Today Gold Price: ನೀವು ಚಿನ್ನ ಖರೀದಿಸುವ ಯೋಜನೆ ರೂಪಿಸಿದ್ದರೆ, ಇಂದೇ ಕೊಂಡುಕೊಳ್ಳಿ. ಏಕೆಂದರೆ ಮತ್ತೊಮ್ಮೆ ಚಿನ್ನದ ಬೆಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕುಸಿತ ಕಂಡುಬರುವುದು ಸಾಧ್ಯವಿಲ್ಲ. ಚಿನ್ನ ಮಾತ್ರವಲ್ಲದೆ ಬೆಳ್ಳಿ ಬೆಲೆಯೂ ಕುಸಿದಿದೆ.


COMMERCIAL BREAK
SCROLL TO CONTINUE READING

ಇಂದಿನಿಂದ ಹೊಸ ವ್ಯವಹಾರದ ವಾರ ಪ್ರಾರಂಭವಾಗುತ್ತದೆ. ವ್ಯಾಪಾರದ ವಾರದ ಆರಂಭದಲ್ಲಿ, ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೆ ಇಳಿಯುತ್ತವೆಯೇ ಅಥವಾ ಏರಿಕೆಯಾಗುತ್ತವೆಯೇ ಎಂಬುದರ ಮೇಲೆ ಎಲ್ಲರ ಕಣ್ಣುಗಳು ಇರುತ್ತವೆ. ಈ ಮಧ್ಯೆ ಇಂದಿನ ಇತ್ತೀಚಿನ ದರಗಳನ್ನು ತಿಳಿಯಿರಿ.


ಇದನ್ನೂ ಓದಿ: Budh Asta 2023: ಈ 3 ರಾಶಿಯವರ ಕೀರ್ತಿ, ಗೌರವ ಹೆಚ್ಚಿಸಲಿದ್ದಾನೆ ಬುಧ; ಅಪಾರ ಧನಪ್ರಾಪ್ತಿ ಖಚಿತ!


ಇಂದು ಹೊಸ ವ್ಯಾಪಾರ ವಾರ ಪ್ರಾರಂಭವಾಗುತ್ತದೆ. ವಾರದ ಮೊದಲ ದಿನವಾಗಿದ್ದು, ಹಿಂದಿನ ವ್ಯಾಪಾರ ವಾರದ ಆರಂಭದಲ್ಲಿ, ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ತೀವ್ರವಾಗಿ ಏರಿದ್ದವು. ಹಾಗಾಗಿ ಇಂದು ಅಂದರೆ ವ್ಯಾಪಾರ ವಾರದ ಮೊದಲ ದಿನದಂದು, ಭಾರತೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಹೇಗಿರುತ್ತವೆ  ಎಂಬುದರ ಮೇಲೆ ಎಲ್ಲರ ಗಮನವಿರುತ್ತದೆ,


ಇಂಡಿಯನ್ ಬುಲಿಯನ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಕೇಂದ್ರ ಸರ್ಕಾರ ಘೋಷಿಸಿದ ರಜಾದಿನಗಳನ್ನು ಹೊರತುಪಡಿಸಿ ಶನಿವಾರ ಮತ್ತು ಭಾನುವಾರದಂದು ದರಗಳನ್ನು ನೀಡುವುದಿಲ್ಲ. ಶುಕ್ರವಾರ ಶುಭ ಶುಕ್ರವಾರವಾಗಿದ್ದರಿಂದ ಬುಲಿಯನ್ ಮಾರುಕಟ್ಟೆಯನ್ನು ಮುಚ್ಚಲಾಗಿತ್ತು. ಹೀಗಾಗಿ ಸತತ ಮೂರು ದಿನಗಳ ರಜೆಯ ಬಳಿಕ ಇಂದು ಹೊಸ ದರಗಳು ಪ್ರಕಟವಾಗಲಿದೆ.


