದಿಗೆ ವಹಿವಾಟು ನಡೆಸಿ 48,685.00 ರೂ. ತಲುಪಿದೆ. ಇದೇ ವೇಳೆ ಇದಕ್ಕೆ ತದ್ವಿರುದ್ಧವಾಗಿ ಬೆಳ್ಳಿ ತನ್ನ ವಹಿವಾಟು ಎಂದಿನಂತೆ ಮುಂದುವರೆಸಿದೆ. ಮಾರ್ಚ್ ತಿಂಗಳ ಫ್ಯೂಚರ್ ಟ್ರೇಡ್ ನಲ್ಲಿ ಬೆಳ್ಳಿ 260 ರೂ.ಗಳ ಗತಿ ಪಡೆದು ಪ್ರತಿ ಕೆ.ಜಿಗೆ 65,024.00 ರೂ.ಗಳಂತೆ ತನ್ನ ವಹಿವಾಟು ಮುಂದುವರೆಸಿದೆ. ಹಾಗಾದರೆ ಬನ್ನಿ ದೇಶದ ರಾಜಧಾನಿಯಲ್ಲಿ ಹಾಗೂ ರಾಜ್ಯರಾಜಧಾನಿಯಲ್ಲಿ ಇಂದಿನ ಚಿನ್ನದ ದರ ಏನು ತಿಳಿದುಕೊಳ್ಳೋಣ.
ಜನವರಿ 18ರಂದು ದೆಹಲಿಯ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನ - 48130 ಪ್ರತಿ 10 ಗ್ರಾಂ.
24 ಕ್ಯಾರೆಟ್ ಚಿನ್ನ - 51,500 ಪ್ರತಿ 10 ಗ್ರಾಂ.
ಬೆಳ್ಳಿಯ ಬೆಲೆ 65,000 / ಕೆ.ಜಿ
ಜನವರಿ 18, 2021ರಂದು ಬೆಂಗಳೂರಿನ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನ - 45,500 ಪ್ರತಿ 10 ಗ್ರಾಂ.
24 ಕ್ಯಾರೆಟ್ ಚಿನ್ನ - 49,640 ಪ್ರತಿ 10 ಗಗ್ರಾಂ.
ಬೆಳ್ಳಿ ಬೆಲೆ 65,000 ರೂ./ಕೆ.ಜಿ
ಇದರರ್ಥ ರಾಷ್ಟ್ರರಾಜಧಾನಿ ಹಾಗೂ ರಾಜ್ಯ ರಾಜಧಾನಿಗಳಲ್ಲಿ ಇಂದು (January 18 Gold Silver Rates) ಬೆಳ್ಳಿ ಬೆಲೆ ನಿನ್ನೆಯ ಬೆಲೆಗೆ ಹೋಲಿಸಿದರೆ ಏರಿಕೆಯಾಗಿದ್ದರೆ, ಚಿನ್ನದ ಬೆಲೆ (Gold Rate Today) ದೆಹಲಿಯಲ್ಲಿ 40 ರೂ. ಇಳಿಕೆಯಾಗಿದ್ದರೆ, ಬೆಂಗಳೂರಿನಲ್ಲಿ ರೂ.10 ಏರಿಕೆಯಾಗಿದೆ ಎಂದೇ ಹೇಳಬಹುದು.
ಅಂತರರಾಷ್ಟೀಯ ಮಾರುಕಟ್ಟೆಯಲ್ಲಿ ಪರಿಷ್ಟಿತಿ ಹೇಗಿದೆ
ಇದಲ್ಲದೆ, ಅಂತರರಾಷ್ಟ್ರೀಯ ಮಾರುಕಟ್ಟೆಯ ವಿಷಯಕ್ಕೆ ಬಂದಾಗ ಇಲ್ಲಿ ಚಿನ್ನದ ದರದಲ್ಲಿ ಏರಿಕೆಯಾಗಿದೆ. ಇಂದು ಯುಎಸ್ನಲ್ಲಿ, ಚಿನ್ನವು ಪ್ರತಿ ಔನ್ಸ್ ಗೆ $1.61 ರಷ್ಟು ಏರಿಕೆಯೊಂದಿಗೆ $1,828.99 ದರದಲ್ಲಿ ವಹಿವಾಟು ನಡೆಸುತ್ತಿದೆ. ಇದಲ್ಲದೆ,ಬೆಳ್ಳಿಯ ದರದ ಕುರಿತು ಹೇಳುವುದಾದರೆ, ಬೆಳ್ಳಿ ಬೆಲೆ ಪ್ರತಿ ಔನ್ಸ್ ಗೆ $0.11 ರಷ್ಟು ಏರಿಕೆ ದಾಖಲಿಸಿ, $24.86 ದರದಲ್ಲಿ ತನ್ನ ವಹಿವಾಟು ಮುಂದುವರೆಸಿದೆ.
