Vedanta Dividends: ಲೋಹದ ವಲಯದ ಪ್ರಮುಖ ಕಂಪನಿಯಾದ ವೇದಾಂತ ಲಿಮಿಟೆಡ್ ಹೂಡಿಕೆದಾರರಿಗೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. 2024-25ರ ಹಣಕಾಸು ವರ್ಷಕ್ಕೆ ಪ್ರತಿ ಈಕ್ವಿಟಿ ಷೇರಿಗೆ 8.5 ರೂ.ನ ನಾಲ್ಕನೇ ಮಧ್ಯಂತರ ಲಾಭಾಂಶ(Dividend)ವನ್ನು ಕಂಪನಿಯ ಮಂಡಳಿ ಸೋಮವಾರ ಅನುಮೋದಿಸಿದೆ. ಈ ಘೋಷಣೆಯ ನಂತರ ಕಂಪನಿಯು 3,324 ಕೋಟಿ ರೂ.ಗಳ Dividendಅನ್ನು ತನ್ನ ಹೂಡಿಕೆದಾರರಿಗೆ ಪಾವತಿಸಲಿದೆ. ವೇದಾಂತ ತನ್ನ ವಿನಿಮಯ ದಾಖಲಾತಿಯಲ್ಲಿ ಈ ಮಾಹಿತಿಯನ್ನು ನೀಡಿದೆ. ವರದಿಯ ಪ್ರಕಾರ, ಡಿವಿಡೆಂಡ್ ಪಾವತಿಯ ದಿನಾಂಕವನ್ನು ಇದೇ ಡಿಸೆಂಬರ್ 24 ಎಂದು ನಿಗದಿಪಡಿಸಲಾಗಿದೆ.


COMMERCIAL BREAK
SCROLL TO CONTINUE READING

ಪ್ರತಿ ಈಕ್ವಿಟಿ ಷೇರಿಗೆ 1 ರೂ.ನ ಮುಖಬೆಲೆಯ ಮೇಲೆ ಲಾಭಾಂಶ


ವರದಿಯ ಪ್ರಕಾರ, ವೇದಾಂತ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಯು ಇದೇ ಡಿಸೆಂಬರ್ 16ರಂದು ನಡೆದ ಸಭೆಯಲ್ಲಿ 2024-25ರ ಆರ್ಥಿಕ ವರ್ಷಕ್ಕೆ 1 ರೂ. ಮುಖಬೆಲೆಯ ಪ್ರತಿ ಇಕ್ವಿಟಿ ಷೇರಿಗೆ 8.5 ರೂ. ನಾಲ್ಕನೇ ಮಧ್ಯಂತರ ಲಾಭಾಂಶವನ್ನು ಅನುಮೋದಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಬರೋಬ್ಬರಿ 3,324 ಕೋಟಿ ರೂ.ನ ಲಾಭಾಂಶವನ್ನು ನಿಗದಿತ ದಿನಾಂಕದೊಳಗೆ ವಿತರಿಸಲಾಗುವುದು. ವೇದಾಂತವು ಸ್ಥಿರವಾದ ಮತ್ತು ಹೆಚ್ಚಿನ ಲಾಭಾಂಶವನ್ನು ಪಾವತಿಸಲು ಹೆಸರುವಾಸಿಯಾಗಿದೆ. ಕಳೆದ 12 ತಿಂಗಳುಗಳಲ್ಲಿ ವೇದಾಂತವು ಪ್ರತಿ ಷೇರಿಗೆ ₹46 ಲಾಭಾಂಶವನ್ನು ಘೋಷಿಸಿದೆ, ಇದರ ಪರಿಣಾಮವಾಗಿ 8.96% ಲಾಭಾಂಶ ಇಳುವರಿ ಬಂದಿದೆ.


