ನವದೆಹಲಿ: ಕೇಂದ್ರ ಸರ್ಕಾರವು ಇದೀಗ ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ’(PM Shram Yogi Mandhan Yojana)ಅಡಿಯಲ್ಲಿ ಕಾರ್ಮಿಕರಿಗೆ ಪಿಂಚಣಿ ನೀಡಲಿದೆ. ಇದು ಅಸಂಘಟಿತ ವಲಯದ ಕಾರ್ಮಿಕರಿಗೆ ಉತ್ತಮ ಯೋಜನೆಯಾಗಿದ್ದು, ಇದರಡಿ ಬೀದಿಬದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಜನರು ತಮ್ಮ ವೃದ್ಧಾಪ್ಯದಲ್ಲಿ ಆರ್ಥಿಕ  ಸಹಾಯ ಪಡೆಯುತ್ತಾರೆ. ಈ ಯೋಜನೆಯಡಿ ಕಾರ್ಮಿಕರಿಗೆ ಪಿಂಚಣಿಯನ್ನು ಸರ್ಕಾರ ಖಾತರಿಪಡಿಸುತ್ತದೆ. ಈ ಯೋಜನೆಯಲ್ಲಿ ದಿನಕ್ಕೆ ಕೇವಲ 2 ರೂ.ಗಳನ್ನು ಉಳಿಸುವ ಮೂಲಕ ನೀವು ವಾರ್ಷಿಕವಾಗಿ 36,000 ರೂ.ಗಳ ಪಿಂಚಣಿ ಪಡೆಯಬಹುದು.


COMMERCIAL BREAK
SCROLL TO CONTINUE READING

ಈ ಯೋಜನೆ(PM-SYM Benefits)ಪ್ರಾರಂಭಿಸಿದರೆ ನೀವು ಪ್ರತಿ ತಿಂಗಳು 55 ರೂ.ಗಳನ್ನು ಠೇವಣಿ ಮಾಡಬೇಕಾಗುತ್ತದೆ. ಅಂದರೆ 18ನೇ ವಯಸ್ಸಿನಲ್ಲಿ ದಿನಕ್ಕೆ ಸುಮಾರು 2 ರೂ.ಗಳನ್ನು ಉಳಿಸುವ ಮೂಲಕ ನೀವು ವಾರ್ಷಿಕವಾಗಿ 36,000 ರೂ.ಗಳ ಪಿಂಚಣಿ ಪಡೆಯಬಹುದು. ಒಬ್ಬ ವ್ಯಕ್ತಿಯು 40 ವರ್ಷ ವಯಸ್ಸಿನಿಂದ ಈ ಯೋಜನೆಯನ್ನು ಪ್ರಾರಂಭಿಸಿದರೆ ಪ್ರತಿ ತಿಂಗಳು 200 ರೂ. ಜಮಾ ಮಾಡಬೇಕಾಗುತ್ತದೆ. ಆಗ ನೀವು 60 ವರ್ಷ ವಯಸ್ಸಿನ ನಂತರ ಪಿಂಚಣಿ ಪಡೆಯಲು ಪ್ರಾರಂಭಿಸುತ್ತೀರಿ. 60 ವರ್ಷಗಳ ನಂತರ ನೀವು ತಿಂಗಳಿಗೆ 3,000 ರೂ. ಅಂದರೆ ವರ್ಷಕ್ಕೆ 36,000 ರೂ.  ಪಿಂಚಣಿ ಪಡೆಯುತ್ತೀರಿ.


ಇದನ್ನೂ ಓದಿ: Cooperative Scheme : ಈ 16 ಬ್ಯಾಂಕ್‌ ಖಾತೆದಾರರಿಗೆ ಸಿಗಲಿದೆ ₹5 ಲಕ್ಷ ಪ್ರಯೋಜನ : ಈ ಲಾಭ ಪಡೆಯಲು ಈ ಕೆಲಸ ಮಾಡಿ


