Gold Rate: ಆಭರಣ ಪ್ರಿಯರಿಗೆ ಬಿಗ್ಶಾಕ್.. ವಾರಾಂತ್ಯದಲ್ಲಿ ಮೂರು ಪಟ್ಟು ಹೆಚ್ಚಾದ ಚಿನ್ನದ ದರ.. ಬೆಳ್ಳಿ ಹೇಗಿದೆ?
Gold Price Today: ವಾರಾಂತ್ಯದಲ್ಲಿ ಚಿನ್ನದ ದರ ಕಡಿಮೆಯಾಗಬಹುದು ಎಂದು ನಿರೀಕ್ಷಿಸಿದವರೆಲ್ಲರಿಗೂ ನಿರಾಸೆಯುಂಟಾಗಿದೆ.. ನಿನ್ನೆಗಿಂತ ಮೂರು ಪಟ್ಟು ಹೆಚ್ಚಾದ ಬಂಗಾದ ಬೆಲೆ ಆಭರಣ ಪ್ರಿಯರಿಗೆ ಬಿಗ್ಶಾಕ್ ನೀಡಿದೆ.. ಹಾಗಾದ್ರೆ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಹೇಗಿದೆ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳಿ..
ಇಂದಿನ ಚಿನ್ನ-ಬೆಳ್ಳಿಯ ದರ: ವಾರಾಂತ್ಯದಲ್ಲಿ ಆಭರಣ ಮಳಿಗೆ ಭೇಟಿ ನೀಡುವ ಯೋಚನೆಯಲ್ಲಿದ್ದವರಿಗೆ ದೊಡ್ಡ ನಿರಾಸೆಯುಂಟಾಗಿದೆ.. 2024ರಲ್ಲಿ ಚಿನ್ನದ ದರ 74 ಸಾವಿರದ ಗಡಿ ದಾಟುವ ಸಾಧ್ಯತೆಗಳಿವೆ ಎನ್ನಲಾಗಿತ್ತು.. ಅದರಂತೆ ಸದ್ಯ 24 ಕ್ಯಾರೆಟ್ ಚಿನ್ನ ಈ ಗಡಿಯನ್ನು ದಾಟಿದೆ.. 22 ಕ್ಯಾರೆಟ್ 70 ಸಾವಿರದ ಅಂಚಿನಲ್ಲಿದೆ. ಎಂದರೇ ಚಿನ್ನದ ಬೆಲೆ ಇಂದು ಮೂರು ಪಟ್ಟು ಹೆಚ್ಚಾಗಿದೆ.. ಕಳೆದ ಕೆಲವು ದಿನಗಳಿಂದ ಏರಿಕೆ ಕಂಡಿದ್ದ ಬೆಳ್ಳಿ ಬೆಲೆ ಸದ್ಯ ಇಳಿಕೆ ಕಂಡಿದೆ..
22 ಕ್ಯಾರೆಟ್ ಚಿನ್ನದ ದರ:
ನಿನ್ನೆ 1 ಗ್ರಾಂ ಚಿನ್ನಕ್ಕೆ 6,620 ರೂ. ಇತ್ತು ಆದರೆ ಇಂದು 6,720 ರೂ. ಆಗಿದೆ.. ನಿನ್ನೆಯ ದರಕ್ಕೆ ಹೋಲಿಸಿದರೆ 100 ರೂ ಏರಿಕೆಯಾಗಿದೆ. ನೀವು 10 ಗ್ರಾಂ ಚಿನ್ನ ಖರೀದಿಸುವುದಾದರೇ 67,200 ನೀಡಬೇಕು.. ಅದೇ ರೀತಿ 100 ಗ್ರಾಂ ಚಿನ್ನಕ್ಕೆ 6,72,000 ರೂ. ನಿಗದಿಯಾಗಿದೆ.. ಎಂದರೇ ನಿನ್ನೆಗಿಂತ 10000 ರೂ. ಏರಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ದರ:
ನಿನ್ನೆ 1 ಗ್ರಾಂ ಚಿನ್ನಕ್ಕೆ 7,222 ರೂ. ಇತ್ತು.. ಆದರೆ ಇಂದು 7,331 ರೂ. ಆಗಿದೆ.. ನಿನ್ನೆಯ ದರಕ್ಕೆ ಹೋಲಿಸಿದರೆ 109 ರೂ ಹೆಚ್ಚಾಗಿದೆ. ನೀವು 10 ಗ್ರಾಂ ಚಿನ್ನ ಖರೀದಿಸುವುದಾದರೇ 58,648 ರೂ. ನೀಡಬೇಕು. ಅದೇ ರೀತಿ 100 ಗ್ರಾಂ ಚಿನ್ನಕ್ಕೆ 7,33,100 ರೂ. ನಿಗದಿಯಾಗಿದೆ.. ಎಂದರೇ ನಿನ್ನೆಗಿಂತ 10,900 ರೂ ಏರಿಕೆಯಾಗಿದೆ.