ಇದನ್ನು ಓದಿ- ಅಗ್ಗದ ದರದಲ್ಲಿ ಚಿನ್ನ ಖರೀದಿಗೆ ವರ್ಷಾರಂಭದಲ್ಲಿಯೇ ಸರ್ಕಾರ ನೀಡುತ್ತಿದೆ ಈ ಅವಕಾಶ
2021ರಲ್ಲಿ ಚಿನ್ನ 60 ಸಾವಿರ ಗಡಿ ದಾಟುವ ಸಾಧ್ಯತೆ ಇದೆ
ಕಳೆದ ವರ್ಷದಂತೆ ಈ ವರ್ಷವೂ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ವರ್ಷ ಚಿನ್ನದ ಬೆಲೆ ಪ್ರತಿ 10 ಗ್ರಾ.ಗೆ 60,000 ರೂ.ಗೆ ತಲುಪುವ ಸಾಧ್ಯತೆಯನ್ನು ಮಾರುಕಟ್ಟೆಯ ತಜ್ಞರು ವರ್ತಿಸಿದ್ದಾರೆ. ಹೀಗಾಗಿ ರೂ.50000 ಪ್ರತಿ 10 ಗ್ರಾಂ. ಚಿನ್ನದಲ್ಲಿ ನಿಮ್ಮ ಹೂಡಿಕೆ ನಿಮಗೆ ಲಾಭವನ್ನೇ ನೀಡಲಿದೆ.
ಇದನ್ನು ಓದಿ- ಅಗ್ಗವಾಗಲಿದೆಯೇ ಚಿನ್ನ? 2021ರ ಆರಂಭಕ್ಕೆ ರೂ.42,000 ಕ್ಕೆ ಇಳಿಯಲಿದೆಯಂತೆ Gold Rate
ತಜ್ಞರ ಅಭಿಮತ ಏನು?
2020 ರಲ್ಲಿ ಕರೋನಾ ಬಿಕ್ಕಟ್ಟಿನಿಂದ ಉಂಟಾದ ಅನಿಶ್ಚಿತ ಆರ್ಥಿಕ ಪರಿಸ್ಥಿತಿಯ ಕಾರಣ ಜನರು ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡಿದ್ದಾರೆ. ಹೀಗಾಗಿ ಚಿನ್ನದ ಬೆಲೆ ಕಳೆದವರ್ಷ ದಾಖಲೆಯ ಮಟ್ಟಕ್ಕೆ ತಲುಪಿತ್ತು ಎಂದು ತಜ್ಞರು ಹೇಳುತ್ತಾರೆ. ಆದಾಗ್ಯೂ, ಕರೋನಾ ಲಸಿಕೆಯ ಆಗಮನದೊಂದಿಗೆ, ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಚಿನ್ನದ ಬೆಲೆ ಇಳಿಕೆಯಾಗುವ ಸಾಧ್ಯತೆಯನ್ನೂ ಕೂಡ ಕೆಲವರು ವರ್ತಿಸುತ್ತಿದ್ದಾರೆ.
ಇದನ್ನು ಓದಿ- Gold Rate Today:ಐದು ತಿಂಗಳಲ್ಲಿ ಇದೆ ಮೊದಲ ಬಾರಿಗೆ ರೂ.4000 ರಷ್ಟು ಇಳಿಕೆಯಾದ ಚಿನ್ನದ ಬೆಲೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.