ಬೆಂಗಳೂರು : ಕರೋನಾ (Coronavirus) ಕರಾಳ ಕಾಲದಲ್ಲಿ ಚಿನ್ನದ ಬೇಡಿಕೆ ಗಣನೀಯವಾಗಿ ಕುಸಿದಿದೆ. ಚಿನ್ನದ ಬೆಲೆ ಇದೀಗ ಗಣನೀಯವಾಗಿ ಕುಸಿದಿದೆ. ಆದರೆ, ದೈನಂದಿನ ಧಾರಣೆಯತ್ತ ನೋಡಿದಾಗ ಚಿನ್ನದ ಬೆಲೆಯಲ್ಲಿ (Gold price)  ಸ್ವಲ್ಪ ಏರಿಕೆ ದಾಖಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 44, 200 ಆಗಿದೆ.  ಅದೇ ರೀತಿ ಅಪರಂಜಿ ಚಿನ್ನದ ಬೆಲೆ ಹತ್ತು ಗ್ರಾಮಿಗೆ 48200 ರೂಪಾಯಿ ದಾಖಲಾಗಿದೆ. ಹಿಂದಿನ ದರಕ್ಕೆ ಹೋಲಿಸಿದರೆ ಇದರಲ್ಲಿ 200 ರೂಪಾಯಿ ಏರಿಕೆಯಾಗಿದೆ. 


COMMERCIAL BREAK
SCROLL TO CONTINUE READING

ಮಹಾನಗರದಲ್ಲಿ ಚಿನ್ನದ ರೇಟ್ ಎಷ್ಟು..?
ದೆಹಲಿಯಲ್ಲಿ (Delhi) ನೀವು 22 ಕ್ಯಾರೆಟಿನ 10 ಗ್ರಾಂ ಚಿನ್ನಕ್ಕೆ 45 780 ರೂಪಾಯಿ ನೀಡಬೇಕು. ಅದೇ ಚಿನ್ನ ಮುಂಬಯಿನಲ್ಲಿ (Mumbai) ಕೊಳ್ಳುವುದಾದರೆ 44, 570 ರೂಪಾಯಿ ಕೊಡಬೇಕು. ದೆಹಲಿಯಲ್ಲಿ ಅಪರಂಜಿ ಚಿನ್ನದ ಬೆಲೆ ಹತ್ತು ಗ್ರಾಮಿಗೆ 49,570 ರೂಪಾಯಿ. ಅದೇ ಚಿನ್ನ ಮುಂಬಯಿಯಲ್ಲಿ 48570 ರೂಪಾಯಿ. ಚೆನ್ನೈನಲ್ಲಿ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನಕ್ಕೆ 44520 ರೂಪಾಯಿ, ಅಪರಂಜಿ ಚಿನ್ನಕ್ಕೆ 48570 ರೂಪಾಯಿ. ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಮ್ ಚಿನ್ನಕ್ಕೆ 44,200 ರೂಪಾಯಿ. ಹತ್ತು ಗ್ರಾಂ ಶುದ್ದ ಚಿನ್ನಕ್ಕೆ 48,220 ರೂಪಾಯಿ. 


ಇದನ್ನೂ ಓದಿ : Online Banking Tips: ನೀವು ಆನ್‌ಲೈನ್ ಬ್ಯಾಂಕಿಂಗ್ ಬಳಸುತ್ತಿದ್ದರೆ ಈ ಕೆಲಸಗಳನ್ನು ಎಂದಿಗೂ ಮಾಡಬೇಡಿ


ಚಿನ್ನದ ಬೇಡಿಕೆ ಗಣನೀಯ ಕುಸಿತ :
ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ(Gold rate)  ಸರಿ ಸುಮಾರು ಹತ್ತು ಸಾವಿರ ರೂಪಾಯಿ ಕುಸಿತ ದಾಖಲಾಗಿದೆ. ಜೊತೆಗೆ ಕಳೆದ ಒಂದು ವರ್ಷದಲ್ಲಿ ಚಿನ್ನದ ಬೇಡಿಕೆ ಸಹ ಕುಸಿದಿದೆ. ಚಿನ್ನದ ಆಮದು ಕೂಡಾ ಗಣನೀಯವಾಗಿ ಬಿದ್ದಿದೆ. ಕರೋನಾ (Covid-19) ಕರಾಳ ದರ್ಶನದ ಕಾರಣದಿಂದ ಜನತೆ ಚಿನ್ನ ಖರೀದಿಗೆ ಮುಂದಾಗುತ್ತಿಲ್ಲ. ಹಾಗಾಗಿ ಬೇಡಿಕೆ ಕೂಡಾ  ಕುಸಿದಿದೆ. ಚಿನ್ನದ ವಾಯಿದಾ (MCX) ಮಾರುಕಟ್ಟೆಯಲ್ಲೂ ಕೂಡಾ ಬೇಡಿಕೆ ಕಡಿಮೆಯಾಗಿದೆ.


ಇದನ್ನೂ ಓದಿ : ICICI ಬ್ಯಾಂಕ್‌ಗೆ 3 ಕೋಟಿ ರೂ.ಗಳ ದಂಡ ವಿಧಿಸಿದ ಆರ್‌ಬಿಐ, ನಿಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.