ಇದನ್ನೂ ಓದಿ: ಮನೆಯಿಂದಲೇ ಕೆಲಸ... ಜೀವನಪೂರ್ತಿ ಉಳಿಯುವ ಏಕೈಕ ಬ್ಯುಸಿನೆಸ್‌! ಇದು ಅತಿ ಕಡಿಮೆ ಬಂಡವಾಳದಲ್ಲಿ ತಿಂಗಳಿಗೆ 1 ಲಕ್ಷಕ್ಕೂ ಹೆಚ್ಚು ಲಾಭ ನೀಡುವ ಉದ್ಯಮ


ಈ ವರ್ಷ ಯಾವಾಗ ಡಿವಿಡೆಂಟ್‌ ಘೋಷಿಸಲಾಗಿತ್ತು?


ಪ್ರಸಕ್ತ ಹಣಕಾಸು ವರ್ಷದಲ್ಲಿ ಕಂಪನಿಯು ಮೇ ತಿಂಗಳಲ್ಲಿ ₹11, ಆಗಸ್ಟ್‌ನಲ್ಲಿ ₹4 ಮತ್ತು ಸೆಪ್ಟೆಂಬರ್‌ನಲ್ಲಿ ₹20 ಮಧ್ಯಂತರ ಲಾಭಾಂಶವನ್ನು ಘೋಷಿಸಿತ್ತು. ವರದಿಯ ಪ್ರಕಾರ, ಜುಲೈ 2001ರಿಂದ ಇಲ್ಲಿಯವರೆಗೆ ಕಂಪನಿಯು 46 ರೂ. ಲಾಭಾಂಶ ಘೋಷಿಸಿದೆ. ಅನಿಲ್ ಅಗರ್ವಾಲ್ ನೇತೃತ್ವದ ವೇದಾಂತ ಇತ್ತೀಚಿನ ದಿನಗಳಲ್ಲಿ ಹೂಡಿಕೆದಾರರಿಗೆ ಅತ್ಯುತ್ತಮ ಆದಾಯವನ್ನು ನೀಡಿದೆ. ಈ ಷೇರು ಒಂದು ವರ್ಷದಲ್ಲಿ ಶೇ.97ರಷ್ಟು ಲಾಭ ಗಳಿಸಿದ್ದರೆ, ಕಳೆದ ಆರು ತಿಂಗಳಲ್ಲಿ ಶೇ.15ರಷ್ಟು ಏರಿಕೆ ಕಂಡಿದೆ. ಲಾಭಾಂಶ ಘೋಷಣೆಗೂ ಮುನ್ನವೇ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್‌ನಲ್ಲಿ (BSE) ವೇದಾಂತ ಷೇರು ಬೆಲೆ ಶೇ.1.21ರಷ್ಟು ಇಳಿಕೆಯಾಗಿ 513.40 ರೂ.ನಂತೆ ವಹಿವಾಟು ನಡೆಸುತ್ತಿದೆ.


ಅನಿಲ್ ಅಗರ್ವಾಲ್ ನೇತೃತ್ವದ ವೇದಾಂತ ಇತ್ತೀಚಿನ ದಿನಗಳಲ್ಲಿ ಹೂಡಿಕೆದಾರರಿಗೆ ಪ್ರಭಾವಶಾಲಿ ಆದಾಯವನ್ನು ನೀಡಿದೆ. ಈ ಸ್ಟಾಕ್ ಒಂದು ವರ್ಷದಲ್ಲಿ ಶೇ.97ರಷ್ಟು ಗಳಿಸಿದೆ, ಆದರೆ ಕಳೆದ ಆರು ತಿಂಗಳಲ್ಲಿ ಅದು ಶೇ.15ರಷ್ಟು ಏರಿಕೆ ಕಂಡಿದೆ.


ಇದನ್ನೂ ಓದಿ: ಏಕಾಏಕಿ ಇಳಿದ ಚಿನ್ನದ ಬೆಲೆ !ಈ ಮಹತ್ತರ ಸಭೆಯೇ ದರ ಇಳಿಕೆಗೆ ಮೂಲ ಕಾರಣ !ಇನ್ನು ಬೆಲೆ ಏರುವುದು ಡೌಟ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.