ಎಫ್ಡಿ ಮೇಲೆ ಶೇ. 9 ರಷ್ಟು ಬಡ್ಡಿ ಬೇಕೆ? ಇಂದೇ ಈ ಬ್ಯಾಂಕ್ ಗಳಲ್ಲಿ ಹಣ ಹೂಡಿಕೆ ಮಾಡಿ!
Good News For Investors: ಬ್ಯಾಂಕ್ ಗಳಲ್ಲಿ ನೀವು ಮಾಡುವ ಸ್ಥಿರ ಠೇವಣಿಯ ಮೇಲೆ ನಿಮಗೂ ಕೂಡ ಉತ್ತಮ ಬಡ್ಡಿ ಬೇಕಾದರೆ, ಈ ಸುದ್ದಿಯನ್ನು ತಪ್ಪದೆ ಓದಿ. ಹೌದು, ಇದಕ್ಕಾಗಿ, ಎಲ್ಲಾ ಸರ್ಕಾರಿ ಹೂಡಿಕೆ ಯೋಜನೆಗಳ ಹೊರತಾಗಿ, ನೀವು ಎಫ್‌ಡಿಯಲ್ಲಿ ಹೂಡಿಕೆ ಮಾಡಬಹುದು. (Business News In Kannada)
ಬೆಂಗಳೂರು: ಬ್ಯಾಂಕ್ ಗಳಲ್ಲಿ ನೀವು ಮಾಡುವ ಸ್ಥಿರ ಠೇವಣಿಯ ಮೇಲೆ ನಿಮಗೂ ಕೂಡ ಉತ್ತಮ ಬಡ್ಡಿ ಬೇಕಾದರೆ, ಈ ಸುದ್ದಿಯನ್ನು ತಪ್ಪದೆ ಓದಿ. ಹೌದು, ಇದಕ್ಕಾಗಿ, ಎಲ್ಲಾ ಸರ್ಕಾರಿ ಹೂಡಿಕೆ ಯೋಜನೆಗಳ ಹೊರತಾಗಿ, ನೀವು ಎಫ್‌ಡಿಯಲ್ಲಿ ಹೂಡಿಕೆ ಮಾಡಬಹುದು. ಎಫ್‌ಡಿಯಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಮಾರ್ಗಗಳಲ್ಲಿ ಒಂದಾಗಿದೆ. ಎಫ್ಡಿಯಲ್ಲಿ ನೀವು ಮಾಡುವ ಹೂಡಿಕೆಗೆ ಬ್ಯಾಂಕುಗಳು ವಿವಿಧ ರೀತಿಯಲ್ಲಿ ಬಡ್ಡಿಯನ್ನು ಪಾವಟಿಸುತ್ತವೆ. ಕಳೆದ ಒಂದು ವರ್ಷದಲ್ಲಿ ಆರ್‌ಬಿಐ ರೆಪೊ ದರವನ್ನು 250 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಇದಾದ ಬಳಿಕ ಬ್ಯಾಂಕ್‌ಗಳು ಕೂಡ ವೇಗವಾಗಿ ಬಡ್ಡಿದರವನ್ನು ಹೆಚ್ಚಿಸಿವೆ. ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು ನೀಡುವ ಬಡ್ಡಿದರಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. (Business News In Kannada)
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶೇ. 4 ರಿಂದ ಶೇ. 8.60 ವರೆಗೆ ವಾರ್ಷಿಕ ಬಡ್ಡಿ ದರವನ್ನು ನೀಡುತ್ತದೆ. ಎರಡರಿಂದ ಮೂರು ವರ್ಷಗಳ ಅವಧಿಗೆ ಬ್ಯಾಂಕ್‌ನಿಂದ 8.60% ಹೆಚ್ಚಿನ ಬಡ್ಡಿ ದರವನ್ನು ನೀಡುತ್ತಿದೆ. ಬ್ಯಾಂಕ್ ಆಗಸ್ಟ್ 7, 2023 ರಿಂದ ಹೊಸ ದರಗಳನ್ನು ಜಾರಿಗೆ ಬಂದಿವೆ.
ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ 7 ದಿನಗಳಿಂದ 10 ವರ್ಷಗಳ ಅವಧಿಯ ಎಫ್ಡಿ ಯೋಜನೆಗಳನ್ನು ನಡೆಸುತ್ತದೆ. ಬ್ಯಾಂಕ್ ವಿವಿಧ ಅವಧಿಯ ಎಫ್ಡಿ ಹೂಡಿಕೆಗಳ ಮೇಲೆ ಶೇ. 4.50 ರಿಂದ ಶೇ. 9 ರವರೆಗೆ ಬಡ್ಡಿದರಗಳನ್ನು ನೀಡುತ್ತಿದೆ. ಬ್ಯಾಂಕ್ 1001 ದಿನಗಳ ಅವಧಿಗೆ ಶೇಕಡಾ 9 ರ ಬಡ್ಡಿದರವನ್ನು ನೀಡುತ್ತಿದೆ. ಇದೇ ವೇಳೆ, 1002 ದಿನಗಳಿಂದ 3 ವರ್ಷಗಳವರೆಗಿನ ಅವಧಿಗೆ 7.65 ಶೇಕಡಾ ಬಡ್ಡಿ ದರ ಲಭ್ಯವಿದೆ.
ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ ನೀವು 7 ದಿನಗಳಿಂದ 10 ವರ್ಷಗಳವರೆಗೆ ಎಫ್‌ಡಿ ಮಾಡಬಹುದು. ಇಲ್ಲಿ ಶೇ.3 ರಿಂದ ಶೇ.8.61 ರವರೆಗಿನ ಬಡ್ಡಿದರಗಳನ್ನು ನೀಡಲಾಗುತ್ತಿದೆ. ಬ್ಯಾಂಕ್ 750 ದಿನಗಳ ಅಂದರೆ ಸುಮಾರು ಎರಡು ವರ್ಷಗಳ ಎಫ್‌ಡಿಯಲ್ಲಿ ಶೇಕಡಾ 8.61 ಬಡ್ಡಿದರವನ್ನು ನೀಡುತ್ತಿದೆ. ಇದೇ ವೇಳೆ, 751 ದಿನಗಳಿಂದ ಎರಡೂವರೆ ವರ್ಷಗಳವರೆಗಿನ ಎಫ್ದಿಗಳ ಮೇಲೆ 8.15 ಶೇಕಡಾ ಬಡ್ಡಿ ಲಭ್ಯವಿದೆ. ಈ ದರಗಳು ಅಕ್ಟೋಬರ್ 28, 2023 ರಿಂದ ಅನ್ವಯಿಸುತ್ತವೆ.
ಇದನ್ನೂ ಓದಿ-ದೇಶದ ಸಾರ್ವಜನಿಕ ವಲಯದ ಈ ಬ್ಯಾಂಕ್ ಜೊತೆ ಕೈಜೋಡಿಸಿ ಕೈತುಂಬಾ ಸಂಪಾದನೆ ಮಾಡಿ!
ಈಎಸ್ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 10 ವರ್ಷಗಳವರೆಗಿನ ಎಫ್ಡಿ ಗಳಿಗೆ 8.50 ಶೇಕಡಾ ಬಡ್ಡಿಯನ್ನು ನೀಡುತ್ತದೆ. 8.50 ರಷ್ಟು ಬಡ್ಡಿ ದರವು ಎರಡು ವರ್ಷಗಳಿಗಿಂತ ಹೆಚ್ಚು ಮತ್ತು ಮೂರು ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್ಡಿಗಳಲ್ಲಿ ಲಭ್ಯವಿದೆ. ಈ ದರಗಳನ್ನು ಬ್ಯಾಂಕ್ ಏಪ್ರಿಲ್ 14, 2023 ರಂದು ಜಾರಿಗೆ ತಂದಿದೆ.
ಇದನ್ನೂ ಓದಿ-ಅಂಚೆ ಕಚೇರಿಯ ಈ ಯೋಜನೆಯಲ್ಲಿ ಒಂದು ಬಾರಿ ಹೂಡಿಕೆ ಮಾಡಿ ತಿಂಗಳಿಗೆ ನಿಶ್ಚಿತ ಆದಾಯ ಪಡೆಯಿರಿ, ಇಲ್ಲಿದೆ ಲೆಕ್ಕಾಚಾರ!
ಜನಾ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶೇ. 3 ರಿಂದ ಶೇ.8.50 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಈ ಬಡ್ಡಿದರವನ್ನು ವಿವಿಧ ಅವಧಿಗಳಿಗೆ ಅನುಗುಣವಾಗಿ ನೀಡಲಾಗುತ್ತದೆ. ಜನಾ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ, ಎರಡರಿಂದ ಮೂರು ವರ್ಷಗಳವರೆಗೆ ಪಕ್ವವಾಗುವ ಎಫ್ಡಿಗಳ ಮೇಲಿನ ಬಡ್ಡಿ ದರವು ಶೇ. 8.5 ರಷ್ಟಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