ಇದನ್ನೂ ಓದಿ-ವೃದ್ದಾಪ್ಯ ಜೀವನವನ್ನು ನೆಮ್ಮದಿಯಿಂದ ಕಳೆಯುವಂತೆ ಮಾಡುತ್ತವೆ ಸರ್ಕಾರದ ಈ ಯೋಜನೆಗಳು !
ಕರ್ನಾಟಕದಲ್ಲಿ ಚಿನ್ನದ ದರ:
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಇಂದು ಬಂಗಾರದ ಬೆಲೆ 22 ಕ್ಯಾರೆಟ್ಗೆ 67,200 ರೂ. ಹಾಗೂ 24 ಕ್ಯಾರೆಟ್ ಚಿನ್ನಕ್ಕೆ 73,310 ರೂ. ನಿಗದಿಯಾಗಿದೆ.. ಬಳ್ಳಾರಿ, ದಾವಣಗೆರೆ, ಮೈಸೂರು, ಮಂಗಳೂರು, ಸೇರಿದಂತೆ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದ್ದು ಮಜೂರಿ ಹಾಗೂ ಇತರೆ ಶುಲ್ಕಗಳಲ್ಲಿ ವ್ಯತ್ಯಾಸ ಕಂಡು ಬರಬಹುದು..
ಹೊರ ರಾಜ್ಯಗಳಲ್ಲಿ ಚಿನ್ನದ ಬೆಲೆ ಹೇಗಿದೆ?
ಚೆನ್ನೈ: 22 ಕ್ಯಾರೆಟ್ 68,050-24 ಕ್ಯಾರೆಟ್ಗೆ 74,240
ಮುಂಬೈ: 22 ಕ್ಯಾರೆಟ್ 67,200-24 ಕ್ಯಾರೆಟ್ಗೆ 73,310
ದೆಹಲಿ: 22 ಕ್ಯಾರೆಟ್ 67,350-24 ಕ್ಯಾರೆಟ್ಗೆ 73,460
ಕೊಲ್ಕತ್ತಾ: 22 ಕ್ಯಾರೆಟ್ 67,200-24 ಕ್ಯಾರೆಟ್ಗೆ 73,310
ಹೈದರಾಬಾದ್: 22 ಕ್ಯಾರೆಟ್ 67,200-24 ಕ್ಯಾರೆಟ್ಗೆ 73,310
ಕೇರಳ: 22 ಕ್ಯಾರೆಟ್ 67,200-24 ಕ್ಯಾರೆಟ್ಗೆ 73,310
ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)
ಬೆಳ್ಳಿ ಬೆಲೆ ಹೀಗಿದೆ:
ಸತತ ಏರಿಕೆ ಕಂಡಿದ್ದ ಬೆಳ್ಳಿ ಬೆಲೆ ಇಂದು ಕೊಂಚ ಇಳಿಕೆಯಾಗಿದೆ.. ಒಂದು ಗ್ರಾಂ ಬೆಳ್ಳಿಯನ್ನು ಕೊಳ್ಳಲು ಬಯಸಿದರೆ 84.25 ರೂ. ಇದೆ.. ಅದೇ ರೀತಿ 8 ಗ್ರಾಂಗೆ 674 ರೂ 10 ಗ್ರಾಂಗೆ 842.50 ರೂ. 100 ಗ್ರಾಂಗೆ 8,425 ರೂ ಇದ್ದು 1 ಕಿಲೋಗೆ 84,250 ದರ ನಿಗದಿಯಾಗಿದೆ.
ಇದನ್ನೂ ಓದಿ-Arecanut Price in Karnataka: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.