ಇಂದಿನ ದರ ಹೀಗಿದೆ:


ಇಂದು ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ ಪ್ರತೀ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 50 ರೂ. ಇಳಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಈ ಮೂಲಕ 55,750 ರೂ, ತಲುಪಿದೆ. ಇನ್ನು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 30 ರೂ. ಇಳಿಕೆ ಕಂಡಿದೆ. ಈ ಮೂಲಕ 60,840 ರೂ. ಆಗಿದೆ.


ಶುಕ್ರವಾರದ ದರ ಇದಾಗಿತ್ತು


ವಾರದ ವಹಿವಾಟಿನ ಐದನೇ ಹಾಗೂ ಅಂತಿಮ ದಿನವಾದ ಶುಕ್ರವಾರ ಪ್ರತಿ 10 ಗ್ರಾಂ ಚಿನ್ನಕ್ಕೆ 425 ರೂಪಾಯಿ ಇಳಿಕೆಯಾಗಿ ಪ್ರತಿ ಕೆಜಿಗೆ 60191 ರೂಪಾಯಿಗೆ ತಲುಪಿದೆ. ಗುರುವಾರದ ಕೊನೆಯ ವಹಿವಾಟಿನ ದಿನದಂದು, ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 695 ರೂಪಾಯಿಗಳಷ್ಟು ಏರಿಕೆಯಾಗಿ 10 ಗ್ರಾಂಗೆ 60616 ರೂಪಾಯಿಗಳ ಮಟ್ಟದಲ್ಲಿ ಕೊನೆಗೊಂಡಿತು.


ಅಲ್ಲದೆ, ಈ ದಿನ ಬಂಗಾರದ ಜತೆಗೆ ಬೆಳ್ಳಿಯ ಬೆಲೆಯೂ ಭಾರಿ ಕುಸಿತ ದಾಖಲಿಸಿದೆ. ಬೆಳ್ಳಿ ಬೆಲೆ 646 ರೂಪಾಯಿ ಇಳಿಕೆಯಾಗಿ ಪ್ರತಿ ಕೆಜಿಗೆ 74773 ರೂಪಾಯಿಗೆ ತಲುಪಿದ್ದರೆ, ಗುರುವಾರ ಬೆಳ್ಳಿ ಬೆಲೆ 1644 ರೂಪಾಯಿ ಏರಿಕೆಯಾಗಿ 75419 ರೂಪಾಯಿಗೆ ತಲುಪಿತ್ತು.


ಇದನ್ನೂ ಓದಿ: Photos: ಕ್ರಿಕೆಟಿಗ ರವೀಂದ್ರ ಜಡೇಜಾ ಮನೆ ನೋಡಿದ್ದೀರಾ? ದೇಶದ ಶ್ರೀಮಂತರ ಮನೆಯೂ ಇಲ್ಲ ಇಷ್ಟೊಂದು ಸುಂದರ


24 ಕ್ಯಾರೆಟ್ ಚಿನ್ನದಲ್ಲಿ ರೂ.425 ರಷ್ಟು ಕುಸಿದು ರೂ.60191ಕ್ಕೆ, 23 ಕ್ಯಾರೆಟ್ ಚಿನ್ನ ರೂ.423 ರಷ್ಟು ಕುಸಿದು ರೂ.59950ಕ್ಕೆ, 22 ಕ್ಯಾರೆಟ್ ಚಿನ್ನ ರೂ.389ರಿಂದ ರೂ.55135ಕ್ಕೆ, 18 ಕ್ಯಾರೆಟ್ ಚಿನ್ನ ರೂ.319ರಷ್ಟು ಕುಸಿದು ರೂ.45143ಕ್ಕೆ ತಲುಪಿತ್ತು. ಅಲ್ಲದೆ, 14 ಕ್ಯಾರೆಟ್ ಚಿನ್ನವು 248 ಅಗ್ಗವಾಗಿ 10 ಗ್ರಾಂಗೆ 35,212 ರೂ.ತಲುಪಿತ್ತು. MCX ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ತೆರಿಗೆ ಮುಕ್ತವಾಗಿವೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