Anant Radhika Wedding : ಇತ್ತೀಚಿನ ದಿನಗಳಲ್ಲಿ ಅಂಬಾನಿ ಕುಟುಂಬದಲ್ಲಿ ಅನಂತ್ ಅಂಬಾನಿ ಮದುವೆಯ ತಯಾರಿ ಜೋರಾಗಿ ನಡೆಯುತ್ತಿದೆ.ಅನಂತ್ ಮತ್ತು ರಾಧಿಕಾ ಮದುವೆಗೂ ಮೊದಲು ಅಂಬಾನಿ ಕುಟುಂಬವು ಮಂಗಳವಾರ ಪಾಲ್ಘರ್‌ನ 50 ಜೋಡಿಗಳ ವಿವಾಹವನ್ನು ನೆರವೇರಿಸಿತು.ಈ ಕಾರ್ಯಕ್ರಮ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್‌ನಲ್ಲಿ ನಡೆಯಿತು.ಈ ಸಮಾರಂಭದಲ್ಲಿ  ಸುಮಾರು 800 ಮಂದಿ ಭಾಗವಹಿಸಿದ್ದರು.ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಧು-ವರರ ಕುಟುಂಬಗಳಲ್ಲದೆ,ಸಾಮಾಜಿಕ ಕಾರ್ಯಕರ್ತರು ಮತ್ತು ಸಮುದಾಯದ ಸಂಘಟನೆಗಳು ಭಾಗವಹಿಸಿದ್ದವು.


COMMERCIAL BREAK
SCROLL TO CONTINUE READING

ಅಂಬಾನಿ ಕುಟುಂಬ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರಲ್ಲದೆ,ಪುತ್ರ ಆಕಾಶ್ ಅಂಬಾನಿ ಪತ್ನಿ ಶ್ಲೋಕಾ ಮೆಹ್ತಾ, ಪುತ್ರಿ ಇಶಾ ಅಂಬಾನಿ ಪತಿ ಆನಂದ್ ಪಿರಾಮಲ್ ಭಾಗವಹಿಸಿದ್ದರು.ವೈರಲ್ ಆಗುತ್ತಿರುವ ಕಾರ್ಯಕ್ರಮದ ವಿಡಿಯೋದಲ್ಲಿ ಇಶಾ ಕೂಡಾ ಪೂಜೆಯಲ್ಲಿ ಪಾಲ್ಗೊಂಡು ವಿವಾಹವಾಗುತ್ತಿರುವ ಜೋಡಿಗಳಿಗೆ ಶುಭ ಕೋರಿರುವುದನ್ನು ಕಾಣಬಹುದು.ಅಂಬಾನಿ ಕುಟುಂಬಕ್ಕೆ ಈ ಕ್ಷಣ ವಿಶೇಷವಾಗಿತ್ತು.ಈ ವೇಳೆ ನೀತಾ ಅಂಬಾನಿ ನವ ವಧುವರರನ್ನು ಆಶೀರ್ವದಿಸಿದರು.ಮದುವೆಯಾದ ಪ್ರತಿಯೊಬ್ಬ ದಂಪತಿಗಳಿಗೂ ಉಡುಗೊರೆಗಳನ್ನು ನೀಡಲಾಯಿತು.


ಇದನ್ನೂ ಓದಿ : ದಿವಾಳಿ ಎಂದು ಘೋಷಿಸಿಕೊಂಡಿರುವ ಅನಿಲ್ ಅಂಬಾನಿ ವಾಸವಿರುವುದು 17 ಅಂತಸ್ತಿನ ಅರಮನೆಯಲ್ಲಿ ! 5000 ಕೋಟಿ ವೆಚ್ಚದ ಈ ಐಶಾರಾಮಿ ಮನೆಯ ಫೋಟೋ ಇಲ್ಲಿವೆ


 ನವ ದಂಪತಿಗೆ ಉಡುಗೊರೆ : 
ವರದಿಯ ಪ್ರಕಾರ,ಎಲ್ಲಾ 50 ವಧು ಮತ್ತು ಅವರ ಕುಟುಂಬದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅವರ ವಿವಾಹದ ಸಂದರ್ಭದಲ್ಲಿ ವಿಶೇಷ ಉಡುಗೊರೆಗಳನ್ನು ನೀಡಲಾಯಿತು.ಮಂಗಳಸೂತ್ರ,ಉಂಗುರ,ಮೂಗುತಿ ಮುಂತಾದ ಆಭರಣಗಳಲ್ಲದೆ,ಬೆಳ್ಳಿಯ ಕಾಲುಂಗುರಗಳನ್ನು ನೀಡಲಾಯಿತು. ಇದಲ್ಲದೇ ವಧುವಿಗೆ 1.01 ಲಕ್ಷ ರೂ.ಗಳ ಚೆಕ್ ಅನ್ನು ‘ಸ್ತ್ರೀಧನ’ ರೂಪದಲ್ಲಿ ನೀಡಲಾಯಿತು. ಈ ಚೆಕ್ ಅನ್ನು ವಧುವಿನ ಹೆಸರಿನಲ್ಲಿ ನೀಡಲಾಗಿದೆ. ಇದಲ್ಲದೆ,ಮದುವೆಯಾದ ದಂಪತಿಗಳಿಗೆ ಪಡಿತರ ಮತ್ತು ಗೃಹೋಪಯೋಗಿ ವಸ್ತುಗಳು,ಇಡೀ ವರ್ಷಕ್ಕೆ ಅಗತ್ಯವಾದ ಗೃಹೋಪಯೋಗಿ ಉಪಕರಣಗಳು ಮತ್ತು ಹಾಸಿಗೆಗಳನ್ನು ನೀಡಲಾಯಿತು.


ಮದುವೆ ಸಮಾರಂಭ ಮುಗಿದ ನಂತರ ಅದ್ಧೂರಿ ಪಾರ್ಟಿಯನ್ನೂ ಏರ್ಪಡಿಸಲಾಗಿತ್ತು.ಈ ಸಮಯದಲ್ಲಿ,ವಾರ್ಲಿ ಬುಡಕಟ್ಟಿನ ಸಾಂಪ್ರದಾಯಿಕ ತಡ್ಪಾ ನೃತ್ಯವನ್ನು ಆಯೋಜಿಸಲಾಗಿತ್ತು.ಈ ಸಾಮೂಹಿಕ ವಿವಾಹ ಕಾರ್ಯಕ್ರಮದೊಂದಿಗೆ ಅನಂತ್ ಮತ್ತು ರಾಧಿಕಾ ಅವರ ‘ಶುಭ-ಲಗ್ನ’ ಕಾರ್ಯಕ್ರಮ ಆರಂಭವಾಗಿದೆ.


ಇದನ್ನೂ ಓದಿ : ಮೋದಿ 3.0: ನಿರ್ಮಲಾ ಸೀತಾರಾಮನ್ ಬಜೆಟ್ ನಿರೀಕ್ಷೆ ಏನು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.