ಈ ಯೋಜನೆಯ ಲಾಭ(PM-SYM Eligibility) ಪಡೆಯಲು ನೀವು ಉಳಿತಾಯ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು. ವ್ಯಕ್ತಿಯ ವಯಸ್ಸು 18 ವರ್ಷಕ್ಕಿಂತ ಕಡಿಮೆಯಿರಬಾರದು ಮತ್ತು 40 ವರ್ಷಕ್ಕಿಂತ ಹೆಚ್ಚಿರಬಾರದು. ಇದಕ್ಕಾಗಿ ನೀವು ಸಾಮಾನ್ಯ ಸೇವಾ ಕೇಂದ್ರದಲ್ಲಿ (ಸಿಎಸ್‌ಸಿ) ಯೋಜನೆಗಾಗಿ ನೋಂದಾಯಿಸಿಕೊಳ್ಳಬೇಕು. ಸಿಎಸ್‌ಸಿ ಕೇಂದ್ರದಲ್ಲಿನ ಪೋರ್ಟಲ್‌ನಲ್ಲಿ ಕೆಲಸಗಾರರು ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ಈ ಯೋಜನೆಗಾಗಿ ಸರ್ಕಾರ ವೆಬ್ ಪೋರ್ಟಲ್ ಅನ್ನು ಸಹ ರೂಪಿಸಿದೆ. ಈ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿರುವ ಎಲ್ಲಾ ಮಾಹಿತಿಯು ಭಾರತ ಸರ್ಕಾರಕ್ಕೆ ಹೋಗುತ್ತದೆ.


ನೋಂದಣಿಗಾಗಿ ನಿಮಗೆ ನಿಮ್ಮ ಆಧಾರ್ ಕಾರ್ಡ್, ಉಳಿತಾಯ ಅಥವಾ ಜನ್ ಧನ್ ಬ್ಯಾಂಕ್ ಖಾತೆಯ ಪಾಸ್‌ಬುಕ್, ಮೊಬೈಲ್ ಸಂಖ್ಯೆ ಅಗತ್ಯವಿದೆ. ಇದಲ್ಲದೆ ಕಾರ್ಮಿಕರು ಖಾತೆಯನ್ನು ಹೊಂದಿರುವ ಬ್ಯಾಂಕ್ ಶಾಖೆಯಲ್ಲಿ ಒಪ್ಪಿಗೆ ಪತ್ರವನ್ನು ನೀಡಬೇಕಾಗುತ್ತದೆ. ಇದರಿಂದಾಗಿ ಅವರ ಬ್ಯಾಂಕ್ ಖಾತೆಯಿಂದ ಪಿಂಚಣಿಗಾಗಿ ಹಣವನ್ನು ಸಕಾಲದಲ್ಲಿ ಕಡಿತಗೊಳಿಸಬಹುದು.


ಮಾಸಿಕ ಆದಾಯ 15 ಸಾವಿರ ರೂ.ಗಿಂತ ಕಡಿಮೆಯಿರಬೇಕು


 ಯಾವುದೇ ಅಸಂಘಟಿತ ವಲಯದ ಕಾರ್ಮಿಕರ ವಯಸ್ಸು 40 ವರ್ಷಕ್ಕಿಂತ ಕಡಿಮೆ ಮತ್ತು ಯಾವುದೇ ಸರ್ಕಾರಿ ಯೋಜನೆಯ ಪ್ರಯೋಜನ ಪಡೆಯದಿರುವವರು ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಪಿಂಚಣಿ ಯೋಜನೆ’(PM-SYM Yojana)ಯ ಲಾಭ ಪಡೆಯಬಹುದು. ವಿಶೇಷವಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸುವ ವ್ಯಕ್ತಿಯ ಮಾಸಿಕ ಆದಾಯವು 15 ಸಾವಿರ ರೂ.ಗಿಂತ ಕಡಿಮೆಯಿರಬೇಕು.


ಇದನ್ನೂ ಓದಿ: LPG Price today : LPG ದರ ಹೆಚ್ಚಳ , ತಿಂಗಳ ಮೊದಲ ದಿನವೇ ಬೆಲೆ ಏರಿಕೆ ಬಿಸಿ


ಈ ಯೋಜನೆಗಾಗಿ ಕಾರ್ಮಿಕ ಇಲಾಖೆಯ ಕಚೇರಿ, ಎಲ್ಐಸಿ, ಇಪಿಎಫ್ಒಗಳನ್ನು ಸರ್ಕಾರವು ಶ್ರಮಿಕ್ ಫೆಸಿಲಿಟೇಶನ್ ಸೆಂಟರ್ ಮಾಡಲಾಗಿದೆ. ಇಲ್ಲಿಗೆ ಹೋಗುವ ಮೂಲಕ ಕಾರ್ಮಿಕರು ಯೋಜನೆಯ ಬಗ್ಗೆ ಮಾಹಿತಿ ಪಡೆಯಬಹುದು. ಯೋಜನೆಗಾಗಿ ಸರ್ಕಾರವು ಟೋಲ್-ಫ್ರೀ ಸಂಖ್ಯೆ 18002676888 ನೀಡಿದೆ. ಈ ಸಂಖ್ಯೆಗೆ ಕರೆ ಮಾಡುವ ಮೂಲಕ ನೀವು ಯೋಜನೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.