EPFO Latest News- ದೇಶದ 73 ಪೆನ್ಶನ್ ಲಾಭಾರ್ಥಿಗಳಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಸರ್ಕಾರ ಸರ್ಕಾರ ಅವರ ಖಾತೆಗಳಿಗೆ ಹಣ ವರ್ಗಾಯಿಸಲು ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಜುಲೈ 29 ಮತ್ತು 30 ರಂದು ನಡೆಸಲಿರುವ ಸಭೆಯಲ್ಲಿ ಕೇಂದ್ರ ಪಿಂಚಣಿ ವಿತರಣೆ ವ್ಯವಸ್ಥೆಯನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಪಡಿಗಣಿಸಲಿದ್ದು, ನಂತರ ಅದಕ್ಕೆ ಅನುಮೋದನೆ ನೀಡಲಿದೆ ಎನ್ನಲಾಗಿದೆ. ಈ ವ್ಯವಸ್ಥೆಯ ಸ್ಥಾಪನೆಗೊಂಡ ಬಳಿಕ ದೇಶದ 73 ಲಕ್ಷ ಪಿಂಚಣಿದಾರರ ಖಾತೆಗಳಿಗೆ ಪೆನ್ಶನ್ ಅನ್ನು ಒಂದೇ ಬಾರಿಗೆ ಏಕಕಾಲಕ್ಕೆ ವರ್ಗಾವಣೆಯಾಗಲಿದೆ.


COMMERCIAL BREAK
SCROLL TO CONTINUE READING

ಪ್ರಸ್ತುತ ಇರುವ ನಿಯಮ ಏನು?
 ಪ್ರಸ್ತುತ ಇಪಿಎಫ್ಓ ತನ್ನ 138 ಪ್ರಾಂತೀಯ ಕಚೇರಿಗಳ ಮೂಲಕ ಫಲಾನುಭವಿಗಳ ಖಾತೆಯೇ ಪಿಂಚಣಿ ಹಣವನ್ನು ವರ್ಗಾಯಿಸುತ್ತದೆ. ಇದರಿಂದ ಲಾಭಾರ್ಥಿಗಳಿಗೆ ವಿವಿಧ ದಿನ ಮತ್ತು ಸಮಯಾನುಸಾರ ಪಿಂಚಣಿ ಹಣ ಪಾವತಿಯಾಗುತ್ತದೆ.  ಜುಲೈ 29 ಮತ್ತು 30 ರಂದು ನಡೆಯಲಿರುವ ಇಪಿಎಫ್‌ಒನ ಅಪೆಕ್ಸ್ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳ (ಸಿಬಿಟಿ) ಸಭೆಯಲ್ಲಿ ಕೇಂದ್ರ ಪಿಂಚಣಿ ವಿತರಣಾ ವ್ಯವಸ್ಥೆಯ ರಚನೆಯ ಪ್ರಸ್ತಾಪವನ್ನು ಮಂಡಿಸಲಾಗುತ್ತಿದೆ ಎಂದು ಮೂಲವೊಂದು ಪಿಟಿಐಗೆ ಮಾಹಿತಿ ನೀಡಿದೆ.


ಇದನ್ನೂ ಓದಿ-Income Tax : ನೀವು  ₹10 ಲಕ್ಷ ಗಳಿಸಿದರೂ ತೆರಿಗೆ ಪಾವತಿಸಬೇಕಾಗಿಲ್ಲ, ITR ಸಲ್ಲಿಸುವ ಮೊದಲು ಈ ಲೆಕ್ಕಾಚಾರ ನೋಡಿ!


ಈ ವ್ಯವಸ್ಥೆ ಜಾರಿಗೆ ಬಂದ ನಂತರ 138 ಪ್ರಾದೇಶಿಕ ಕಚೇರಿಗಳ ಡೇಟಾಬೇಸ್ ಆಧಾರದ ಮೇಲೆ ಪಿಂಚಣಿ ವಿತರಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ 73 ಲಕ್ಷ ಪಿಂಚಣಿದಾರರಿಗೆ ಏಕಕಾಲಕ್ಕೆ ಪಿಂಚಣಿ ಸಿಗಲಿದೆ. ಪ್ರಸ್ತುತ ಎಲ್ಲಾ ಪ್ರಾದೇಶಿಕ ಕಚೇರಿಗಳು ತಮ್ಮ ಪ್ರದೇಶದ ಪಿಂಚಣಿದಾರರ ಅಗತ್ಯಗಳನ್ನು ವಿಭಿನ್ನವಾಗಿ ನಿಭಾಯಿಸುತ್ತವೆ. ಇದರೊಂದಿಗೆ, ಪಿಂಚಣಿದಾರರು ವಿವಿಧ ದಿನಗಳಲ್ಲಿ ಪಿಂಚಣಿ ಪಾವತಿಯಾಗುತ್ತದೆ.


ಇದನ್ನೂ ಓದಿ- New Tyre Design: ವಾಹನ ಸವಾರರಿಗೊಂದು ಕೆಲಸದ ಸುದ್ದಿ, ಅಕ್ಟೋಬರ್ 1 ರಿಂದ ಬದಲಾಗಲಿವೆ ನಿಮ್ಮ ವಾಹನಗಳ ಟೈರ್


ಯೋಜನೆ ಏನು?
ನವೆಂಬರ್ 20, 2021 ರಂದು ನಡೆದ CBT ಯ 229 ನೇ ಸಭೆಯಲ್ಲಿ, C-DAC ಮೂಲಕ ಕೇಂದ್ರೀಕೃತ IT ಆಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆಯನ್ನು ಟ್ರಸ್ಟಿಗಳು ಅನುಮೋದಿಸಿದ್ದಾರೆ. ನಂತರ ಪ್ರಾದೇಶಿಕ ಕಚೇರಿಗಳ ವಿವರಗಳನ್ನು ಹಂತ ಹಂತವಾಗಿ ಕೇಂದ್ರ ಡೇಟಾಬೇಸ್‌ಗೆ ವರ್ಗಾಯಿಸಲಾಗುವುದು ಎಂದು ಸಭೆಯ ನಂತರ ಕಾರ್ಮಿಕ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು. ಇದು ಸೇವೆಗಳ ಕಾರ್ಯಾಚರಣೆ ಮತ್ತು ವಿತರಣೆಯನ್ನು ಸುಲಭಗೊಳಿಸಲಿದೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.